ಮಳೆ ಲೆಕ್ಕಿಸದೆ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಂದ ಅನಿರ್ಧಿಷ್ಠಾವಧಿ ಧರಣಿ
ಚಂಡಮಾರುತದ ಮಳೆ, ಗಾಳಿ ನಡುವೆಯೇ ಮಿನಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟಕ್ಕಿಳಿದಿದ್ದಾರೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಠಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಬೆಂಗಳೂರು: ಚಂಡಮಾರುತದ ಮಳೆ, ಗಾಳಿ ನಡುವೆಯೇ ಮಿನಿ ಅಂಗನವಾಡಿ ಕಾರ್ಯಕರ್ತೆಯರು ಹೋರಾಟಕ್ಕಿಳಿದಿದ್ದಾರೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಠಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಇದನ್ನೂ ಓದಿ- PM Awas Yojana:ಪಿಎಂ ಆವಾಸ್ ಯೋಜನೆಯಲ್ಲಿ ಸರ್ಕಾರ ಮಾಡಿರುವ ಈ ಬದಲಾವಣೆ ನಿಮಗೆ ತಿಳಿದಿರಲಿ, ಇಲ್ದಿದ್ರೆ...!
ರಾಜ್ಯದಲ್ಲಿರುವ 3331 ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೇಮಿಸಬೇಕು, ಮುಖ್ಯ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಷ್ಟೇ ಸಮಾನ ವೇತನ ಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ನ ಕಾರ್ಯದರ್ಶಿ ಎಮ್ ಜಯಮ್ಮ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಚಾರ್ ಹಾಲಪ್ಪ ಬಸಪ್ಪ ಅವರಿಗೆ ಮಹಿಳೆಯರ ಬಗ್ಗೆ ಕಾಳಜಿ ಇದ್ದು, ಮಿನಿ ಅಂಗನವಾಡಿಗಳಿಗೆ ಸಹಾಯಕಿಯರನ್ನು ನೇಮಿಸಬೇಕೆಂದು ಒತ್ತಾಯಿಸಿದರು. ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ ಶೇ 21 ರಷ್ಟು ಕೊರೊನಾ ಪ್ರಕರಣಗಳ ಹೆಚ್ಚಳ
ಚಿಕ್ಕಮಗಳೂರಿನಿಂದ ಬಂದಿರುವ ಹೇಮಾವತಿ ಅವರು ಮಾತನಾಡಿ, ಸಾವಿರಾರು ರುಪಾಯಿ ಬೆಲೆ ಏರಿಕೆ ಆಗ್ತಿದೆ, ಆದ್ರೆ ಸಂಬಳ ಮಾತ್ರ 250, 500 ರೂಪಾಯಿ ಮಾತ್ರ ಏರಿಕೆ ಆಗ್ತಿದೆ. ಸಮಾನ ವೇತನ ಕೊಡದೆ ಅನ್ಯಾಯ ಮಾಡಲಾಗ್ತಿದೆ. ಮುಖ್ಯ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ 10000 ರೂ ವೇತನ ಇದ್ರೆ, ನಮಗೆ ಮಾತ್ರ ಕೇವಲ 6 ಸಾವಿರ ರೂಪಾಯಿ ಇದೆ. ಹೀಗಾಗಿ ರಜೆ ಇದ್ದರೂ, ನಮಗೆ ನ್ಯಾಯ ಸಿಗುವವರೆಗೂ ಮಳೆಯಿದ್ದರೂ ಅಹೋರಾತ್ರಿ ಧರಣಿ ನಡೆಸ್ತೇವೆ ಎಂದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.