ಧಾರವಾಡ : ಕ್ಯಾರಕೊಪ್ಪದ ಜವಾಹರ ನವೋದಯ ವಿದ್ಯಾಲಯದ ಶಿಕ್ಷರಾದ ಸರೋಜನಿ, ರಾಘವೇಂದ್ರ ಮತ್ತು ರವೀಂದ್ರ ಎನ್ನುವವರು ತಮ್ಮ ಪಾಂಶುಪಾಲರ ಆದೇಶದ ಮೇರೆಗೆ ತಮ್ಮ 24 ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಪಿಲಿಬಿಟ್ ಜವಾಹರ ನವೋದಯ ವಿದ್ಯಾಲಯಕ್ಕೆ ಬಿಟ್ಟು ಬರಲು 20/10/2023 ರಂದು ಹೋಗಿದ್ದರು. ಅಲ್ಲಿ ವಿದ್ಯಾರ್ಥಿಗಳನ್ನು ಬಿಟ್ಟು ಮರಳಿ ಕ್ಯಾರಕೊಪ್ಪಕ್ಕೆ ಬರಬೇಕಾಗಿತ್ತು. ಅದಕ್ಕಾಗಿ ಅವರು ರಾಯಬರೇಲಿಯಿಂದ ದೆಹಲಿಗೆ ಹಾಗೂ ದೆಹಲಿಯಿಂದ ಬೆಳಗಾವಿಗೆ ವಿಮಾನಯಾಣ ಟಿಕೇಟ್ ಬುಕ್ ಮಾಡಿದ್ದರು.


COMMERCIAL BREAK
SCROLL TO CONTINUE READING

ದಿ:24/10/2023 ರಂದು ಅವರ ವಿಮಾನ ರಾಯಬರೇಲಿಯಿಂದ ಮಧ್ಯಾಹ್ನ 12:45 ಕ್ಕೆ ಹೊರಡಬೇಕಾಗಿತ್ತು. ಅವರು ದೆಹಲಿಯಿಂದ ಮಧ್ಯಾಹ್ನ 3:45 ಗಂಟೆಗೆ ಬೆಳಗಾವಿಯ ವಿಮಾನ ಹಿಡಿಯಬೇಕಾಗಿತ್ತು. 3 ಜನ ದೂರುದಾರರು ಅಂದು ಬೆಳಿಗ್ಗೆ 11:00 ಗಂಟೆಗೆ ರಾಯಬರೇಲಿಯ ವಿಮಾನ ನಿಲ್ದಾಣಕ್ಕೆ ಬಂದು ತಮ್ಮ ವಿಮಾನದ ಬಗ್ಗೆ ವಿಚಾರಿಸಿದಾಗ ಅದು ಸುಮಾರು 3:00 ಗಂಟೆ ವಿಳಂಬವಾಗಿದೆ ಅನ್ನುವುದು ಗೊತ್ತಾಯಿತು. ಅದರಿಂದ ಅಂದೇ ಮಧ್ಯಾಹ್ನ 3:45ಕ್ಕೆ ದೆಹಲಿಯಿಂದ ಹೊರಡಬೇಕಾದ ವಿಮಾನ ಸಹ ತಪ್ಪಿತ್ತು. ವಿಮಾನಯಾಣ ಸಂಸ್ಥೆಯವರು ದೂರುದಾರರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಅವರು ಅಂತಹ ವ್ಯವಸ್ಥೆ ಮಾಡಿರಲಿಲ್ಲ. ಪರಿಣಾಮವಾಗಿ 2 ವಿಮಾನಗಳನ್ನು ದೂರುದಾರರು ತಪ್ಪಿಸಿಕೊಂಡು ಅಂದು ರಾತ್ರಿ ರಾಯಬರೇಲಿಯಲ್ಲಿ ಉಳಿದು ಮರುದಿವಸ ಬೆಳಿಗ್ಗೆ ಅಲ್ಲಿಂದ ದೆಹಲಿಗೆ ಪ್ರಯಾಣ ಮಾಡಿ ನಂತರ ಅಲ್ಲಿಂದ ಬೇರೆ ವಿಮಾನದಲ್ಲಿ ಬೆಳಗಾವಿ ಮೂಲಕ ಕ್ಯಾರಕೊಪ್ಪಕ್ಕೆ ಬಂದಿದ್ದರು.


