ಬೆಂಗಳೂರು: ರಾಜ್ಯದ 15 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ 1519.43 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ.ನಾಗರಾಜು ಅಧ್ಯಕ್ಷತೆಯ ರಾಜ್ಯ ಮಟ್ಟದ ಸಮಿತಿ ಅನುಮೋದನೆ ನೀಡಿದೆ.  


COMMERCIAL BREAK
SCROLL TO CONTINUE READING

ಇದನ್ನು ಓದಿ: ಸರ್ಕಾರದಿಂದ ಮೇಜರ್‌ ಸರ್ಜರಿ: ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ


ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ-4ನೇ ಹಂತದ ಯೋಜನೆಗಳ 19ನೇ ರಾಜ್ಯ ಮಟ್ಟದ ಸಮಿತಿ ಸಭೆ ವಿಧಾನಸೌಧದಲ್ಲಿ ಇಂದು ಸಚಿವ ಎಂ.ಟಿ.ಬಿ. ನಾಗರಾಜು ಅಧ್ಯಕ್ಷತೆಯಲ್ಲಿ ನಡೆಯಿತು. 


ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಂಡ್ಯ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ(ಚಿಕ್ಕಬಳ್ಳಾಪುರ ನಗರಸಭೆ ಹೊರತುಪಡಿಸಿ), ದಕ್ಷಿಣ ಕನ್ನಡ(ಉಳ್ಳಾಲ ನಗರಸಭೆ, ಸೋಮೇಶ್ವರ ಮತ್ತು ಕೋಟೆಕಾರು ಪಟ್ಟಣ ಪಂಚಾಯಿತಿ ಹೊರತುಪಡಿಸಿ), ಧಾರವಾಡ, ಗದಗ( ಗದಗ-ಬೆಟಗೇರಿ ನಗರಸಭೆ ಹೊರತುಪಡಿಸಿ), ಕೊಪ್ಪಳ, ಹಾವೇರಿ(ಶಿಗ್ಗಾಂವ, ಬಂಕಾಪುರ, ಸವಣೂರು ಪುರಸಭೆ ಹೊರತುಪಡಿಸಿ), ರಾಯಚೂರು(ಮಾನ್ವಿ, ಜಾಲಹಳ್ಳಿ ಪುರಸಭೆ ಮತ್ತು ಕವಿತಾಳ ಪಟ್ಟಣ ಪಂಚಾತಿಯಿ ಹೊರತುಪಡಿಸಿ), ಯಾದಗಿರಿ, ಬೀದರ್, ಶಿವಮೊಗ್ಗ, ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2022-23 ರಿಂದ 2024-25ನೇ ಸಾಲಿನ ಆರ್ಥಿಕ ವರ್ಷದವರೆಗೆ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಈ ಕಾಮಗಾರಿಗಳನ್ನು ಕೈಗತ್ತಿಕೊಳ್ಳಲಾಗುತ್ತದೆ.


ಬೆಂಗಳೂರು ಗ್ರಾಮಾಂತರ ಜಿಲ್ಲೆ: 80.34 ಕೋಟಿ ರೂಪಾಯಿಗಳು, ಮಂಡ್ಯ ಜಿಲ್ಲೆ: 89.25 ಕೋಟಿ ರೂಪಾಯಿಗಳು , ಕೋಲಾರ ಜಿಲ್ಲೆ: 123.25ಕೋಟಿ ರೂಪಾಯಿಗಳು, ಚಿಕ್ಕಬಳ್ಳಾಪುರ ಜಿಲ್ಲೆ(ಚಿಕ್ಕಬಳ್ಳಾಪುರ ನಗರಸಭೆ ಹೊರತುಪಡಿಸಿ): 84.82 ಕೋಟಿ ರೂ, ದಕ್ಷಿಣ ಕನ್ನಡ ಜಿಲ್ಲೆ(ಉಳ್ಳಾಲ ನಗರಸಭೆ, ಸೋಮೇಶ್ವರ ಮತ್ತು ಕೋಟೆಕಾರು ಪಟ್ಟಣ ಪಂಚಾಯಿತಿ ಹೊರತುಪಡಿಸಿ): 72.25 ಕೋಟಿ ರೂ, ಧಾರವಾಡ ಜಿಲ್ಲೆ: 29.75 ಕೋಟಿ ರೂ, ಗದಗ ಜಿಲ್ಲೆ( ಗದಗ-ಬೆಟಗೇರಿ ನಗರಸಭೆ ಹೊರತುಪಡಿಸಿ): 55.25 ಕೋಟಿ ರೂ, ಕೊಪ್ಪಳ: 106.25 ಕೋಟಿ ರೂ, ಹಾವೇರಿ ಜಿಲ್ಲೆ(ಶಿಗ್ಗಾಂವ, ಬಂಕಾಪುರ, ಸವಣೂರು ಪುರಸಭೆ ಹೊರತುಪಡಿಸಿ): 97.75 ಕೋಟಿ ರೂ, ರಾಯಚೂರು ಜಿಲ್ಲೆ(ಮಾನ್ವಿ, ಜಾಲಹಳ್ಳಿ ಪುರಸಭೆ ಮತ್ತು ಕವಿತಾಳ ಪಟ್ಟಣ ಪಂಚಾತಿಯಿ ಹೊರತುಪಡಿಸಿ): 110.50 ಕೋಟಿ ರೂ, ಯಾದಗಿರಿ ಜಿಲ್ಲೆ: 114.75 ಕೋಟಿ ರೂ, ಬೀದರ್ ಜಿಲ್ಲೆ: 97.75 ಕೋಟಿ ರೂ, ಶಿವಮೊಗ್ಗ ಜಿಲ್ಲೆ: 106.25 ಕೋಟಿ ರೂ, ಬಾಗಲಕೋಟೆ ಜಿಲ್ಲೆ: 208.25 ಕೋಟಿ ರೂ, ಉತ್ತರ ಕನ್ನಡ ಜಿಲ್ಲೆ: 143.02 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲು ಸಮಿತಿ ಒಪ್ಪಿಗೆ ನೀಡಿದೆ.


ರಾಜ್ಯದ 302 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ -4ನೇ ಹಂತದ ಯೋಜನೆಯಡಿ 3885.00ಕೋಟಿ ರೂ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯ ಸಚಿವ ಸಂಪುಟ ಕಳೆದ ಜನವರಿಯಲ್ಲಿ ಅನುಮೋದನೆ ನೀಡಿತ್ತು. ಅದಕ್ಕೆ ಪೂರಕವಾಗಿ ಈ ಬಾರಿಯ 15 ಜಿಲ್ಲೆಗಳು ಸೇರಿದಂತೆ ಈವರೆಗೆ 25 ಜಿಲ್ಲೆಗಳ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 2367.57 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿದಂತಾಗಿದೆ.  


ಇದನ್ನು ಓದಿ: ಉಚಿತ ಗ್ಯಾಸ್ ಸಿಲಿಂಡರ್‌ ಪಡೆಯಲು ಇಲ್ಲಿದೆ ಸುಲಭ ವಿಧಾನ


ಸಭೆಯಲ್ಲಿ ನಗರಾಭಿವೃದ್ಧಿ ಇಲಾಖಾ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ಪೌರಾಡಳಿತ ಇಲಾಖೆ ನಿರ್ದೇಶಕರಾದ ಶ್ರೀಮತಿ ಅರ್ಚನಾ, ಮುಖ್ಯ ಎಂಜಿನಿಯರ್ ಸತ್ಯನಾರಾಯಣ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.