ಮುಂಬರುವ ವಿಧಾನಸಭಾ ಚುನಾವಣೆ ಗೆಲ್ಲಲು ರಾಜ್ಯ ಬಿಜೆಪಿಗೆ ಅಮಿತ್ ಷಾ`ರ 23 ಸೂತ್ರಗಳು
2008, 2013ರ ರಾಜ್ಯ ವಿಧಾನ ಸಭೆ ಹಾಗೂ 2014 ರ ಲೋಕಸಭಾ ಚುನಾವಣೆ ಆಧಾರದ ಮೇಲೆ A B C ಎಂದು ಮತಗಟ್ಟೆಗಳ ವರ್ಗಿಕರಸಿಬೇಕು.
ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯ ಚಟುವಟಿಕೆ ಭರದಿಂದ ಸಾಗಿದೆ. ಇದರ ರೂಪು-ರೇಷೆಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಿದ್ಧಪಡಿಸುತ್ತಿದ್ದಾರೆ. ಈ ಕುರಿತಂತೆ ಮಂಗಳವಾರ ಬೆಂಗಳೂರಿಗೆ ಆಗಮಿಸಿದ ಷಾ ಡಿ.31 ರಂದು ನೀಡಿದ್ದ ಬೂತ್ ಮಟ್ಟದ ಸಮಿತಿ ರಚನೆ ಬಗ್ಗೆ ನೀಡಿದ್ದ ಟಾಸ್ಕ್ ಅನ್ನು ಪರಿಶೀಲಿಸಿದ್ದಾರೆ. ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ಮಾಹಿತಿ ಪಡೆದಿರುವ ಅಮಿತ್ ಷಾ ಮುಂಬರುವ ವಿಧಾನಸಭಾ ಚುನಾವಣೆ ಗೆಲ್ಲಲು ರಾಜ್ಯ ಬಿಜೆಪಿಗೆ 23 ಸೂತ್ರಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಸರ್ಕಾರ ನಮ್ಮದೇ, ಸರ್ಕಾರ ತಾನಾಗಿಯೇ ಬರುತ್ತೆ, ಸರ್ಕಾರದ ಬಗ್ಗೆ ನೀವು ಯೋಚನೆ ಮಾಡಬೇಡಿ.
ನಾನು ಈ ಒಂದು ಚುನಾವಣೆ ನೋಡಿದವನಲ್ಲ, ಹಲವು ಚುನಾವಣೆಯಲ್ಲಿ ಗೆದ್ದಿದ್ದೇವೆ, ಕೆಲವು ಸೋತಿದ್ದೇವೆ. ಹಾಗಾಗಿ ಆ ಬಗ್ಗೆ ನಿಮಗೆ ಆತಂಕ ಬೇಡ, ಸರ್ವೆ ವರದಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳುವ ಮೂಲಕ ಕಾರ್ಯಕರ್ತರು ಹಾಗೂ ಪಕ್ಷದ ನಾಯಕರಲ್ಲಿ ಆತ್ಮವಿಶ್ವಾಸವನ್ನು ಹುಟ್ಟಿಸಿದ್ದಾರೆ. ಜೊತೆಗೆ ಮಾರ್ಚ್ 10 ರೊಳಗೆ ನಮ್ಮ ಚುನಾವಣೆ ಸಿದ್ಧತೆ ಪೂರ್ಣಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಚುನಾವಣೆ ಗೆಲ್ಲಲು ರಾಜ್ಯ ಬಿಜೆಪಿಗೆ ಅಮಿತ್ ಷಾ ನೀಡಿರುವ 23 ಸೂತ್ರಗಳು ಇಂತಿವೆ...
1) ಪ್ರತಿ ವಾರ ವಾಸ್ತವ್ಯ ಸಹಿತಿ ಎರಡು ದಿನ ಪ್ರವಾಸ.
2) ಪ್ರತಿ ಮತಗಟ್ಟೆಗೆ ಶಕ್ತಿಕೇಂದ್ರದ ಪ್ರಮುಖರ ನೇಮಕ.
3) ಮಂಡಳದ ವಿಸೃತ ಸಭೆ ನಡೆಸಲು ಸೂಚನೆ.
4) ಶಕ್ತಿಕೇಂದ್ರದ ಪ್ರಮುಖರು ಜನವರಿ ಮತ್ತು ಫೆಬ್ರವರಿಯಲ್ಲಿ ಎರಡು ದಿನ ಪ್ರವಾಸ ಮಾಡುವುದು ಕಡ್ಡಾಯ.
