Price Hike : ಟೊಮ್ಯಾಟೊ ಆಯ್ತು ಈಗ  ಕಾಫಿಪುಡಿ ಸರದಿ.. ಮುಂದಿನ ದಿನಗಳಲ್ಲಿ ಕಾಫಿ ಕುಡಿಯೋದೇ ಕಷ್ಟವಾಗಲಿದೆ ಅನ್ನೋ ಚಿತ್ರಣ ರೆಡಿ ಆಗಿದೆ..500 ರೂಪಾಯಿ ಗಡಿದಾಟಿದ ಒಂದು ಕೆ.ಜಿ ಕಾಫಿ ಪುಡಿ ಮುಂದಿನ ದಿನಗಳಲ್ಲಿ ಕಾಫಿ ರೇಟ್ ಹೆಚ್ಚಳದ ಚಿಂತನೆ ಎಂದ ಹೋಟೆಲ್ ಮಾಲೀಕರು. ಕೆಲವರಿಗೆ ಮೂಡ್ ಆನ್ ಆಗಬೇಕಂದ್ರು, ತಲೆ ಓಡಬೇಂಕದ್ರು ಒಂದು ಲೋಟ ಕಾಫಿ ಇರಲೇಬೇಕು.


COMMERCIAL BREAK
SCROLL TO CONTINUE READING

ಅದ್ರಲ್ಲೂ ಈಗಂತೂ ಮಳೆಗಾಲ ಒಂದು ಸ್ಟ್ರಾಂಗ್ ಕಾಫಿ ಬಿಸಿಬಿಸಿಯಾಗಿಡಲು ಬೇಕು. ಆದ್ರೇ ಈ ಕಾಫಿ ನಿಮ್ಮ ಜೇಬಿಗೆ ಕತ್ತರಿಹಾಕಬಹುದು. ಕಾಫಿ ಧಾರಣೆ ಕಳೆದ ಒಂದು ತಿಂಗಳಿನಿಂದ ಏರು ಗತಿಯಲ್ಲಿದ್ದು, ಕಾಫಿ ಬೆಲೆ ದಿನದಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೆ.ಜಿಗೆ 200 ರೂ-300 ರೂಪಾಯಿ ಇದ್ದ ಕಾಫಿಬೆಲೆ ಈಗ ಕೆ.ಜಿಗೆ 600 ರೂಪಾಯಿ ಆಗಿದೆ.ಒಂದೊಂದು ಬ್ರಾಂಡ್ ದ್ದು ಬೆಲೆ ಬೇರೆ ಬೇರೆಯಾಗಿದೆ. ಇನ್ನೂ ಕಾಫಿಗೆ ಹಾಕೋ ಚಕೋತಾ ಬೆಲೆಯೂ ಏರಿಕೆಯಾಗಿದೆ.


ಇದನ್ನೂ ಓದಿ-ಮೂರು ಜ್ಯೋತಿಗಳಿಗೆ ಬಂಪರ್ ! ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ನೇರ ಲಾಭ


ಹವಾಮಾನ ವೈಪರೀತ್ಯ, ವಿದೇಶಗಳಲ್ಲಿ ಕಾಫಿ ಉತ್ಪನ್ನ ಕೊರತೆಯಿಂದ ದರ ಏರಿಕೆಯಾಗಿದೆ. ಇನ್ನೂ ಈಗ ಮಳೆಯಾಗುತ್ತಿರೋದ್ರಿಂದ ಕಾಫಿ ಹೂ,ಬೀಜ ಅಷ್ಟಾಗಿ ಬರುತ್ತಿಲ್ಲ. ಇನ್ನೂ ಕಾಫಿ ಬೆಲೆ ಇದೇ ರೀತಿ ಏರಿಕೆಯಾದ್ರೇ ಕಾಫಿ ಮಾಡಿ ಗ್ರಾಹಕರಿಗೆ ಈಗಿರುವ ಬೆಲೆಯಲ್ಲಿ ಮಾರಾಟ ಮಾಡೋದು ಕಷ್ಟವಾಗುತ್ತದೆ.


ಅನಿವಾರ್ಯವಾಗಿ ಕಾಫಿ ಬೆಲೆ ಹೆಚ್ಚಿಸಬೇಕಾಗುತ್ತದೆ ಅಂತಾ ಹೋಟೆಲ್ ಮಾಲೀಕರು ಹೇಳಿದ್ದಾರಒಟ್ನಲ್ಲಿ ಒಂದಿನ ತರಕಾರಿ ದರ ಏರಿಕೆ, ಒಂದಿನ ಮಾಂಸದ ದರ ಏರಿಕೆ, ಒಂದಿನ ಮೀನಿನ  ದರ ಏರಿಕೆ..  ಹಣ್ಣಿನ ದರ ಏರಿಕೆ ಹೀಗೆ ದರ ಏರಿಕೆಯ ಬಿಸಿ ಜನ ಸಾಮಾನ್ಯರ ಮೇಲೆ ತಟ್ಟುತ್ತಲೇ ಇದೆ..


ಇದನ್ನೂ ಓದಿ-ಬರಗಾಲ ಘೋಷಣೆ ಮಾಡಿ, ಪ್ರತಿ ಕ್ಷೇತ್ರಕ್ಕೂ 1 ಕೋಟಿ ಅನುದಾನ ನೀಡಿ: ಬಸವರಾಜ ಬೊಮ್ಮಾಯಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.