ಬೆಂಗಳೂರು:  2020-21 ನೇ ಸಾಲಿನ ಕರ್ನಾಟಕ ಕ್ರೀಡಾ ಪೋಷಕ ರತ್ನ ಪ್ರಶಸ್ತಿ ಯೋಜನೆಯಡಿಯಲ್ಲಿ ಕರ್ನಾಟಕದ ಕ್ರೀಡಾ ಪೋಷಕರನ್ನು ಗುರುತಿಸಿ, ಗೌರವಿಸಿ ಅವರಿಗೆ ಕರ್ನಾಟಕ ಕ್ರೀಡಾ ಪೋಷಕ ರತ್ನ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರೀಡೆಯ ಅಭಿವೃದ್ಧಿಗೆ ನೇರವು ನೀಡಿ 5 ವರ್ಷಗಳಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಕ್ರೀಡಾ ಪೋಷಕರು ಈ ಪ್ರಶಸ್ತಿಗೆ ಅರ್ಹರಿರುತ್ತಾರೆ.ಆಸಕ್ತರು ಸೆ.15-09-2020 ರ ಒಳಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಲು ತಿಳಿಸಲಾಗಿದೆ. ತಡವಾಗಿ ಬಂದ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದಿಲ್ಲ.


ಹೆಚ್ಚಿನ ಮಾಹಿತಿ ಹಾಗೂ ಷರತ್ತುಗಳಿಗಾಗಿ ಧಾರವಾಡ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ: 0836-2447424 ಸಂಪರ್ಕಿಸುವಂತೆ ಧಾರವಾಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.