ಹುಬ್ಬಳ್ಳಿ: ಸಂವಿಧಾನ ಬದಲಾಯಿಸ್ತೇವೆ ಎಂದು ಹೇಳಿದ್ದ ಅನಂತಕುಮಾರ್ ಹೆಗಡೆ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.


COMMERCIAL BREAK
SCROLL TO CONTINUE READING

"ಅನಂತಕುಮಾರ್ ಹೆಗಡೆ ಅವರಿಗೆ ಸಂವಿಧಾನ ಗೊತಿಲ್ಲ. ಅದರ ಬಗ್ಗೆ ಗೌರವವೂ ಇಲ್ಲ," ಎಂದು ಖಾರವಾಗಿ ನುಡಿದ್ದಾರೆ. "ಸಂವಿಧಾನ ಮೊದಲು ಹುಟ್ಟಿದ್ದೋ ಅನಂತ ಕುಮಾರ್ ಹೆಗಡೆ ಮೊದಲು ಹುಟ್ಟಿದ್ದೋ?" ಎಂದು ಸಿದ್ಧರಾಮಯ್ಯ ಅವರು ಪ್ರಶ್ನಿಸಿದ್ದಾರೆ.


ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಂವಿಧಾನ ಬದಲಾಯಿಸುತ್ತೇವೆ ಎಂದಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹೆಗಡೆಗೆ ದೇಶದ ಸಾಮಾಜಿಕ ವ್ಯವಸ್ಥೆ ಬಗ್ಗೆ ಅರಿವಿಲ್ಲ ಮತ್ತು ದೇಶದ ಸಂವಿಧಾನದ ಬಗ್ಗೆ ಗೌರವ ಇಲ್ಲ. ಅವರು ಜಾತ್ಯತೀತ ವಿರೋಧಿ ಮಾತನಾಡುತ್ತಾರೆ. ಸರ್ವಧರ್ಮೀಯರು ಇರುವ ಈ ದೇಶವನ್ನು ಎಂದಿಗೂ ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದರು.


"ಸಾಮಾಜಿಕ ಸಂಸ್ಕ್ರತಿ ಅನಂತಕುಮಾರ್ ಅವರಿಗೆ ಗೊತ್ತಿಲ್ಲಾ. ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನವೂ ಅವರಿಗಿಲ್ಲ ಅಂತ," ವ್ಯಂಗ್ಯವಾಡಿದರು.


ಇನ್ನು ಕಳಸಾ ಬಂಡೂರಿ ವಿಚಾರವಾಗಿ ಮಾತನಾಡಿದ ಅವರು, "ಗೋವಾ ಸಿಎಂ ಮನೋಹರ್ ಪರಿಕ್ಕರ್ ಮತ್ತು ಬಿ.ಎಸ್. ಯಡಿಯೂರಪ್ಪ ಇಬ್ಬರೂ ಸೇರಿ ನಾಟಕವಾಡುತ್ತಿದ್ದಾರೆ. ಈ ಭಾಗದ ಜನರಿಗೆ ಮೋಸ ಮಾಡುವ ತಂತ್ರಗಾರಿಕೆಯನ್ನು ಬಿಜೆಪಿ ಅನುಸರಿಸುತ್ತಿದೆ. ಗೋವಾ ಸಿಎಂ ನನಗೆ ಪತ್ರ ಬರೆಯ ಬೇಕಿತ್ತು. ಆದರೆ ಅವರು ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಅದು ದಾಖಲಾತಿ ಆಗೋದಿಲ್ಲ. ಅವರಿಗೆ ನೀರು ಕೊಡುವ ಮನಸ್ಸು ಇದ್ದರೆ ಟ್ರಿಬ್ಯೂನಲ್ ಗೆ ಅಫಿಡೆವಿಟ್ ಸಲ್ಲಿಸಲಿ," ಎಂದು ತಿರುಗೇಟು ನೀಡಿದ್ದಾರೆ.