ಅನ್ನಭಾಗ್ಯ ವಿಳಂಬ: ಜುಲೈ ಒಂದರಿಂದ ಹತ್ತು ಕೆಜಿ ಅಕ್ಕಿ ಇಲ್ಲ!
ಈ ಮೊದಲು ಎಫ್ಸಿಐ ಅವರು ಅಕ್ಕಿ ಕೊಡುವುದಾಗಿ ಹೇಳಿದ್ದರು. ಈ ಸಂಬಂಧ ಎಫ್ಸಿಐ ಅವರು ಜೂನ್ 12 ಕ್ಕೆ ಪತ್ರ ಬರೆದಿದ್ದರು. ಎಲ್ಲವೂ ಒಪ್ಪಿಗೆ ಆದ ಮೇಲೆ ಕೇಂದ್ರ ಸರ್ಕಾರ ಎಂಟ್ರಿ ಆಗಿದ್ದಾರೆ. ಅವರು ಮಧ್ಯ ಪ್ರವೇಶ ಮಾಡಿ ಜೂನ್ 13 ಕ್ಕೆ ಪತ್ರ ಬರೆದಿದ್ದಾರೆ. ಜೂನ್ 14 ಕ್ಕೆ ಮತ್ತೆ ರಾಜ್ಯ ಸರ್ಕಾರಕ್ಕೆ ಎಫ್ಸಿಐ ಅವರು ಪತ್ರ ಬರೆದರು. ಇದು ರಾಜಕೀಯ ಅಲ್ಲವಾ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ದ ಸಿಎಂ ಕಿಡಿ ಕಾರಿದರು.
ಬೆಂಗಳೂರು : ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಐದು ಕೆಜಿ ಅಕ್ಕಿ ದೊರಕದ ಕಾರಣ ಹಾಗೂ ಇತರೆ ರಾಜ್ಯದಿಂದಲೂ ಅಕ್ಕಿ ಖರೀದಿ ಸಫಲ ಆಗದ ಹಿನ್ನಲೆ ಜುಲೈ 1ರಿಂದ ಅನ್ನಭಾಗ್ಯ ಯೋಜನೆ ಮೂಲಕ 10 ಕೆಜಿ ಅಕ್ಕಿ ನೀಡಲು ಸಾಧ್ಯವಿಲ್ಲ, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಕುರಿತಂತೆ ವಿಧಾನಸೌಧದಲ್ಲಿ ಇಂದು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿ ತಿಂಗಳ ಮೊದಲ ತಾರೀಖಿನಂದು 10 ಕೆಜಿ ಅಕ್ಕಿ ಸಿಗಲ್ಲ, ಸ್ವಲ್ಪವಿಳಂಬವಾಗಲಿದೆ. ಛತ್ತೀಸ್ಗಢದವರು ಅಕ್ಕಿ ಕೊಡ್ತೀನಿ ಅಂತ ಹೇಳಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಅಕ್ಕಿ ಸಿಕ್ತಿಲ್ಲ. ಟ್ರಾನ್ಸ್ ಪೋರ್ಟ್ ಜಾಸ್ತಿ ಆಗುತ್ತೆ. ತೆಲಂಗಾಣ ಇಲ್ಲ ಅಂದ್ರು. 3 ಏಜೆನ್ಸಿಗಳಿಂದ ಕೇಂದ್ರೀಯಾ ಬಂಡಾರ ಸೇರಿದಂತೆ 3 ಸಂಸ್ಥೆಗೆ ಕೇಳಿದ್ದೇವೆ. ಕೊಟೇಷನ್ ಕೇಳಿದ್ದೇವೆ. ಯಾವ ಅಕ್ಕಿ, ಎಷ್ಟು ಅಂತ ಕೇಳಿದ್ದೇವೆ, ಎಂದು ವಿವರಿಸಿದರು.
