ಹುಬ್ಬಳ್ಳಿ: ಎಲ್ಲ ಧರ್ಮಗಳು ಒಳ್ಳೆಯ ಉದ್ದೇಶಕ್ಕೆ ಹುಟ್ಟಿಕೊಂಡಿವೆ. ಆದರೆ ಆಚರಣೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಯಾರು ಮೂಲತತ್ವವನ್ನು ಪ್ರಾಮಾಣಿಕವಾಗಿ ಪಾಲಿಸಿಕೊಂಡು ಬರುತ್ತಾರೆ, ಆ ಧರ್ಮ ಸಾರ್ವಕಾಲಿಕವಾಗಿ ಪ್ರಸ್ತುತವಾಗಿರುತ್ತದೆ. ಕಾಲ ಕಳೆದಂತೆ ಮೂಲತತ್ವವನ್ನು ಬಿಟ್ಟು, ಅದಕ್ಕೆ ಬೇರೆ ಬೇರೆ ಅರ್ಥಗಳನ್ನು ಜೋಡಿಸಿ ಧರ್ಮದ ಹೆಸರಿನಲ್ಲಿ ಯಾವುದನ್ನು ಮಾಡಬಾರದು. ಅದನ್ನು ಮಾಡಿದರೆ ಆ ಧರ್ಮ ಬಹಳ ದಿನ ಉಳಿಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹೇಳಿದರು.


COMMERCIAL BREAK
SCROLL TO CONTINUE READING

ಇಂದು ಹುಬ್ಬಳ್ಳಿಯಲ್ಲಿ ದಿಗಂಬರ ಜೈನರ ವಸತಿ ನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಜೈನ ಧರ್ಮದ ಮೂಲತತ್ವದ ಆಚರಣೆಯೂ ಬಹಳ ಕಷ್ಟ. ಭಗವಾನ್ ಮಹಾವೀರರು ಹಾಗೂ ಎಲ್ಲ ತೀರ್ಥಂಕರರು ಬಹಳ ಕಠಿಣವಾದದ್ದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನನಗೆ ಒಂದು ಅಚ್ಚರಿ ಆಗುತ್ತದೆ. ಜೈನ್ ಧರ್ಮವನ್ನು ನಾನು ಬಹಳ ದಿನಗಳಿಂದ ನೋಡಿಕೊಂಡು ಬಂದಿದ್ದೇನೆ. ಎಷ್ಟೇ ಶ್ರೀಮಂತರಿದ್ದರು, ಮಧ್ಯಮ ವರ್ಗದವರಿದ್ದರು, ಬಡವರಿದ್ದರು, ಯಾರೂ ಧರ್ಮದ ಆಚರಣೆಯಲ್ಲಿ ವ್ಯತ್ಯಾಸ ಮಾಡುವುದಿಲ್ಲ. ಧರ್ಮದ ಆಚರಣೆಯಲ್ಲಿ ನೂರಕ್ಕೆ ನೂರರಷ್ಟು ಶುದ್ಧವಾಗಿರುವುದರಿಂದ ಜೈನ ಧರ್ಮಕ್ಕೆ ಪೂಜ್ಯನೀಯ ಸ್ಥಾನ ಸಿಕ್ಕಿದೆ ಎಂದರು.


ಇದನ್ನೂ ಓದಿ : ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟ ಉದಾಹರಣೆ ಇಲ್ಲ..! ಹೊಸಬರಿಗೆ ಖುಷಿ, ಹಳಬರಿಗೆ ಸಿಎಂ ಶಾಕ್‌


ಒಂದೊಂದು ಬಾರಿ ನನಗೆ ಅನಿಸುತ್ತದೆ, ಈ ಜೈನ್ ಧರ್ಮ ಎಲ್ಲ ದೇಶಗಳಲ್ಲಿ ಇದ್ದಿದ್ದರೆ ಯಾವ ಮಿಲಿಟರಿ ಮತ್ತು ಬಾಂಬ್ ಬೇಕಾಗಿರಲಿಲ್ಲ. ಎಲ್ಲ ಕಡೆ ಸ್ನೇಹ ಪ್ರೀತಿ, ಹಿಂಸೆ ರಹಿತ ಸಮಾಜ ಇರುತ್ತಿತ್ತು. ಮನುಷ್ಯ ಹುಟ್ಟಿದ ಮೇಲೆ ನಾನು ಎನ್ನುವುದಕ್ಕಾಗಿ ಅಲೆದಾಡುತ್ತಾನೆ. ಎಲ್ಲಿಯವರೆಗೆ ಈ ಸಮಾಜದಲ್ಲಿ ನಾನು ಎನ್ನುವುದ ಇರುತ್ತದೆ ಅಲ್ಲಿಯವರೆಗೆ ನ್ಯಾಯ ಎನ್ನುವುದು ಇರುವುದಿಲ್ಲ. ನಮ್ಮ ಇಡೀ ಬದುಕು ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುವುದ ನಮ್ಮ ಗುರಿಯಾಗಬೇಕು. ಅಸ್ತಿತ್ವವನ್ನು ಕಳೆದುಕೊಂಡವರು ಸಮಾಜದಲ್ಲಿ ಶಾಶ್ವತವಾದ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.


ಹುಬ್ಬಳ್ಳಿ ಜೈನ್ ಸಮುದಾಯದಕ್ಕೆ ತನ್ನದೇಯಾದ ಇತಿಹಾಸವಿದೆ. ಈ ಸಮುದಾಯ ಮುಖ್ಯ ವಾಹಿನಿಗೆ ಬಂದು ಕೇವಲ ವ್ಯಾಪಾರ ವಹಿವಾಟಿಗಲ್ಲದೇ ಸಾಮಾಜಿಕ ಜೀವನದಲ್ಲಿಯೂ ಬಹಳ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿ ಒಳ್ಳೆಯ ನಾಯಕತ್ವ ಕೂಡ ಇದೆ. ನಮ್ಮ ತಂದೆಯವರು ಈ ಸಮಾಜದೊಂದಿಗೆ ಅತ್ಯಂತ ಉತ್ತಮ ಸಂಬಂಧವನ್ನು ಹೊಂದಿದ್ದರು ಎಂದರು.


ಇದನ್ನೂ ಓದಿ : Bhagyalakshmi : ಅಕ್ಕ-ತಂಗಿ ಕತೆ "ಅಕ್ಕ-ಪಕ್ಕ".. ಒಂದೇ ಧಾರಾವಾಹಿ ಅವಳಿ ಕತೆಗಳಾಗಿ ಎರಡಾದಾಗ!


ನಿಮ್ಮ ವೃತ್ತಿಗಳಲ್ಲಿ ಯಶಸ್ವಿಯಾಗಲು ಶಿಕ್ಷಣ ಬೇಕು.   ಜೈನ್‌ಬೋರ್ಡಿಂಗ್ ಸ್ವತಂತ್ರ ಪೂರ್ವದಿಂದಲೂ ಬೆಳೆದುಕೊಂಡು ಬಂದಿದೆ. ಆಧುನಿಕತೆ ಕಾಲದಲ್ಲಿ ಬೇಡಿಕೆ ಹೆಚ್ಚಾಗಿದ್ದು, ನಮ್ಮ ಸರ್ಕಾರದಿಂದ 50 ಲಕ್ಷ ರೂಪಾಯಿ ನೀಡಿ, ಅಡಿಗಲ್ಲು ಹಾಕಿದ್ದೇವೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶವಾಗಿ ಈ ಸಮುದಾಯ ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸುತ್ತೇನೆ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.