ಬೆಂಗಳೂರು: ಲಿಂಗಾಯತ ಮತ್ತು ಬಸವತತ್ವ ಒಪ್ಪುವ ವೀರಶೈವರಿಗೆ ಅಲ್ಪಸಂಖ್ಯಾತರು ಎಂದು ಮಾನ್ಯತೆ ನೀಡಿ ರಾಜ್ಯ ಸರ್ಕಾರ ಶುಕ್ರವಾರ ಹೊರಡಿಸಿರುವ ಅಧಿಸೂಚನೆಗೆ ಅಖಿಲ ಭಾರತ ವೀರಶೈವ ಮಹಾಸಭಾ ತೀವ್ರ ವಿರೋಧ ವ್ಯಕ್ತಪಡಿಸಿದೆ. 


COMMERCIAL BREAK
SCROLL TO CONTINUE READING

ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ದೃಢ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತೊಮ್ಮೆ ಖಂಡಿಸಿದ್ದು, ಇದೆಲ್ಲಾ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಡುತ್ತಿರುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 




"ಸಿದ್ದರಾಮಯ್ಯನವರೇ ನಮ್ಮ ಕೂಗು ಕೇಳಿಸಿಕೊಳ್ಳಿ ಚುನಾವಣೆ ಹತ್ತಿರ ಬರುತ್ತಿದೆಯೆಂದು ಹೀಗೆ ಮಾಡಿದ್ದೀರಾ ಅಂತಾ ನಮಗೆ ಗೊತ್ತು. ನೀವು ಸಮುದಾಯದಲ್ಲಿ ನಿಜವಾಗಿಯೂ ಆಸಕ್ತರಾಗಿದ್ದರೆ, ವೀರಶೈವ ಮತ್ತು ಲಿಂಗಾಯತ್ ಎರಡೂ ಒಂದೇ ಎಂದು ಯೋಚಿಸುತ್ತಿದ್ದಿರಿ.  ಈ ಪ್ರತ್ಯೇಕ ಧರ್ಮದ ಪ್ರಸ್ತಾವನೆ ಸರಿಯಲ್ಲ. ಸಚಿವ ಸಂಪುಟದಲ್ಲಿನ ಲಿಂಗಾಯತ ಹಾಗೂ ಬಸವತತ್ವ ಪಾಲಿಸುವ ವೀರಶೈವರು ಎಂಬ ಅಂಶವನ್ನು ಕೈ ಬಿಡಬೇಕು ಎಂದು ಅವರು ಆಗ್ರಹಿಸಿದರು.