ಬೆಂಗಳೂರು: ನವೆಂಬರ್ ನಲ್ಲಿ ನಿಗದಿಯಾಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯ ರಾಜ್ಯ ಪ್ರವಾಸ ಮುಂದೂಡುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಇದೇ ಭಾನುವಾರ  ಅ. 29 ರಂದು ದೆಹಲಿಯಲ್ಲಿ ಕಾಂಗ್ರೇಸ್ ಕಾರ್ಯಕಾರಣಿ ಸಭೆ ನಡೆಯಲಿದ್ದು ಕಾರ್ಯಕಾರಣಿಯಲ್ಲಿ ರಾಹುಲ್ ಗಾಂಧಿಯನ್ನು ಎಐಸಿಸಿ ಅಧ್ಯಕ್ಷ ಹುದ್ದೆಗೆ ಶಿಫಾರಸ್ಸು ಮಾಡುವ ಸಾಧ್ಯತೆಯೂ ಇದೆ.


ಇದೇ ನಿಟ್ಟಿನಲ್ಲಿ ನವೆಂಬರ್ 19ರಂದು ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಜನ್ಮದಿನದಂದೆ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯೂ ಇದೆ. ಆದರೆ, ನವೆಂಬರ್ 19, 20, 21 ರಾಹುಲ್ ರಾಜ್ಯ ಪ್ರವಾಸವನ್ನು ಮುಂದೂಡಬಹುದು ಎಂಬ ಹೇಳಿಕೆಗಳು ಕೇಳಿಬರುತ್ತಿವೆ. 


ಇಂದಿರಾಗಾಂಧಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಚಿಕ್ಕಮಗಳೂರಿನಲ್ಲಿ ರಾಹುಲ್ ಪ್ರಮಾಣವಚನ ಸಾಧ್ಯತೆ..!


ನವಂಬರ್ 19 ರಂದು ಚಿಕ್ಕಮಗಳೂರಿನಲ್ಲಿ ದಿ.ಇಂದಿರಾಗಾಂಧಿ ಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಇದೆ. ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಮುಖ್ಯ ಅತಿಥಿ ಎಂಬುದು ಈಗಾಗಲೇ ನಿರ್ಧಾರವಾಗಿದೆ. ಅದೇ ದಿನ ರಾಹುಲ್ ತಮ್ಮ ಅಜ್ಜಿಗೆ ರಾಜಕೀಯ ಪುನರ್ಜನ್ಮ ನೀಡಿದ ಚಿಕ್ಕಮಗಳೂರಿನಲ್ಲೇ ಎಐಸಿಸಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವರು ಎಂಬ ನಿರೀಕ್ಷೆಯೂ ಸಹ ಮನೆಮಾಡಿದೆ.


ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ನ.19 ರಂದು ಪ್ರಮಾಣವಚನ ತೆಗೆದುಕೊಂಡರೆ ರಾಜ್ಯ ಪ್ರವಾಸ ಮುಂದೂಡಿಕೆಯ ಸಾಧ್ಯತೆಯೂ ಇದೇ ಎಂದು ಕಾಂಗ್ರೇಸ್ ಉನ್ನತ ಮೂಲಗಳು ತಿಳಿಸಿವೆ. 


ನವಂಬರ್ 21 ರಂದು ಕುಮಟದಲ್ಲಿ ಮೀನುಗಾರರ ಸಮಾವೇಶವನ್ನು ರಾಹುಲ್ ಗಾಂಧಿ ಉದ್ಘಾಟಿಸಬೇಕಿತ್ತು.