ಬೆಂಗಳೂರು: ಕೊರೊನಾವೈರಸ್ (Coronavirus) ಕರಿನೆರಳಿನ ಛಾಯೆ ಇನ್ನೂ ಕಡಿಮೆಯಾಗಿಲ್ಲ. ಇದೀಗ ಮತ್ತೊಂದು ವೈರಸ್ ಕಳವಳವನ್ನು ಹೆಚ್ಚಿಸಿದೆ. ಜಿಕಾ ವೈರಸ್ (Zika Virus) ಸೋಂಕಿಗೆ ಸಂಬಂಧಿಸಿದಂತೆ ಕೇರಳದಲ್ಲಿ ಭಾರೀ ಎಚ್ಚರಿಕೆ ನೀಡಲಾಗಿದೆ. ಇಲ್ಲಿಯವರೆಗೆ, ಕೇರಳದಲ್ಲಿ 14 ಜಿಕಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಜಿಕಾ ತಡೆಗಟ್ಟುವಿಕೆ ಮತ್ತು ಹರಡುವಿಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ನೆರೆಹೊರೆಯ ರಾಜ್ಯಗಳು ಸಹ ಎಚ್ಚರಿಕೆ ನೀಡಿವೆ:
ಕರ್ನಾಟಕದ (Karnataka) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಇಲಾಖೆ ಹೊರಡಿಸಿರುವ ಪತ್ರದಲ್ಲಿ, ಇದು ಮಳೆಗಾಲವಾದ್ದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಮಾಡುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಸದಾ ತಮ್ಮನ್ನು, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸುವಂತೆ ಸೂಚನೆಗಳನ್ನು ನೀಡಲಾಗಿದೆ.


ಇದನ್ನೂ ಓದಿ- ಕೇರಳದ ತಿರುವನಂತಪುರಮ್ ನಲ್ಲಿ ಜಿಕಾ ವೈರಸ್ ಪ್ರಕರಣ .!


ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಲಾದ ಮಾರ್ಗಸೂಚಿಯ ಮುಖ್ಯ ಅಂಶಗಳು:-
1. ಕಣ್ಗಾವಲಿಗಾಗಿ ಕಣ್ಗಾವಲು ತಂಡವನ್ನು ರಚಿಸಲಾಗಿದೆ. ವೈಯಕ್ತಿಕ ರಕ್ಷಣಾ ಕ್ರಮಗಳನ್ನು ಮನೆ, ಸಮುದಾಯ ಮತ್ತು ಸಾಂಸ್ಥಿಕ ಮಟ್ಟದಲ್ಲಿ ನೋಡಿಕೊಳ್ಳಬೇಕು.


2. ಏಡ್ಸ್ ಲಾರ್ವಾಗಳ ಕಣ್ಗಾವಲು ಮತ್ತು ವಿಮಾನ ನಿಲ್ದಾಣಗಳು, ಸಮುದ್ರ ಬಂದರುಗಳು / ಬಂದರುಗಳು ಮತ್ತು ಹಳ್ಳಿಗಳು / ವಾರ್ಡ್‌ಗಳಲ್ಲಿ 2 ಕಿ.ಮೀ. ಸುತ್ತಮುತ್ತಲೂ ಪತ್ತೆಹಚ್ಚುವಿಕೆಯನ್ನು ವೇಗಗೊಳಿಸಲಾಗುವುದು.


3. ಈ ನಿಟ್ಟಿನಲ್ಲಿ ಸಾಪ್ತಾಹಿಕ ವರದಿಯನ್ನು ಸರ್ಕಾರಕ್ಕೆ ಮೇಲ್ ಮಾಡಬೇಕು. ಜಿಲ್ಲೆಗಳು ಆಯಾ ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಯೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಸೂಚಿಸಲಾಗಿದೆ.


