ಬೆಂಗಳೂರು : ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ 2020-21ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯ ನಿರುದ್ಯೋಗಿ ಅಂಗವಿಕಲ ಯುವಕ/ ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಆಧಾರ ಯೋಜನೆಯಡಿಯಲ್ಲಿ ಸಾಲ ಪಡೆಯಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ


ಈ ಮೊದಲು ಆಧಾರ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳು ಪ್ರಸ್ತುತ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.ಆಧಾರ ಯೋಜನೆಯಡಿ ಘಟಕ ವೆಚ್ಚವನ್ನು 01 ಲಕ್ಷಗಳಿಗೆ ಹೆಚ್ಚಿಸಿ ಶೇ. 50% ಬ್ಯಾಂಕ್ ಸಾಲ ಹಾಗೂ ಶೇ. 50% ಸಬ್ಸಿಡಿ ಮೊತ್ತ ಇರುತ್ತದೆ.ಅರ್ಜಿ ಸಲ್ಲಿಸಲು 18 ರಿಂದ 55 ವರ್ಷ ವಯಸ್ಸಿನೊಳಗಿನ ನಿರುದ್ಯೋಗಿಯಾಗಿರಬೇಕು.ಗ್ರಾಮೀಣ ಪ್ರದೇಶದವರ 11,500 ಹಾಗೂ ನಗರ ಪ್ರದೇಶದವರ 24,000 ವಾರ್ಷಿಕ ಆದಾಯ ಮೀರಿರಬಾರದು. ತೀವ್ರ ಬುದ್ದಿಮಾಂದ್ಯತೆ ಇರುವವರನ್ನು ಹೊರತುಪಡಿಸಿ ಇತರೆ ವಿಕಲಚೇತನರು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.  


ಇದನ್ನೂ ಓದಿ: ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ


ಅರ್ಜಿ ಸಲ್ಲಿಸಲು 2021ರ ಜನವರಿ. 16 ಕೊನೆಯ ದಿನವಾಗಿದ್ದು, ನಿಗದಿತ ಅರ್ಜಿ ನಮೂನೆಯನ್ನು ಕಚೇರಿಯಿಂದ ಪಡೆದು ಭರ್ತಿಮಾಡಿ ಅಂಗವಿಕಲರ ಗುರುತಿನ ಚೀಟಿ/ಯುಡಿಐಡಿ ಕಾರ್ಡ್, ಚಾಲ್ತಿಯಲ್ಲಿರುವ ದೃಢೀಕರಿಸಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರದಿಂದ ಪಡೆದ 10 ವರ್ಷಗಳ ವಾಸಸ್ಥಳ ಪ್ರಮಾಣ ಪತ್ರ, ಬ್ಯಾಂಕ್‌ಗಳಿAದ ಎನ್‌ಒಸಿ ಜೊತೆಗೆ 02 ಫೋಟೊಗಳನ್ನು ಲಗತ್ತಿಸಿ ದಾಖಲೆಗಳನ್ನು ಲಗತ್ತಿಸಿ  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. 


ಇದನ್ನೂ ಓದಿ: ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ


ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಎಂ.ಆರ್.ಡಬ್ಲೂöಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.