ಬೆಂಗಳೂರು: ಡಿವೈಎಸ್ಪಿ ಗಣಪತಿ ಹತ್ಯೆ ಪ್ರಕರಣದಿಂದ ಇನ್ನೂ ಹೊರಬರದ ಸಚಿವ ಕೆ.ಜೆ.ಜಾರ್ಜ್ ವಿರುದ್ಧ  ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರಿನ ಎಸಿಎಂಎಂ ಕೋರ್ಟ್ ನಲ್ಲಿ ಎನ್.ಆರ್. ರಮೇಶ್ ಜಾರ್ಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.


COMMERCIAL BREAK
SCROLL TO CONTINUE READING

52.03 ಎಕರೆ ಕ್ರಯಕ್ಕೆ ಪಡೆದು, 65 ಎಕರೆ ಒತ್ತುವರಿಯಾಗಿದೆ ಎಂದು ಗಂಭೀರ ಆರೋಪ ಮಾಡಿ ಈ ಹಿಂದೆ ಕೆ.ಜೆ. ಜಾರ್ಜ್ ವಿರುದ್ಧ ದೂರು ದಾಖಲಿಸಿದ್ದ ಎನ್.ಆರ್. ರಮೇಶ್ ಈಗ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಮಾಡಲಾಗಿದ್ದು, 850 ಕೋಟಿ ಮೌಲ್ಯದ 13 ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ರಮೇಶ್ ಆರೋಪ ಮಾಡುತ್ತಿದ್ದಾರೆ.


ಚಲಗಟ್ಟ ಕಣಿವೆಯ ರಾಜಕಾಲುವೆಯ ಬಫರ್ ಜೋನ್ ಜಾಗವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಲಾಗಿದೆ ಎಂದು ರಮೇಶ್ ದೂರಿನಲ್ಲಿ ತಿಳಿಸಿದ್ದು, ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಸರ್ಕಾರಿ ಭೂ ಕಬಳಿಕೆ ಮತ್ತು ಅಧಿಕಾರ ದುರುಪಯೋಗದಡಿ ದೂರು ದಾಖಲಿಸಲಾಗಿದೆ. ಇದರಲ್ಲಿ ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂಬ ಆರೋಪಗಳು ಸಹ ಕೇಳಿಬರುತ್ತಿವೆ.