ಅಂಬಿ ಸಮಾಧಿಗೆ ಹಾಲು-ತುಪ್ಪ ಬಿಡಲು ತುಮಕೂರಿನಿಂದ ಬಂದ ಅಭಿಮಾನಿ!
ಅಂಬರೀಶ್ ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ನಡೆಯುತ್ತದೆ ಎಂದು ತುಮಕೂರಿನಿಂದ 65 ವರ್ಷದ ಮಹಿಳಾ ಅಭಿಮಾನಿಯೊಬ್ಬರು ಆಗಮಿಸಿದ್ದರು.
ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ, ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ್ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ, ವಿಶ್ವಾಸ. ಈ ಕಾರಣದಿಂದಲೇ ಅಭಿಮಾನಿಗಳು ಅಂತ್ಯಕ್ರಿಯೆ ನೆರವೇರಿದ ಬಳಿಕವೂ ಸಮಾಧಿಯ ಬಳಿ ಪೂಜೆ ಸಲ್ಲಿಸಳು ಬರುತ್ತಿದ್ದಾರೆ.
ಅಂತೆಯೇ ಇಂದು ಅಂಬರೀಶ್ ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ನಡೆಯುತ್ತದೆ ಎಂದು ತುಮಕೂರಿನಿಂದ 65 ವರ್ಷದ ಮಹಿಳಾ ಅಭಿಮಾನಿಯೊಬ್ಬರು ಆಗಮಿಸಿದ್ದರು. ಅಲ್ಲದೆ, ಹಾಲು ತುಪ್ಪವನ್ನೂ ಜೊತೆಯಲ್ಲಿ ತಂದಿದ್ದು ಅವರಿಗೆ ಅಂಬರೀಶ್ ಅವರ ಮೇಲಿದ್ದ ಅಪ್ಪಟ ಅಭಿಮಾನಕ್ಕೆ ನಿದರ್ಶನವಾಗಿತ್ತು.
ಈ ಬಗ್ಗೆ ಮಾದ್ಯಮಗಳಿಗೆ ತಿಳಿಸಿದ ಅಭಿಮಾನಿ ರಾಜಮ್ಮ, "ಮಾಧ್ಯಮಗಳಲ್ಲಿ ಇಂದು ಹಾಲು-ತುಪ್ಪ ಬಿಡುವ ಕಾರ್ಯ ನಡೆಯಲಿದೆ ಎಂಬ ವಿಷಯ ನೋಡಿ ಇಲ್ಲಿವರೆಗೆ ಬಂದೆ. ನಾನು ಅಂಬರೀಶ್ ಅವರ ಅಭಿಮಾನಿ. ಸುಮಲತಾ ಅವರು ಸುಸ್ತಾಗಿದ್ದು ನೋಡಿ ತುಂಬಾ ನೋವಾಯಿತು. ಹಾಲು ತುಪ್ಪ ಬಿಡೋದಿಲ್ಲ ಅಂತ ಗೊತ್ತಾಯ್ತು. ಅದಕ್ಕೆ ಈಗ ನಾಳೆ ಬರ್ತಿನಿ ಅಂತಾ ಹೇಳಿದರು.
ಇಂದು ಬೆಳಿಗ್ಗೆ ಅಂಬಿ ಕುಟುಂಬ ಸಮಾಧಿಗೆ ಹಾಲು-ತುಪ್ಪ ಬಿಡಲು ಆಗಮಿಸಿತ್ತು. ಆದರೆ ಚಿತೆ ಇನ್ನೂ ಉರಿಯುತ್ತಿದ್ದ ಕಾರಣ ನಾಳೆ ಹಾಲು-ತುಪ್ಪ ಬಿಟ್ಟು, ಬಳಿಕ ನಾಳೆಯೇ ಚಿತಾಭಸ್ಮ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.