ಕರ್ನಾಟಕದಲ್ಲಿ ಜಯಭೇರಿ ಬೆನ್ನಲ್ಲೇ `ಪಂಚ ರಾಜ್ಯಗಳ` ಮೇಲೆ ಕಾಂಗ್ರೆಸ್ ಕಣ್ಣು!
Congress Five States Target: ಸದ್ಯ ಕರ್ನಾಟಕದಲ್ಲಿ ಭರ್ಜರಿ ಬಹುಮತ ಸಾಧಿಸಿರುವ ಕಾಂಗ್ರೆಸ್‌ನ ಮುಂದಿನ ಹಾದಿ ಅಷ್ಟು ಸುಲಭವಿಲ್ಲ. 5 ರಾಜ್ಯಗಳ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ 2024ರ ಲೋಕಸಭಾ ಚುನಾವಣೆಯಲ್ಲಿಯೂ ಕಮಾಲ್ ಮಾಡಲು ಯತ್ನಿಸುತ್ತಿದೆ. ಅದರ ಪಕ್ಷಿನೋಟ ಇಲ್ಲಿದೆ.
Congress Targets Five States: ಸತತ ಸೋಲುಗಳ ಅಥವಾ ಆಪರೇಷನ್ ಕಮಲದ ಮೂಲಕ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ವಿಧಾನಸಭಾ ಚುನಾವಣೆಗಳ ಗೆಲುವು ಹೊಸ ಹುಮ್ಮಸ್ಸು ನೀಡಿದೆ. ಅದರಲ್ಲಿಯೂ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ನಂತರ ಮತ್ತು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ನಂತರ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು, ಕಾಂಗ್ರೆಸ್ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಸದ್ಯ ಕರ್ನಾಟಕದಲ್ಲಿ ಭರ್ಜರಿ ಬಹುಮತ ಸಾಧಿಸಿರುವ ಕಾಂಗ್ರೆಸ್‌ನ ಮುಂದಿನ ಹಾದಿ ಅಷ್ಟು ಸುಲಭವಿಲ್ಲ. 5 ರಾಜ್ಯಗಳ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ 2024ರ ಲೋಕಸಭಾ ಚುನಾವಣೆಯಲ್ಲಿಯೂ ಕಮಾಲ್ ಮಾಡಲು ಯತ್ನಿಸುತ್ತಿದೆ. ಅದರ ಪಕ್ಷಿನೋಟ ಇಲ್ಲಿದೆ.
ಕರ್ನಾಟಕದಲ್ಲಿ ಜಯಭೇರಿ ಬೆನ್ನಲ್ಲೇ 'ಪಂಚ ರಾಜ್ಯಗಳ' ಮೇಲೆ ಕಾಂಗ್ರೆಸ್ ಕಣ್ಣು!
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿರುವ ಕಾಂಗ್ರೆಸ್ ಪಕ್ಷ 2023ರಲ್ಲಿ ನಡೆಯಲಿರುವ ಐದು ರಾಜ್ಯಗಳ ಚುನಾವ್ನೇಯಲ್ಲಿ ಇದೇ ಹುಮ್ಮಸ್ಸನ್ನು ಮುಂದುವರೆಸಲು ಪ್ರಯತ್ನಿಸುತ್ತಿದೆ. ಇದರ ಜೊತೆಗೆ 2024ರ ಲೋಕಸಭಾ ಚುನಾವಣೆಯಲ್ಲೂ ಕಮಾಲ್ ಮಾಡಲು ಕಾಂಗ್ರೆಸ್ ಯತ್ನಿಸುತ್ತಿದೆ. 2023ರಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳೆಂದರೆ:-
- 2023 ನವೆಂಬರ್ –ಡಿಸೆಂಬರ್: ಮಧ್ಯಪ್ರದೇಶ ಚುನಾವಣೆ
-2023 ನವೆಂಬರ್ – ಡಿಸೆಂಬರ್: ಛತ್ತೀಸ್‌ಘಡ ಚುನಾವಣೆ
- 2023 ನವೆಂಬರ್ – ಡಿಸೆಂಬರ್: ರಾಜಸ್ಥಾನ ಚುನಾವಣೆ
- 2023 ನವೆಂಬರ್ – ಡಿಸೆಂಬರ್: ತೆಲಂಗಾಣ ಚುನಾವಣೆ
- 2023 ನವೆಂಬರ್ – ಡಿಸೆಂಬರ್: ಮಿಜೋರಾಂ ಚುನಾವಣೆ
- ಕೇಂದ್ರಾಡಳಿತ ಜಮ್ಮು ಕಾಶ್ಮೀರ ಮತ್ತು ಲಡಾಖ್ ಚುನಾವಣೆ
ಮಧ್ಯಪ್ರದೇಶದಲ್ಲಿ ಗೆಲ್ಲುವ ತವಕ..?
- ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸಿ ಬಿಜೆಪಿ ಅಧಿಕಾರ
- ಬಿಜೆಪಿಯ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಜನಾಕ್ರೋಶ
- ಮಧ್ಯಪ್ರದೇಶದಲ್ಲಿಯೂ ಹೆಚ್ಚಾಗಿದೆ ಆಡಳಿತ ವಿರೋಧಿ ಅಲೆ ಇದೆ
- ಮಧ್ಯಪ್ರದೇಶದಲ್ಲಿಯೂ ಕಾಂಗ್ರೆಸ್ ಸ್ಪಷ್ಟ ಬಹುಮತದ ವಿಶ್ವಾಸ
23 ನವೆಂಬರ್ – ಡಿಸೆಂಬರ್: ಮಧ್ಯಪ್ರದೇಶ ಚುನಾವಣೆ:
2023ರ ನವೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರಳ ಬಹುಮತ ಪಡೆದಿತ್ತು.
ಒಟ್ಟು 230 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 114 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಎಸ್‌ಪಿ, ಸಮಾಜವಾದಿ ಪಕ್ಷ ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 116 ಸ್ಥಾನಗಳ ಬಹುಮತ ಸಾಧಿಸಿ ಕಮಲ್ ನಾಥ್ ನೇತೃತ್ವದಲ್ಲಿ ಸರ್ಕಾರ ರಚಿಸಿತು. ಆದರೆ ಒಂದೇ ವರ್ಷದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಬಣ ಆಪರೇಷನ್ ಕಮಲಕ್ಕೆ ಬಲಿಯಾದ ಪರಿಣಾಮ ಅಧಿಕಾರ ಕಳೆದುಕೊಳ್ಳಬೇಕಾಯಿತು. ಶಾಸಕರನ್ನು ಕೊಳ್ಳುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಸಿಎಂ ಆಗಿದ್ದಾರೆ. ಕರ್ನಾಟಕದಂತೆ ಮಧ್ಯಪ್ರದೇಶದಲ್ಲಿಯೂ ಆಡಳಿತ ವಿರೋಧಿ ಅಲೆ ಇದೆ. ಹಾಗಾಗಿ ಮಧ್ಯಪ್ರದೇಶದಲ್ಲಿಯೂ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸ ಹೊಂದಿದೆ.
ಇದನ್ನೂ ಓದಿ- ನಮ್ಮದು ನುಡಿದಂತೆ ನಡೆಯುವ ಸರ್ಕಾರ, ಕೊಟ್ಟ ಭರವಸೆ ಈಡೇರಿಸುತ್ತೇವೆ: ಸಿದ್ದರಾಮಯ್ಯ
ಛತ್ತೀಸ್‌ಗಢದಲ್ಲಿ ಹಸ್ತಕೇಕೆ..?
- 68 ಸ್ಥಾನ ಗೆದ್ದು ಭೂಪೇಶ್ ಬಾಘೇಲ್ ಸಿಎಂ
- ರಾಜ್ಯವಾದ ಬಳಿಕ ಬಿಜೆಪಿ 3 ಬಾರಿ ಸತತ ಗೆಲುವು
- ಬಿಜೆಪಿ ಓಟಕ್ಕೆ ಬ್ರೇಕ್ ಹಾಕಿ ಗೆದ್ದಿರೋ ಕಾಂಗ್ರೆಸ್
- ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ವ ಪ್ರಯತ್ನ
2023 ನವೆಂಬರ್ – ಡಿಸೆಂಬರ್: ಛತ್ತೀಸ್‌ಘಡ ಚುನಾವಣೆ:-
90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಛತೀಸ್‌ಘಡದಲ್ಲಿ ಇದೇ ನವೆಂಬರ್-ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 68 ಸ್ಥಾನಗಳಲ್ಲಿ ಗೆದ್ದು ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ,
ಭೂಪೇಶ್ ಭಾಘೇಲ್ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಛತ್ತೀಸ್‌ಘಡ ಸ್ವತಂತ್ರ ರಾಜ್ಯವಾದ ನಂತರ ಬಿಜೆಪಿ ಮೂರು ಬಾರಿ ಸತತವಾಗಿ ಗೆದ್ದುಬಂದಿತ್ತು. ಬಿಜೆಪಿ ಓಟಕ್ಕೆ ಬ್ರೇಕ್ ಹಾಕಿದ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಈ ವರ್ಷವೂ
ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ವ ಪ್ರಯತ್ನ ನಡೆಸಲಿದೆ.