ಇದನ್ನೂ ಓದಿ- ಕೇಂದ್ರದ ವಿರುದ್ಧ ಕೈ ಕಹಳೆ: ನಾವೇನ್ ಉಚಿತ ಅಕ್ಕಿ ಕೇಳಿದ್ವಾ ಎಂದ ಸಚಿವ!!
ಈ ಮೊದಲು ಎಫ್ಸಿಐ ಅವರು ಅಕ್ಕಿ ಕೊಡುವುದಾಗಿ ಹೇಳಿದ್ದರು. ಈ ಸಂಬಂಧ ಎಫ್ಸಿಐ ಅವರು ಜೂನ್ 12 ಕ್ಕೆ ಪತ್ರ ಬರೆದಿದ್ದರು. ಎಲ್ಲವೂ ಒಪ್ಪಿಗೆ ಆದ ಮೇಲೆ ಕೇಂದ್ರ ಸರ್ಕಾರ ಎಂಟ್ರಿ ಆಗಿದ್ದಾರೆ. ಅವರು ಮಧ್ಯ ಪ್ರವೇಶ ಮಾಡಿ ಜೂನ್ 13 ಕ್ಕೆ ಪತ್ರ ಬರೆದಿದ್ದಾರೆ. ಜೂನ್ 14 ಕ್ಕೆ ಮತ್ತೆ ರಾಜ್ಯ ಸರ್ಕಾರಕ್ಕೆ ಎಫ್ಸಿಐ ಅವರು ಪತ್ರ ಬರೆದರು. ಇದು ರಾಜಕೀಯ ಅಲ್ಲವಾ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ದ ಸಿಎಂ ಕಿಡಿ ಕಾರಿದರು.
ಇದು ಬಡವರ ವಿರೋಧಿ ಅಲ್ಲವಾ. ಇವರಿಗೆ ಮಾನವೀಯತೆ ಇದೆಯೇ? ಬಡವರಿಗೆ ಕೊಡೋ ಅಕ್ಕಿಯಲ್ಲಿ ರಾಜಕೀಯ ಮಾಡ್ತಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ? ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ. ನಾವು ಪುಕ್ಕಟ್ಟೆ ಕೇಳಿಲ್ಲ. ಹಣ ಕೊಡ್ತೀವಿ. ಮೊದಲು ಒಪ್ಪಿ ಅಮೇಲೆ ಕೊಡೊಲ್ಲ ಅಂತಿದ್ದಾರೆ. ಮೋದಿ ಅವರು ಕೋ ಆಪರೇಟಿವ್ ಫೆಡರಿಸಂ ಅಂತಾರೆ. ಇದೇನಾ ಅವರ ಫೆಡರಲಿಸಂ? ಎಂದು ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧ ವಾಗ್ಧಾಳಿ ನಡೆಸಿದರು.
ಇದನ್ನೂ ಓದಿ- ಲೀಥಿಯಂ ಕೋಶ ಉತ್ಪಾದನೆ: ರಾಜ್ಯದಲ್ಲಿ 8 ಸಾವಿರ ಕೋಟಿ ರೂ. ಹೂಡಿಕೆಗೆ ಐಬಿಸಿ ಕಂಪನಿ ಒಲವು
ಭತ್ತ ಏನು ಕೇಂದ್ರ ಬೆಳೆಯುತ್ತಾ? ಅವರು ಅಕ್ಕಿ ಖರೀದಿ ಮಾಡಿರುತ್ತಾರೆ. ಪುಡ್ ಸೆಕ್ಯುರಿಟಿ ಆಕ್ಟ್ ತಂದಿದ್ದು ಮನಮೋಹನ್ ಸಿಂಗ್. ಆಗ ನಾವು ತಂದಿದ್ದು ಯೋಜನೆ. ಅಕ್ಕಿ ಇದೆ ಕೊಡೋಕೆ ಏನು ನಿಮಗೆ?ಎಂದು ಪ್ರಶ್ನಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