ಬೆಂಗಳೂರು: ಕೆನರಾ ಬ್ಯಾಂಕ್ ಆರ್‌ಸೆಟ್ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ 30 ದಿನಗಳ ಉಚಿತ ಕೌಶಲ್ಯ ಆಧಾರಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಸಂಸ್ಥೆಯಲ್ಲಿ “ರೆಪ್ರೀಜರೇಶನ್ ಆಂಡ್ ಎರ್-ಕಂಡಿಶನಿಂಗ್ ಮತ್ತು ಇಲೆಕ್ಟ್ರಿಕಲ್ ಮೋಟಾರ್ ವೈಂಡಿಂಗ್ ರಿಪೇರ್” ಉಚಿತ ತರಬೇತಿಗಳನ್ನು ನವ್ಹೆಂಬರ್ ತಿಂಗಳಲ್ಲಿ ಪ್ರಾರಂಭಿಸಲಾಗುವುದು.ಈ ತರಬೇತಿಗಳು ಸ್ವ-ಉದ್ಯೋಗ ಪ್ರಾರಂಭಿಸಿ, ಸ್ವಾಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ.


ಇದನ್ನೂ ಓದಿ: ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ OnePlus Nord 2 5G...!


ತರಬೇತಿಗಳು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ. ತರಬೇತಿಯಲ್ಲಿ ಕೌಶಲ್ಯ ಸಾಫ್ಟ್ ಸ್ಕೀಲ್ಸ್, ಯೋಗ ತರಬೇತಿ ಹಾಗೂ ಬ್ಯಾಕಿಂಗ್, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಬಗೆಗಿನ ಮಾಹಿತಿಯನ್ನು ಉಚಿತವಾಗಿ ನೀಡಲಾಗುವುದು.ಅರ್ಜಿ ಸಲ್ಲಿಸಲಿಚ್ಚಿಸುವ ಆಸಕ್ತರು 18 ರಿಂದ 45  ವಯೋಮಿತಿಯ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಮತ್ತು ಅಭ್ಯರ್ಥಿಗಳು ನವ್ಹೆಂಬರ್ 15 ಒಳಗಾಗಿ ತಮ್ಮ ಹೆಸರು, ವಿಳಾಸಗಳನ್ನು ನೋಂದಾಯಿಸಿಕೊಳ್ಳಬೇಕು.


ಇದನ್ನೂ ಓದಿ: ಕನ್ನಡಿಗ ಕೆ.ಎಲ್.ರಾಹುಲ್ ಪಾಕ್ ಗೆ ಅಪಾಯಕಾರಿಯಾಗಲಿದ್ದಾರೆ ಎಂದ ಮ್ಯಾಥ್ಯೂ ಹೇಡನ್


ತರಬೇತಿಯಲ್ಲಿ ಭಾಗವಹಿಸಲು ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಹಾಗೂ  ದೂರವಾಣಿ ಸಂಖ್ಯೆ – 9483485489, 9482188780, 8197022501, 9743321062, 08284-295307/ 220807 ಕ್ಕೆ ಸಂಪರ್ಕಿಸಿ ತಲುಪಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.