ರಾಜಸ್ಥಾನದಲ್ಲಿ ಢವಢವ..?
- 2018ರಲ್ಲಿ ಫೀನಿಕ್ಸ್‌ನಂತೆ ಗೆದ್ದು ಕಾಂಗ್ರೆಸ್ 100 ಸ್ಥಾನ ಸಂಪಾದನೆ
- ಹಿರಿಯ ಅಶೋಕ್ ಗೆಹ್ಲೋಟ್ ಸಿಎಂ, ಸಚಿನ್ ಪೈಲಟ್ ಮಗ್ಗಲ ಮುಳ್ಳು
- ತಮ್ಮದೇ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪದಡಿ ಸಚಿನ್ ಪ್ರತಿಭಟನೆ
- ರಾಜ್ಯಾದ್ಯಂತ ಜನ ಸಂಘರ್ಷ್ ಯಾತ್ರೆ ಮೂಲಕ ಸಚಿನ್ ಪೈಲಟ್ ಕಂಪನ
- ಆಡಳಿತ ವಿರೋಧಿ ಅಲೆ, ರಾಜಸ್ಥಾನ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ
2023 ನವೆಂಬರ್ – ಡಿಸೆಂಬರ್: ರಾಜಸ್ಥಾನ ಚುನಾವಣೆ:-
200 ವಿಧಾನಸಭಾ ಕ್ಷೇತ್ರಗಳಿರುವ ರಾಜಸ್ಥಾನದಲ್ಲಿ ಸದ್ಯ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. 2018ರ ಚುನಾವಣೆಯಲ್ಲಿ ಫೀನಿಕ್ಸ್‌ನಂತೆ ಎದ್ದುಬಂದ ಕಾಂಗ್ರೆಸ್ ಬರೋಬ್ಬರಿ 100 ಸ್ಥಾನಗಳನ್ನು ಗೆಲ್ಲುವ ಮೂಲಕ, ಬಿಎಸ್‌ಪಿ, ಪಕ್ಷೇತರರನ್ನು
ಪಕ್ಷಕ್ಕೆ ಸೆಳೆದುಕೊಂಡು ಸರಳ ಬಹುಮತ ಸಾಧಿಸಿದೆ. ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿದ್ದರೆ, ಸಚಿನ್ ಪೈಲಟ್ ಅವರ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದಾರೆ. ತಾನು ಸಿಎಂ ಆಗಬೇಕೆಂದು ಹಠ ಹಿಡಿದಿದ್ದ ಸಚಿನ್ ಪೈಲಟ್ ಬಣ
ಕಟ್ಟಿಕೊಂಡು ಬ್ಲಾಕ್ ಮೇಲ್ ಮಾಡುತ್ತಲೇ ಇದ್ದಾರೆ. ಸದ್ಯ ತಮ್ಮದೇ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿರುವ ಅವರು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಜನ ಸಂಘರ್ಷ್ ಯಾತ್ರೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮೇಲೆ
ಆಡಳಿತ ವಿರೋಧಿ ಅಲೆ ಕೂಡ ಬೀಸುತ್ತಿದೆ. ಹಾಗಾಗಿ ಈ ಬಾರಿ ರಾಜಸ್ಥಾನ ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಕಷ್ಟಕರವಾಗಿದೆ. ಆದರೂ ಪ್ರಯತ್ನ ಮುಂದುವರೆಸಿದೆ.
