ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ನೆರವಾಗಲು ಪೊಲೀಸರಿಂದ ವಿನೂತನ ಪ್ರಯತ್ನ
Police Emergency Mission: ತುರ್ತು ಸಹಾಯವಾಣಿಯೊಂದಿಗೆ ಜನರ ರಕ್ಷಣೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಸಂಕಷ್ಟದ ಸಮಯದಲ್ಲಿ ನಿಂತ ಸ್ಥಳದಿಂದಲೇ ಪೊಲೀಸರಿಗೆ ಮಾಹಿತಿ ನೀಡಲು ಈ ತುರ್ತು ಸಹಾಯವಾಣಿ ಉಪಯೋಗವಾಗಲಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಆಗಾಗ ನಾನಾ ಬದಲಾವಣೆಗಳನ್ನು ತರುತ್ತಲ್ಲೇ ಇರುತ್ತಾರೆ. ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆಯ ನೋಂದಣಿ ಪ್ರಕ್ರಿಯೆ ರಾಜ್ಯಾದ್ಯಂತ ಇಂದಿನಿಂದ ಆರಂಭ
ತುರ್ತು ಸಹಾಯವಾಣಿಯೊಂದಿಗೆ ಜನರ ರಕ್ಷಣೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಸಂಕಷ್ಟದ ಸಮಯದಲ್ಲಿ ನಿಂತ ಸ್ಥಳದಿಂದಲೇ ಪೊಲೀಸರಿಗೆ ಮಾಹಿತಿ ನೀಡಲು ಈ ತುರ್ತು ಸಹಾಯವಾಣಿ ಉಪಯೋಗವಾಗಲಿದೆ.
ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ನೀವು ಇರುವ ಸ್ಥಳದ ಸುತ್ತಮುತ್ತ ವಿಡಿಯೋ ಸಮೇತ ರೆಕಾರ್ಡ್ ಆಗಿ ನೇರವಾಗಿ ಕಮಾಂಡ್ ಸೆಂಟರ್ ಗೆ ಕರೆ ಹೋಗುತ್ತದೆ. ಕಮಾಂಡ್ ಸೆಂಟರ್ ನಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತದೆ. ಮಾಹಿತಿ ಹೋದ 7 ನಿಮಿಷಕ್ಕೆ ನೀವಿರುವ ಸ್ಥಳಕ್ಕೆ ಹೊಯ್ಸಳ ವಾಹನ ಬರಲಿದೆ.
ಹೀಗಾಗಿ ಬೆಂಗಳೂರು ಪೊಲೀಸರು ಎಮರ್ಜೆನ್ಸಿ ಮಿಷನ್ ನನ್ನು ನಗರದ 30 ಕಡೆ ಇನ್ಸ್ಟಾಲೇಷನ್ ಮಾಡಿದ್ದಾರೆ. ಹೀಗಾಗಿ ತುರ್ತು ಸಮಯದಲ್ಲಿ ಪೊಲೀಸರನ್ನು ಸಂಪರ್ಕಿಸಲು ಈ ಮಿಷನ್ ಸಹಾಯಕವಾಗಲಿದೆ. ಅದರಲ್ಲೂ ಮೊಬೈಲ್ ಇಲ್ಲದವರಿಗೆ ಬಹುಪಯೋಗಲಿದೆ.
ಮಕ್ಕಳಿಗೆ ಆಟ-ಪೋಷಕರಿಗೆ ಸಂಕಟ!
ಮತ್ತೊಂದು ಸುದ್ದಿಯಲ್ಲಿ, ತಂದೆ ಚಾಕಲೇಟ್ ಕೊಳ್ಳಲು ಹಣ ಕೊಡಲಿಲ್ಲ ಅಂತಾ ಇಬ್ಬರು ಬಾಲಕಿಯರು ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿರುವ ಘಟನೆ ಬೆಳಕಿಗೆ ಬಂದಿದೆ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉಚಿತ ಬಸ್ ಸೇವೆ ಯೋಜನೆ ಪೋಷಕರಿಗೆ ಸಂಕಷ್ಟ ತಂದು ಪೊಲೀಸರು ತಲೆ ಕಡೆಸಿಕೊಳ್ಳುವಂತೆ ಮಾಡಿದೆ. 10 ಮತ್ತು 9 ನೇ ತರಗತಿ ಓದುತ್ತಿದ್ದ ಇಬ್ಬರು ಪುತ್ರಿಯರು ಮನೆ ಬಿಟ್ಟು ಹೋಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದರಿಂದ ಪೋಷಕರು ಕಕ್ಕಾಬಿಕ್ಕಿಯಾಗಿದ್ದಾರೆ. ತಂದೆ ತಾಯಿ ಮೇಲಿನ ಕೋಪಕ್ಕೆ ಹೆಣ್ಣು ಮಕ್ಕಳು ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