ಧಾರವಾಡ: ಕೃಷಿ ಕ್ಷೇತ್ರದ ಸಂಶೋಧನೆಗಳು ಅನ್ವೇಷಣಾತ್ಮಕವಾಗಿದ್ದು ರೈತರು ಹಾಗೂ ದೇಶದ ಸುಸ್ಥಿರ ಅಭಿವೃದ್ಧಿಗೆ ಪರಿಣಾಮಕಾರಿಯಾದ ಕೊಡುಗೆಗಳನ್ನು ನೀಡಿದಾಗ ಅವುಗಳ ಮೌಲ್ಯ ಹೆಚ್ಚಾಗುತ್ತದೆ.ವಿಶ್ವಸಂಸ್ಥೆ ಗೊತ್ತುಪಡಿಸಿರುವ ಸಾಮಾಜಿಕ ಹಾಗೂ ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ಭಾರತ ಸಮರ್ಥವಾಗಿದೆ.ಕೃಷಿ ಕ್ಷೇತ್ರದ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಹೊಸ ಅನ್ವೇಷಣಾತ್ಮಕ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೆಲ್ಕೋ ಇಂಡಿಯಾ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಹರೀಶ ಹಂದೆ(Harish Hande) ಹೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೃಷಿ ವಿ.ವಿ. ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸಕಾರಾತ್ಮಕ ಸ್ಪಂದನೆ-ರಾಜ್ಯಪಾಲರ ಭರವಸೆ


ಕೃಷಿ ವಿವಿಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಇಂದು ಜರುಗಿದ 34 ನೇ ಘಟಿಕೋತ್ಸವದಲ್ಲಿ ಭಾಗವಹಿಸಿ, ಘಟಿಕೋತ್ಸವ ಭಾಷಣ ಮಾಡಿದರು.ಕೃಷಿ ಕ್ಷೇತ್ರದ ಸಂಶೋಧಕರು ಮೂರು ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿರುವ ರೈತನ ಸಮಗ್ರ ಕಲ್ಯಾಣ ಗಮನದಲ್ಲಿಟ್ಟುಕೊಂಡು ಸಂಶೋಧನೆಗಳನ್ನು ಕೈಗೊಳ್ಳಬೇಕು. ಮುಂಬರುವ 25 ವರ್ಷಗಳ ಅವಧಿಯಲ್ಲಿ ರೈತರ ಬದುಕು ಸಮೃದ್ಧವಾಗಿಸಲು ಕೃಷಿ ಪದವೀಧರರ ಜ್ಞಾನ ಸದ್ಬಳಕೆಯಾಗಬೇಕು. 


40 ವರ್ಷಗಳ ಕಾಲ ಕಬ್ಬು ಬೆಳೆದ ಅನುಭವಿ ರೈತನಿಗೆ ಸಿಗದ ಪದವಿಗಳು, ಕೃಷಿ ವಿದ್ಯಾರ್ಥಿಗಳಿಗೆ ದೊರೆಯುತ್ತವೆ. ಅನುಭವಿ ಕೃಷಿಕರ ಸಲಹಾ ಮಂಡಳಿ ಸಕ್ರಿಯವಾಗಿರಬೇಕು. ನಿಜವಾದ ರೈತರು ಶಿಕ್ಷಣ, ಸಂಶೋಧನೆಯ ಪಾಲುದಾರರಾಗಬೇಕು. ಮೊಬೈಲ್ ಅಪ್ಲಿಕೇಷನ್, ಸಾಫ್ಟವೇರುಗಳ ಕ್ಷೇತ್ರದಲ್ಲಿ ಮಾತ್ರ ಹೊಸ ಆವಿಷ್ಕಾರ್ಕರಗಳಾಗಬೇಕಿಲ್ಲ, ಉತ್ತಮ ಟಿಲ್ಲರ್, ಕಡಿಮೆ ನೀರು ಬಳಸಿ ಬೆಳೆಯುವ ಹೈಡ್ರೋಪೆನಿಕ್ಸ್, ಸಿರಿಧಾನ್ಯಗಳ ಬೆಳೆ ಹಾಗೂ ಮೌಲ್ಯವರ್ಧನೆ ಮೊದಲಾದ ರಂಗಗಳಲ್ಲಿ ಅನ್ವೇಷಣೆ ನಡೆಯುವುದು ಅಗತ್ಯವಾಗಿದೆ. ವಿಶ್ವಸಂಸ್ಥೆ ಗೊತ್ತುಪಡಿಸಿರುವ ಸುಸ್ಥಿರ ಅಭಿವೃದ್ಧಿಯನ್ನು 2030 ರೊಳಗೆ ಸಾಧಿಸಲು ವಿದ್ಯಾರ್ಥಿಗಳು ಇಂದಿನಿಂದಲೇ ಕಾರ್ಯಪ್ರವೃತ್ತರಾದರೆ ಮಾತ್ರ ಭಾರತವನ್ನು ಬದಲಿಸಬಹುದು ಎಂದರು.