ತೆಲಂಗಾಣದಲ್ಲಿ ಅಸ್ವಿತ್ವದ ಪ್ರಶ್ನೆ
- 63 ಸ್ಥಾನ ಗೆದ್ದು ಚಂದ್ರಶೇಖರ್ ರಾವ್ ಸಿಎಂ
- ರಾಜ್ಯಾದ್ಯಂತ ಬಿಜೆಪಿಯ ಸಂಘಟನೆ ಚುರುಕು
- ನಾಲ್ವರು ಟಿಆರ್‌ಎಸ್ ಶಾಸಕರನ್ನು ಸೆಳೆದ ಆರೋಪ
- ನೆಲೆ ಕಂಡುಕೊಳ್ಳಲು ಕಾಂಗ್ರೆಸ್ ಭಾರೀ ಯತ್ನ
2023 ನವೆಂಬರ್ – ಡಿಸೆಂಬರ್: ತೆಲಂಗಾಣ ಚುನಾವಣೆ ಆಂಧ್ರ ಪ್ರದೇಶ ರಾಜ್ಯದಿಂದ 2014ರಿಂದ ಬೇರ್ಪಟ್ಟಿರುವ ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿವೆ. ಬಹುಮತಕ್ಕೆ 60 ಸ್ಥಾನಗಳ ಅಗತ್ಯವಿದ್ದು 2014ರಲ್ಲಿ 63 ಸ್ಥಾನ ಗೆದ್ದಿದ್ದ ಕೆ.ಚಂದ್ರಶೇಖರ್ ರಾವ್‌ರವರ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು 2018ರಲ್ಲಿಯೂ ಸಹ 88 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ರಾಷ್ಟ್ರಮಟ್ಟಕ್ಕೆ ಪಕ್ಷ ವಿಸ್ತರಿಸಿರುವ ಕೆಸಿಆರ್ ಪಕ್ಷದ ಹೆಸರನ್ನು ಟಿಆರ್‌ಎಸ್ ಬದಲಿಗೆ ಬಿಆರ್‌ಎಸ್ ಎಂದು ಬದಲಿಸಿದ್ದಾರೆ. ಈಗ ನವೆಂಬರ್ ಡಿಸೆಂಬರ್‌ನಲ್ಲಿ ರಾಜ್ಯದ ಮೂರನೇ ಚುನಾವಣೆ ನಡೆಯಲಿದೆ. ಅಲ್ಲಿ ಬಿಜೆಪಿ ಪಕ್ಷ ವೇಗವಾಗಿ ಬೆಳಯುತ್ತಿದ್ದು, ಇತ್ತೀಚಿಗೆ ನಾಲ್ಕು ಜನ ಟಿಆರ್‌ಎಸ್ ಶಾಸಕರನ್ನು ಕೊಳ್ಳಲು ಹೋಗಿ ಸಿಕ್ಕಿಬಿದ್ದಿತ್ತು. ಕಾಂಗ್ರೆಸ್ ಪಕ್ಷ ಕೂಡ ಅಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ.
ಇದನ್ನೂ ಓದಿ- Photo Gellery: ಸಿಎಂ ಸಿದ್ದರಾಮಯ್ಯ ಸರ್ಕಾರದ ಮೊದಲ ಸಂಪುಟ ಸಭೆಯ ನಿರ್ಣಯಗಳು
ಮಿಜೋರಾಂ ಕೈ ಗೆಲ್ಲುತ್ತಾ?
- 40 ಕ್ಷೇತ್ರಗಳ ಈಶಾನ್ಯ ಭಾಗದ ಚಿಕ್ಕರಾಜ್ಯ
- ಸ್ಥಳೀಯ ಪಕ್ಷಗಳದ್ದೇ ಹೆಚ್ಚು ಕಾರುಬಾರು
- ಸದ್ಯ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರ
2023 ನವೆಂಬರ್ – ಡಿಸೆಂಬರ್: ಮಿಜೋರಾಂ ಚುನಾವಣೆ ಈ ನಾಲ್ಕು ರಾಜ್ಯಗಳಲ್ಲದೇ 40 ವಿಧಾನಸಭಾ ಕ್ಷೇತ್ರಗಳ ಪುಟ್ಟ ರಾಜ್ಯ ಮಿಜೋರಾಂನಲ್ಲಿಯೂ ನವೆಂಬರ್ – ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುತ್ತಿದೆ. ಸದ್ಯ ಅಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರದಲ್ಲಿದೆ. ಅದೇ ರೀತಿ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಲ್ಲಿಯೂ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಇಲ್ಲಿಯೂ ಕಾಂಗ್ರೆಸ್ ಪಕ್ಷ ಪ್ರಭಾವ ಬೀರುವ ಮೂಲಕ 2024ರ ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳಲು ಯತ್ನಿಸುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.