ಬೆಂಗಳೂರು: ಹಲವು ಬಾರಿ ತನ್ನ ಪಾಡಿಗೆ ತಾನೂ ಮಲಗಿರುವ ನಾಯಿಯ ಮೇಲೆ ಕಾರು ಹತ್ತಿಸಿ ಕೊಂದಿರುವ ನಿದರ್ಶನಗಳು ನಮ್ಮ ಮುಂದಿವೆ.ಅಂತವರ ವಿರುದ್ಧ ಪೊಲೀಸರು ಸಹ ಕ್ರಮಕ್ಕೆ ಮುಂದಾಗಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಇಂತಹದೇ ಮತ್ತೊಂದು ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ರಸ್ತೆ ಪಕ್ಕದಲ್ಲಿ ಮಲಗಿದ್ದ ನಾಯಿಯ ಮೇಲೆ ವ್ಯಕ್ತಿಯೊಬ್ಬ ಕಾರು ಹತ್ತಿಸಿರುವ ಅಮಾನವೀಯ ಘಟನೆ ಬೆಂಗಳೂರಿನ ಹೊರಮಾವು ಬಳಿಯ ಬಂಜಾರ ಲೇಔಟ್‍ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಕಾರಿನಲ್ಲಿ ಅಪಾರ್ಟ್‍ಮೆಂಟ್ ಗೆ ಹೋಗುವಾಗ ಗೇಟ್ ಮುಂಭಾಗದಲ್ಲಿ ನಾಯಿ ಮಲಗಿರುವುದನ್ನು ನೋಡಿದ್ದಾನೆ.


ಇದನ್ನೂಓದಿ: Mandya: ನೆಚ್ಚಿನ ನಾಯಕನಿಗೆ ಹಾರ ಹಾಕುವ ಬರದಲ್ಲಿ ಅಭಿಮಾನಿಗಳಿಂದ ಎಡವಟ್ಟು!


ಆದರೂ ಸಹ ನಾಯಿಯ ಮೇಲೆ ಕಾರು ಹತ್ತಿಸಿಕೊಂಡು ಹೋಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಭೀರ ಗಾಯಗೊಂಡ ನಾಯಿಗಾಗಿ ಸಾರ್ವಜನಿಕರು ಮುಮ್ಮಲ ಮರುಗಿದ್ದಾರೆ. ಕಾರು ಹತ್ತಿಸಿದ ವ್ಯಕ್ತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದೃಶ್ಯಾವಳಿ ಸಮೇತ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ. ರಾಮಮೂರ್ತಿ ನಗರದ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.


ಇದನ್ನೂಓದಿ: ಹೆಂಡತಿ ಜಾಸ್ತಿ ನಿದ್ದೆ ಮಾಡುತ್ತಿದ್ದಾಳೆ ಎಂದು ಪೊಲೀಸರಿಗೆ ದೂರು ಕೊಟ್ಟ ಪತಿ..!https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.