ಇದನ್ನೂ ಓದಿ: 8 ರಾಜ್ಯಗಳ ರಾಜ್ಯಪಾಲರ ಬದಲಾವಣೆ : SC/ST, OBC ಹೊರತುಪಡಿಸಿ ಮಹಿಳೆಯರಿಗೆ ಸಂಪೂರ್ಣ ಅವಕಾಶ ನೀಡಿದ ಮೋದಿ ಸರ್ಕಾರ


ಕೃಷಿ ಕ್ಷೇತ್ರದ ಸಂಶೋಧಕರು, ಪ್ರಾಧ್ಯಾಪಕರು ಎಷ್ಟು ಉಪನ್ಯಾಸ ಪತ್ರಿಕೆಗಳನ್ನು ಮಂಡಿಸಿದರು ಎಂಬ ಆಧಾರದ ಮೇಲೆ ನಿರ್ಧರಿಸುವುದಕ್ಕಿಂತ, ಆ ಉಪನ್ಯಾಸ, ಪತ್ರಿಕೆಗಳು ಎಷ್ಟು ರೈತರ ಬದುಕಿಗೆ ಬದಲಾವಣೆ ತಂದಿವೆ ಎಂಬುದನ್ನು ಆಧರಿಸಿ ಮೌಲ್ಯಮಾಪನ ಮಾಡುವ ಪರಿಪಾಠ ಪ್ರಾರಂಭವಾಗಬೇಕು.


ಭಾರತದ ಸಂಶೋಧನಾ ಕ್ಷೇತ್ರವನ್ನು ಆಫ್ರಿಕಾ, ಲ್ಯಾಟಿನ್ ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಗಂಭೀರವಾಗಿ ಗಮನಿಸುತ್ತಿವೆ. ಸಾಮಾಜಿಕ ಸುಸ್ಥಿರ ಅಭಿವೃದ್ಧಿಯೇ ಅನ್ವೇಷಣೆ,, ಸಂಶೋಧನೆಗಳ ಆದ್ಯತೆಯಾಗಬೇಕು. ಧಾರವಾಡ ಕೃಷಿ ವಿಶ್ವವಿದ್ಯಾಲಯವು ಅತ್ಯುತ್ತಮ ಭೌಗೋಳಿಕ, ಶೈಕ್ಷಣಿಕ ಪರಿಸರದಲ್ಲಿದೆ. ಇಂದು ಪದವಿಗಳನ್ನು ಪಡೆದ ಎಲ್ಲರೂ ದೇಶದ 100 ಕೋಟಿ ರೈತರ ಸಮಸ್ಯೆಗಳ ನಿವಾರಣೆಗೆ ಸಮರ್ಥರಾಗಿದ್ದೀರಿ. 2030 ರ ವೇಳೆಗೆ ನಿಮ್ಮಲ್ಲಿನ ಪ್ರತಿಯೊಬ್ಬ ಪದವೀಧರರಿಂದ ಕೋಟ್ಯಂತರ ರೈತರಿಗೆ ಪ್ರಯೋಜನವಾಗಿರಬೇಕು ಅಂತಹ ಮಾಹಿತಿ ನನಗೆ ತಲುಪುವಂತಾಗಬೇಕು ಎಂದು ಡಾ.ಹರೀಶ ಹಂದೆ ಆಶಯ ವ್ಯಕ್ತಪಡಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.