ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಸಾಧ್ಯ..ಇಲ್ಲಿದೆ ಅರ್ಜಿ ಸಲ್ಲಿಸುವ ಸುಲಭ ವಿಧಾನ..!
Gruhalakshmi Scheme apply in whatsapp : ರಾಜ್ಯಸರ್ಕಾರ ಮಹಿಳೆಯರಿಗೆಂದೇ ಮಾಸಿಕ 2000 ಹಣ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಇದೀಗ ಅದೇ ಯೋಜನೆಯ ಅರ್ಜಿ ಸಲ್ಲಿಕೆಗೆ ಸಹಾಯವಾಗಲು ಸರ್ಕಾರ ಹೊಸ ಸೌಲಭ್ಯವನ್ನು ನೀಡುತ್ತಿದೆ. ಈ ಸುಲಭ ವಿಧಾನದ ಮೂಲಕ ನೀವು ಮನೆಯಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿಒದೆ.
GruhaLakshmi Scheme : ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಈ ಬಗ್ಗೆ ಬಾರೀ ಚರ್ಚೆಯಾಗುತ್ತಿದ್ದು, ಸದ್ಯ ಗೃಹ ಲಕ್ಷ್ಮಿ ಯೋಜನೆಯ ಕುರಿತು ಹೊಸ ಅಪ್ಡೇಟ್ ಹೊರಬಿದ್ದಿದೆ. ಈ ಯೋಜನೆಯ ಲಾಭ ಪಡೆಯಲು ಸಾವಿರಾರು ಮಹಿಳೆಯರು ಕಾಯುತ್ತಿದ್ದಾರೆ.
ರಾಜ್ಯದಲ್ಲಿ ಈಗಾಗಲೇನ 70 ಲಕ್ಷಕ್ಕೂ ಅಧಿಕ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿ ಮಾಡಲಾಗಿದೆ. ಸದ್ಯ ಅರ್ಜಿ ಸಲ್ಲಿಸಿದವರು ಯೋಜನೆಯ ಲಾಭ ಪಡೆಯಲು ಕಾಯುತ್ತಿದ್ದಾರೆ. ಇದೀಗ ಸರ್ಕಾರ ಈ ಯೋಜನೆಯ ಅರ್ಜಿ ಸಲ್ಲಿಕೆಗೆ ಇನ್ನೊಂದು ಸುಲಭ ಮಾರ್ಗವನ್ನು ನೀಡಿದೆ ಇದರಿಂದ ನೀವು ಮನೆಯಲ್ಲೆ ಕುಳಿತು ಅರ್ಜಿ ಸಲ್ಲಿಸಬಹುದು.
ಇನ್ನು ಕಾಂಗ್ರೇಸ್ ಗ್ಯಾರಂಟಿ ಯೋಜನೆ ಅರ್ಜಿ ಸಲ್ಲಿಕೆ ಸಾಕಷ್ಟು ಗೊಂದಲ ಹಾಗೂ ಸರ್ವರ್ ಸಮಸ್ಯೆಯನ್ನು ಎದುರಿಸುತ್ತಿದೆ. ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆಯು ಕೆಲವು ದಿನಗಳ ಹಿಂದೆ ಇದೇ ಸರ್ವರ್ ಸಮಸ್ಯೆಯಿಂದ ಸ್ಥಗಿತಗೊಂಡಿತ್ತು. ಇದೀಗ ಅರ್ಜಿಯನ್ನು ವಾಟ್ಸಾಪ್‌ನಲ್ಲಿಯೂ ಸಲ್ಲಿಸಬಹುದು.
ಇದನ್ನೂ ಓದಿ-ಪೊಲೀಸರ ಬಲೆಗೆ ಬಿದ್ದ ಕುಖ್ಯಾತ ಮನೆಗಳ್ಳರು
ಹೌದು ರಾಜ್ಯಸರ್ಕಾರ ಚಾಟ್ ಬಾಟ್ ಲಿಂಕ್ ಆಗಿರುವ 8147500500 ಸಂಖ್ಯೆಯನ್ನು ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ನೀಡಿದ್ದು, ಈ ವಾಟ್ಸಾಪ್ ನಂಬರ್ ಮೂಲಕ ಸರ್ರಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಈ ನಂಬರ್ ಗೆ ತಮ್ಮ ಮಾಹಿತಿಯನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಜಿಯನ್ನು ಚಾಟ್ ಬಾಟ್ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕಚೇರಿಗಳಿಗೆ ಮಾಹಿತಿ ರವಾನಿಸುತ್ತದೆ.
ಇನ್ನು ಇದಕ್ಕೆ ಬೇಕಾಗುವ ಡಾಕುಮೆಂಟ್ಸ್ ಅಂದರೇ ಆಧಾರ್ ಕಾರ್ಡ್ ನ ಜೊತೆಗೆ ತಮ್ಮ ಪಡಿತರ ಚೀಟಿ. ಇನ್ನು ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಇಲ್ಲದಿದ್ದರೆ ಪಾಸ್ ಬುಕ್ ಮಾಹಿತಿಯನ್ನು ನೀಡಬೇಕಾಗುತ್ತದೆ.
ಸದ್ಯ ಈ ಚಾಟ್ ಬಾಟ್‌ನ ಮೂಲಕ 2 ಲಕ್ಷಕ್ಕೂ ಹೆಚ್ಚು ಅಪ್ಲಿಕೇಶನ್ ಸಲ್ಲಿಕೆಯಾಗಿವೆ. ನೀವು ಇನ್ನು ಕೂಡ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿಲ್ಲವಾದರೇ ಈ ಮಾಹಿತಿಯ ಸಹಾಯದಿಂದ ಅರ್ಜಿ ಸಲ್ಲಿಸಿ.
ಇದನ್ನೂ ಓದಿ-"ನೀವು ಸರಿಯಾದ ಜಾಗದಲ್ಲಿ ಕುಂತಿದ್ದಿರಿ" ಅಜಿತ್ ಪವಾರ್ ಗೆ ಅಮಿತ್ ಶಾ ಹೀಗೆ ಹೇಳಿದ್ದೇಕೆ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.