ಬೆಂಗಳೂರು: ಈ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬವಾರಿಯಾ, ಬಗಾರಿಯಾ ಗ್ಯಾಂಗ್‍(Bawariya and Bagaria Gang)ಗಳ ಹಾವಳಿ ಹೆಚ್ಚಾಗಿತ್ತು. ಇದೀಗ ಇವರೆಡು ಗ್ಯಾಂಗ್‍ಗಳ ಮಧ್ಯೆ ‘ಮೇಡ್ ಇನ್ ಕರ್ನಾಟಕ’ ಗ್ಯಾಂಗ್ ಕೂಡ ರಾಜಧಾನಿಗೆ ಕಾಲಿಟ್ಟಿದೆ. ದಕ್ಷಿಣ ಬೆಂಗಳೂರಿನಲ್ಲಿ ನಟೋರಿಯಸ್ ಹರಪಹಳ್ಳಿ ಗ್ಯಾಂಗ್‍(Harpanahalli Gang)ನ ಕಾಟ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಬಳ್ಳಾರಿಯಲ್ಲಿ ಕಲಿತಿದ್ದ ಕಣ್ ಕಟ್ಟು ವಿದ್ಯೆಯನ್ನೇ ಖತರ್ನಾಕ್‍ಗಳು ಬೆಂಗಳೂರಿನಲ್ಲಿಯೂ ಪ್ರಯೋಗಿಸುತ್ತಿದ್ದಾರೆ. ಆಸಾಮಿಗಳು ಚಿನ್ನದಾಸೆ ತೋರಿಸಿ ಲಕ್ಷ ಲಕ್ಷ ರೂ. ಹಣಕ್ಕೆ ಪಂಗನಾಮ ಹಾಕುತ್ತಿದ್ದಾರೆ. ನಿಧಿ ಆಸೆಯನ್ನು ತೋರಿಸಿ ಹರಪಹಳ್ಳಿ ಗ್ಯಾಂಗ್(Harpanahalli Gang) ಮಕ್ಮಲ್ ಟೋಪಿ ಹಾಕುತ್ತಿದೆಯಂತೆ.


ಇದನ್ನೂ ಓದಿ: BS Yediyurappa: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು


ಅತ್ಯಂತ ಕಡಿಮೆ ಬೆಲೆಗೆ ಹತ್ತಾರು ಕೆಜಿಯಷ್ಟು ಬಂಗಾರ ಕೊಡ್ತೀವಿ ಅಂತಾ ಈ ಗ್ಯಾಂಗ್(Notorious Gang) ಮಕ್ಮಲ್ ಟೋಪಿ ಹಾಕುತ್ತದೆಯಂತೆ. ಮೂರರಿಂದ ನಾಲ್ಕು ಒರಿಜನಲ್ ಕಾಯಿನ್ ತೋರಿಸಿ ಕುರಿಯನ್ನು ಹಳ್ಳಕ್ಕೆ ಬೀಳಿಸಿಕೊಳ್ತಾರೆ. ಬಳಿಕ ತಮ್ಮ ನಿಜಬಣ್ಣ ತೋರಿಸಿ ಜನರನ್ನು ಯಾರಾಮಾರಿಸುತ್ತಾರಂತೆ.


ಕಡಿಮೆ ಬೆಲೆಗೆ ಬಂಗಾರ ಸಿಗುತ್ತೆ ಅಂತಾ ಆಸೆಪಟ್ಟವರು ದುಡ್ಡು ಕೊಟ್ಟು ಕಾಯಿನ್(Gold Coin) ಪಡೆಯುವಾಗ ನಕಲಿ ಪೊಲೀಸರಿಂದ ಅಟ್ಯಾಕ್ ಮಾಡಿಸುತ್ತಾರಂತೆ. ಕೊನೆಗೆ ಗಿರಾಕಿಗೆ ಹಣವು ಇಲ್ಲ, ಇತ್ತ ಚಿನ್ನವು ಇಲ್ಲದಂತಾಗುತ್ತದೆ. ಎಲ್ಲವನ್ನು ಮೊದಲೇ ಪ್ರೀ ಪ್ಲಾನ್ ಮಾಡಿ ನಟೋರಿಯಸ್ ಗ್ಯಾಂಗ್ ಅಮಾಯಕ ಜನರಿಂದ ಸುಲಿಗೆ ಮಾಡುತ್ತಾರಂತೆ. ಬಾಗಲಕುಂಟೆ ವ್ಯಾಪ್ತಿಯಲ್ಲಿ ಲಕ್ಷ್ಮೀ ನಾರಾಯಣ್ ಎಂಬಾತನಿಗೆ ಕಿರಾತಕರು ಮಕ್ಮಲ್ ಟೋಪಿ ಹಾಕಿದ್ದಾರೆ.


ಇದನ್ನೂ ಓದಿ: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿ ಪೋಟೋಗೆ ತಿಥಿ ಪೂಜೆ ಮಾಡಿದ ದುಷ್ಕರ್ಮಿಗಳು 


ಹೆಸರಘಟ್ಟ ರಸ್ತೆಯ ಹಾವನೂರು ಬಳಿ ಸ್ಟೂಡಿಯೋ ಇಟ್ಟುಕೊಂಡಿರುವ ಲಕ್ಷ್ಮೀ ನಾರಾಯಣ್ ಎಂಬಾತನಿಗೆ ಚಿನ್ನದ ಆಸೆ ತೋರಿಸಿ 10 ಲಕ್ಷ ರೂ. ವಂಚಿಸಲಾಗಿದೆ. ಸದ್ಯ ಮೋಸ ಹೋಗಿರುವ ನಾರಾಯಣ್ ಈ ಬಗ್ಗೆ ಬಾಗಲಕುಂಟೆ ಪೊಲೀಸ್ ಠಾಣೆ(Bagalgunte Police Station)ಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಡಿಮೆ ಆಸೆಗೆ ಚಿನ್ನ ಸಿಗುತ್ತೆ ಅಂತಾ ಖರೀದಿಲು ಹೋಗಬೇಡಿ ಎಂದು ಪೊಲೀಸರು ತಿಳಿಸಿದ್ದು, ನಟೋರಿಯಸ್ ಗ್ಯಾಂಗ್‍ನ ಖದೀಮರನ್ನು ಬಂಧಿಸಲು ಬಲೆ ಬೀಸಿದ್ದಾರೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.