ಬೆಂಗಳೂರು: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ನೃತ್ಯ, ಕಥಾಕೀರ್ತನ, ಗಮಕ ಕಲಾಪ್ರಕಾರಗಳಲ್ಲಿ 2020-21ನೇ ಸಾಲಿಗಾಗಿ 2019 ಜನೇವರಿಯಿಂದ 2019 ಡಿಸೆಂಬರ್ ಒಳಗೆ ಪ್ರಕಟಿಸಿರುವ ಪುಸ್ತಕಗಳಿಗೆ ಬಹುಮಾನ ನೀಡಲು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ  ಅರ್ಜಿ ಆಹ್ವಾನಿಸಲಾಗಿದೆ. 


COMMERCIAL BREAK
SCROLL TO CONTINUE READING

 ಪುಸ್ತಕ ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ದಪಡಿಸಿರಬಾರದು. ಸಂಪಾದಿತ ಕೃತಿಯಾಗಿರಬಾರದು. ಸ್ವ-ರಚಿತವಾಗಿರಬೇಕು. ಪ್ರಥಮ ಮುದ್ರಾಣಾವೃತ್ತಿ ಯಾಗಿರಬೇಕು. ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ರಿಜಿಸ್ಟಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ  ಸೆಪ್ಟೆಂಬರ್ 30, 2020 ರ ಒಳಗಾಗಿ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಳುಹಿಸ ಬೇಕು.


ಅರ್ಜಿಯನ್ನು ಅಕಾಡೆಮಿ ಕಚೇರಿಯಿಂದ ಪಡೆಯಬಹುದು ಹಾಗೂ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿಯೂ ಪಡೆಯಬಹುದಾಗಿದೆ. ಹಾಗೂ ಅಕಾಡೆಮಿ ಅಂರ್ತಜಾಲತಾಣ  https://karnatakasangeetanrityaacademy.com  ಮೂಲಕ ಸಹ ಪಡೆಯಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.