ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಗೊಂದು ಸಿಹಿ ಸುದ್ದಿ. ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರೆಂದು ಪರಿಗಣಿಸಲು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸ್ಸು ಮಾಡಿದೆ.  ಈ ಮೂಲಕ 20 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ  ಶಿಕ್ಷಕರ ಸ್ಥಾನಮಾನ ಸಿಗಲಿದೆ. 


COMMERCIAL BREAK
SCROLL TO CONTINUE READING

ಇನ್ನು ಮುಂದೆ ಅಂಗನವಾಡಿ ಕಾರ್ಯಕರ್ತೆಯರಿಗೂ ಶಿಕ್ಷಕರ ಸ್ಥಾನಮಾನ ಸಿಗಲಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕರು ಎಂದು ಪರಿಗಣಿಸುವಂತೆ  ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸ್ಸು ಮಾಡಿದೆ. ಉತ್ತರಕಾಂಡ ರಾಜ್ಯದಲ್ಲಿ ಈ ಯೋಜನೆಯನ್ನು  ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಈ ಯೋಜನೆ ಜಾರಿಗೊಳಿಸಲು ನಿರ್ಧಾರ ಮಾಡಲಾಗಿದೆ. 


ಇದನ್ನೂ ಓದಿ : Vegetable Price: ಹೇಗಿದೆ ಗೊತ್ತಾ ಈರುಳ್ಳಿ, ಟೊಮ್ಯಾಟೋ ಬೆಲೆ? ಇಲ್ಲಿದೆ ತರಕಾರಿ ದರದ ಸಂಪೂರ್ಣ ವಿವರ


ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕರೆಂದು ಪರಿಗಣಿಸಿದ್ದಲ್ಲಿ ಅವರು ಪಡೆಯುತ್ತಿರುವ ಗೌರವ ಧನ, ವೇತನವಾಗಿ ಬದಲಾಗಲಿದೆ. ಜೊತೆಗೆ ಸೇವಾ ಭದ್ರತೆಯೂ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿಗಳ ಜೊತೆಗೆ ಒಂದು ಮತ್ತು ಎರಡನೇ ತರಗತಿಗಳನ್ನು ಸಂಯೋಜಿಸಿ ಶಾಲೆಗಳ ಸ್ವರೂಪ ನೀಡಲು ಯೋಜನೆ ಮಾಡಲಾಗುತ್ತಿದೆ. 


ಇಲ್ಲಿವರೆಗೆ ಅಂಗನವಾಡಿ ಕಾರ್ಯಕರ್ತೆಯರು 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಮಾತ್ರವಲ್ಲ ಬಾಣಂತಿಯರು, ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇರಿಸಲು, ಪೌಷ್ಟಿಕ ಆಹಾರ ವಿತರಣೆ ಸೇರಿದಂತೆ ಸರ್ಕಾರದ ಹಲವು ಯೋಜನೆಗಳ ಅನುಷ್ಠಾನಕ್ಕಾಗಿ ಇವರನ್ನು ಬಳಸಿಕೊಳ್ಳಲಾಗುತ್ತಿತ್ತು


ಇದನ್ನೂ ಓದಿ : Relief: ಹಾಲಿನ ಉತ್ಪನ್ನಗಳ ದರ ಇಳಿಕೆ ಮಾಡಿ ಆದೇಶ ಹೊರಡಿಸಿದ ಕೆಎಂಎಫ್ ಎಂಡಿ, ಯಾವುದರ ಬೆಲೆಯಲ್ಲಿ ಎಷ್ಟು ಇಳಿಕೆ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