5) 2008, 2013ರ ರಾಜ್ಯ ವಿಧಾನ ಸಭೆ ಹಾಗೂ 2014 ರ ಲೋಕಸಭಾ ಚುನಾವಣೆ ಆಧಾರದ ಮೇಲೆ A B C ಎಂದು ಮತಗಟ್ಟೆಗಳ ವರ್ಗಿಕರಸಿಬೇಕು.
6) ಮತಗಟ್ಟೆ ಸಶಕ್ತೀಕರಣ ಪೂರ್ಣಗೊಳಿಸಬೇಕು.
7) ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ಸಮುದಾಯದವರನ್ನು ಕನಿಷ್ಠ 10 ಹೊಸ ಸದಸ್ಯತ್ವ ಮಾಡಬೇಕು.
8) ಸಹಕಾರಿ ನಿರ್ದೇಶಕರ ಮತ್ತು ಸ್ವಸಹಾಯ ಸಂಘಗಳ ಸದಸ್ಯರ ಪಟ್ಟಿ ಸಿದ್ಧಪಡಿಸಬೇಕು.
9) ಮಂದಿರ, ಮಠ, ಸಾಧು-ಸಂತರ ಪಟ್ಟಿ ಸಿದ್ದಪಡಿಸಿ ಅವರೊಂದಿಗೆ ಚರ್ಚಿಸಬೇಕು.
10) ಪಂಚಾಯಿತಿ ಚುನಾವಣೆ ಸೋತವರ ಪಟ್ಟಿ ಸಿದ್ಧಪಡಿಸಿ, ಪಕ್ಷಕ್ಕೆ ಸೇರ್ಪಡಿಸಿಕೊಳ್ಳಬೇಕು.
11) ಸ್ಮಾರ್ಟ್ ಪೋನ್ ಇರುವವರ ಪಟ್ಟಿ ತಯಾರಿಸಬೇಕು.
12) ಮೋಟರ್ ಬೈಕ್ ಇರುವವರ ಪಟ್ಟಿ ಸಿದ್ಧಪಡಿಸಬೇಕು.
13) ಪ್ರತಿಮತಗಟ್ಟೆಯಲ್ಲಿ ಈ ಭಾರಿ ಬಿಜೆಪಿ ಸರ್ಕಾರ ಎಂಬ ಘೋಷಣೆಯುಳ್ಳ ಗೋಡೆಬರಹ 5 ಸ್ಥಳದಲ್ಲಿ ಬರೆಯಬೇಕು.
14) ಪ್ರತಿಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ವಿರುದ್ಧ ಚಾರ್ಜ್ ಶೀಟ್ ತಯಾರಿಸಬೇಕು, ಮಾರ್ಚ್ ನಲ್ಲಿ ಬೈಕ್ ರ್ಯಾಲಿ ತೆರಳಿ ಚಾರ್ಜ್ ಶೀಟ್'ಗಳನ್ನು ಹಂಚಬೇಕು.
15) ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 8-10 ಪ್ರಮುಖರ ಕೋರ್ ಕಮಿಟಿ ರಚನೆ.
16) ಮತಗಟ್ಟೆಯ ಪ್ರತಿ ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜಾರೋಹಣ.
17) ನವಶಕ್ತಿ ಸಮಾವೇಶ ಕಡ್ಡಾಯವಾಗಿ ಆಯೋಜಿಸಬೇಕು.
18) ಸಾಮಾಜಿಕ ಜಾಲತಾಣ ಕಾರ್ಯಾಗಾರ ಮಾಡಬೇಕು.
19) ಪ್ರಣಾಳಿಕೆ ಮತ್ತು ಚಾರ್ಜ್ ಶೀಟ್ ಕಾರ್ಯಾಗಾರ ಮಾಡಬೇಕು.
20) ವಾಟ್ಸ್ ಆಫ್ ಗ್ರೂಪ್'ಗಳ ರಚನೆ.
21) ಚುನಾವಣೆ ವಿಸ್ತಾರಕರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು.
23) ಹೊರ ರಾಜ್ಯದ ಕ್ಷೇತ್ರ ಸಂಯೋಜಕತ ಜೊತೆ ಕಾರ್ಯ ವಿಭಜನೆ ಮಾಡಿಕೊಳ್ಳಬೇಕು.
23) ಪೇಜ್ ಪ್ರಮುಖರ ನೇಮಕಾತಿಗೆ ಚಾಲನೆ ಕೊಡಬೇಕು.
ಈ ಎಲ್ಲಾ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಅಮಿತ್ ಷಾ ರಾಜ್ಯ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರಿಗೆ ಸೂಚಿಸಿದ್ದಾರೆ.