ಬೆಂಗಳೂರು : ಟೂಲ್ ಆ್ಯಂಡ್ ಡೈ ಮೇಕಿಂಗ್, ಪ್ರಿಸಿಷ್‍ನ್ ಮ್ಯಾನುಫ್ಯಾಕ್ಚರಿಂಗ್, ಮೆಕ್ಯಾನಿಕಲ್, ಆಟೊಮೋಬೈಲ್ ವಿಭಾಗಗಳಲ್ಲಿ ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿಗೆ ರಾಯಾಪುರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಉಚಿತ ಪೋಸ್ಟ ಡಿಪ್ಲೋಮಾ ಇನ್ ಟೂಲ್ ಡಿಸೈನ್” (ಪಿಡಿಟಿಡಿ) ಕೋರ್ಸ್‍ನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗಣಿಗಾರಿಕೆ ಪ್ರದೇಶದಲ್ಲಿ ಭೀಕರ ದುರಂತ: ಭೂಕುಸಿತಕ್ಕೆ 10-15 ಮಂದಿ ಬಲಿಯಾಗಿರುವ ಶಂಕೆ!


ಕೋರ್ಸ್‍ನಲ್ಲಿ 30 ಅಭ್ಯರ್ಥಿಗಳಿಗೆ ಅವಕಾಶವಿದೆ. 15 ಅಭ್ಯರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನುಳಿದ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.ಟೂಲ್ ಡಿಸೈನ್ ಮುಗಿಸಿರುವ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ಬಹು ಬೇಡಿಕೆ ಇದ್ದು ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಮೂಲಕ ಉದ್ಯೋಗಾವಕಾಶ ಕಲ್ಪಿಸಿ ಕೊಡಲಾಗುವುದು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಮಾಸಿಕ 2 ಸಾವಿರ ರೂ.ಸ್ಟೈಫಂಡ್ ಕೊಡಲಾಗುವುದು. ಇತರ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ಮರುಪಾವತಿ ವ್ಯವಸ್ಥೆ ಇದೆ.


ಇದನ್ನೂ ಓದಿ: Bank Locker : ಇಂದಿನಿಂದ ಬದಲಾಗಿದೆ ಬ್ಯಾಂಕ್ ಲಾಕರ್ ನಿಯಮಗಳು!


ಹೆಚ್ಚಿನ ಮಾಹಿತಿಗಾಗಿ http://gttc.co.in/  ವೆಬ್‍ಸೈಟ್, ದೂರವಾಣಿ ಸಂಖ್ಯೆ 8050401115, 9035630312 ಸಂಪರ್ಕಿಸಬಹುದು ಅಥವಾ ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶ, ರಾಯಾಪುರ, ಧಾರವಾಡ-580009 ಈ ವಿಳಾಸಕ್ಕೆ ಭೇಟಿ ನೀಡಬಹುದು ಎಂದು ಜಿಟಿಟಿಸಿ ಪ್ರಾಂಶುಪಾಲರಾದ ಶಿವಾನಂದ ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.