ಜಿಕಾ ವೈರಸ್ ಲಕ್ಷಣಗಳು:
ಜಿಕಾ ಸೋಂಕಿನ (Zika Virus) ನಂತರ ಜ್ವರ, ಮೈ-ಕೈ ನೋವು, ಕಾಂಜಂಕ್ಟಿವಿಟಿಸ್ (conjunctivitis), ಕೀಲು ನೋವು ಮುಂತಾದ ಲಕ್ಷಣಗಳು ಕಂಡುಬರುತ್ತವೆ. - ಪ್ರಯಾಣದ ಇತಿಹಾಸ ಮತ್ತು ಜಡ್‌ವಿಡಿ (ZVD) ಶಂಕಿತರ ಸಂಪರ್ಕಗಳ ಬಗ್ಗೆ ತಿಳಿದುಕೊಳ್ಳಬೇಕು. 
- ಶಂಕಿತ ಪ್ರಕರಣಗಳ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಎನ್‌ಐವಿಗೆ ಕಳುಹಿಸಬೇಕು. 
- ಗರ್ಭಿಣಿ ಮಹಿಳೆಯರಿಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸಮಯದಲ್ಲಿ ಅಂತಹ ರೋಗಲಕ್ಷಣಗಳಿಗೆ ವಿಶೇಷ ಗಮನ ನೀಡಬೇಕು. 
- ಯಾವುದೇ ಮಹಿಳೆಯಲ್ಲಿ ಈ ಲಕ್ಷಣಗಳು ಕಂಡುಬಂದರೆ, ತಕ್ಷಣ ಮಹಿಳಾ ಸೀರಮ್ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಬೇಕು.


ಇದನ್ನೂ ಓದಿ- Zika Virus Symptoms : ಕೇರಳದಲ್ಲಿ ಜಿಕಾ ವೈರಸ್ ಪತ್ತೆ : ಇಲ್ಲಿದೆ ವೈರಸ್‌ನ ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ


ಕೇಂದ್ರ ತಂಡ ಕೇರಳ ತಲುಪಿದೆ:
ಏತನ್ಮಧ್ಯೆ, ಜಿಕಾ ವೈರಸ್ (Zika Virus) ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರಕರಣಗಳ ನಿರ್ವಹಣೆಗೆ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು 6 ಸದಸ್ಯರ ಕೇಂದ್ರ ತಜ್ಞರ ತಂಡವನ್ನು ಕೇರಳಕ್ಕೆ (Kerala) ಕಳುಹಿಸಲಾಗಿದೆ. ಈ ಸೊಳ್ಳೆ ಕಡಿತದ ಕಾಯಿಲೆಯ ಮೊದಲ ಪ್ರಕರಣ ಗುರುವಾರ ರಾಜ್ಯದಲ್ಲಿ 24 ವರ್ಷದ ಗರ್ಭಿಣಿ ಮಹಿಳೆಯಲ್ಲಿ ವರದಿಯಾಗಿದೆ. ರಾಜ್ಯ ಸರ್ಕಾರದ ಪ್ರಕಾರ, ಎನ್‌ಐವಿ ಶುಕ್ರವಾರ ಇಂತಹ 13 ಪ್ರಕರಣಗಳನ್ನು ದೃಧಪಡಿಸಿದೆ. ಈ ರೀತಿಯಾಗಿ, ಜಿಕಾ ವೈರಸ್ ಸೋಂಕಿನ ಒಟ್ಟು ಪ್ರಕರಣಗಳು ಶುಕ್ರವಾರ 14 ಕ್ಕೆ ಏರಿವೆ.


ಗರ್ಭಿಣಿಯರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು:
ಜಿಲ್ಲಾ ವೈದ್ಯಕೀಯ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಆರೋಗ್ಯ ಸಚಿವರು ಗರ್ಭಿಣಿಯರಿಗೆ ಜ್ವರ ಬಂದರೆ ಪರೀಕ್ಷೆಗೆ ಒಳಗಾಗಬೇಕು ಎಂದು ಹೇಳಿದರು. ದೆಹಲಿಯ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಪತ್ರಿಕಾಗೋಷ್ಠಿಯಲ್ಲಿ, "ಜಿಕಾ ವೈರಸ್ ನ ಕೆಲವು ಪ್ರಕರಣಗಳು ಕೇರಳದಲ್ಲಿ ವರದಿಯಾಗಿವೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಆರು ಸದಸ್ಯರ ತಂಡವನ್ನು ನಿಯೋಜಿಸಲಾಗಿದೆ. ಇವರಲ್ಲಿ ಸಾರ್ವಜನಿಕ ಆರೋಗ್ಯ ತಜ್ಞರು, ಸೋಂಕು ತಜ್ಞರು ಮತ್ತು ಏಮ್ಸ್ ತಜ್ಞರು ಸೇರಿದ್ದಾರೆ ಎಂದು ತಿಳಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.