ಇದನ್ನೂ ಓದಿ: ಡಿಸಿಎಂ ಡಿ.ಕೆ. ಶಿವಕುಮಾರ್ ಸಹನೆ ಕಟ್ಟೆ ಒಡೆಯುವ ಕಾಲ ಸನ್ನಿಹಿತವಾಗಿದೆ : ಬಸವರಾಜ ಬೊಮ್ಮಾಯಿ


ಈ ರೀತಿ ವಿಮಾನಯಾನ ವಿಳಂಬದಿಂದ ತಮಗೆ ಸೇವಾ ನ್ಯೂನ್ಯತೆಯಾಗಿ ತುಂಬಾ ತೊಂದರೆ ಹಾಗೂ ಮಾನಸಿಕ ಹಿಂಸೆ ಆಗಿದೆ ಅಂತಾ ಹೇಳಿ ಅವರ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ದಿ:14/03/2024 ರಂದು 3 ಜನ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪಿ.ಸಿ.ಹಿರೇಮಠ ಸದಸ್ಯರು, ನಿಗದಿತ ಸಮಯಕ್ಕೆ ವಿಮಾನಯಾಣ ಸೌಲಭ್ಯ ಒದಗಿಸುವುದಾಗಿ ಹೇಳಿ ದೂರುದಾರರಿಂದ ವಿಮಾನಯಾಣ ಶುಲ್ಕ ಪಡೆದುಕೊಂಡಿರುವುದರಿಂದ ದೂರುದಾರರು ಮತ್ತು ಅಲಾಯನ್ಸ್ ಏರ ಏವಿಲೇಷನ್ ಮಧ್ಯ ಗ್ರಾಹಕರು ಮತ್ತು ಸೇವೆ ಒದಗಿಸುವವರ ಸಂಬಂಧ ಇದೆ. ವಿಮಾನ ವಿಳಂಬವಾದ್ದರಿಂದ 3 ಜನ ದೂರುದಾರರು ರಾಯಬರೇಲಿಯಿಂದ ದೆಹಲಿಗೆ ಹಾಗೂ ದೆಹಲಿಯಿಂದ ಬೆಳಗಾವಿಗೆ ಪ್ರಯಾಣ ಮಾಡದೇ ಅಂದು ಇಡೀ ದಿವಸ ಮತ್ತು ರಾತ್ರಿ ರಾಯಬರೇಲಿಯಲ್ಲಿ ಉಳಿಯುವಂತಾಗಿರುವುದರಿಂದ ದೂರುದಾರರಿಗೆ ಎದುರುದಾರರಿಂದ ಸೇವಾ ನ್ಯೂನ್ಯತೆ ಆಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.


ವಿಮಾನ ವಿಳಂಬದ ಪರಿಣಾಮವಾಗಿ ದೂರುದಾರರು ಖರ್ಚು ಮಾಡಿದ ಎಲ್ಲಾ ವಿಮಾನ ಶುಲ್ಕ ಹಾಗೂ ಅವರ ವಸತಿ ಹಾಗೂ ಇತ್ಯಾದಿ ಖರ್ಚಿಗಾಗಿ ತಲಾ ರೂ.5,000/- ಖರ್ಚು ಕೊಡುವಂತೆ ಆಯೋಗ ಅಲಾಯನ್ಸ್ ಏರ ಏವಿಲೇಷನ್‍ಗೆ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಪ್ರತಿಯೊಬ್ಬರಿಗೆ ತಲಾ ರೂ.50,000/- ಪರಿಹಾರ ಮತ್ತು ತಲಾ ರೂ.10,000/- ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಆಯೋಗ ವಿಮಾನಯಾಣ ಸಂಸ್ಥೆಗೆ ಆದೇಶಿಸಿದೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz


Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