ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2020-21ನೇ ಸಾಲಿನ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ
2020-21ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಫೆಲೋಶಿಪ್‍ಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಂಗಳೂರು : 2020-21ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಫೆಲೋಶಿಪ್‍ಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವ್ಯಾಪ್ತಿಗೆ ಒಳಪಡುವ ಸಂಗೀತ ನೃತ್ಯಾದಿ ಕಲೆಗಳಲ್ಲಿ ಹೆಚ್ಚಿನ ಸಂಶೋಧನೆ, ಅಧ್ಯಯನ ಮಾಡಲು ಆಸಕ್ತಿ ಹೊಂದಿರುವವರಿಂದ ಫೆಲೋಶಿಪ್‍ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಸ್ನಾತಕೋತ್ತರ ಪದವೀಧರರಾಗಿರಬೇಕು. ವಯೋಮಿತಿ 45 ವರ್ಷದ ಒಳಗಿರಬೇಕು.
ಸಂಗೀತದ ಕುರಿತ ಪುಸ್ತಕಕ್ಕೆ ಬಹುಮಾನ ನೀಡಲು ಅರ್ಜಿ ಆಹ್ವಾನ
ಆಸಕ್ತರು ಸಂಶೋಧನೆ, ಅಧ್ಯಯನ ನಡೆಸುವ ವಿಷಯದ ಬಗ್ಗೆ ಸುಮಾರು 5-6 ಪುಟಗಳ ಸಾರಲೇಖನವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಅಧ್ಯಯನದ ಅವಧಿ ಆರು ತಿಂಗಳು. ಅರ್ಹ ಅಭ್ಯರ್ಥಿಗಳನ್ನು ತಜ್ಞರ ಸಮಿತಿ ನಡೆಸುವ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ ರೂ. ಒಂದು ಲಕ್ಷ ಸಂಶೋಧನಾ ನೆರವನ್ನು ನೀಡಲಾಗುವುದು.(ಇದರಲ್ಲಿ ಮಾರ್ಗದರ್ಶಕರಿಗೆ ರೂ.10,000-00 ಗಳ ಗೌರವ ಸಂಭಾವಣೆ ಹಾಗೂ ತಜ್ಞರಿಗೆ ರೂ.10,000 ಗಳ ಗೌರವ ಸಂಭಾವಣೆ ಒಳಗೊಂಡಿರುತ್ತದೆ) ಆಯ್ಕೆಯಲ್ಲಿ ಅಕಾಡೆಮಿ ತೀರ್ಮಾನವೇ ಅಂತಿಮವಾಗಿರುತ್ತದೆ.ರಾಜ್ಯದ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಅರ್ಜಿಗಳನ್ನು ಪಡೆಯಬಹುದಾಗಿದೆ. ಮತ್ತು ಅಕಾಡೆಮಿ ಅಂರ್ತಜಾಲ ತಾಣ: https://karnatakasangeetanrityaacademy.com ದ ಮೂಲಕ ಪಡೆದು ಸಲ್ಲಿಸಬಹುದಾಗಿದೆ.
ಅಕಾಡೆಮಿ ಕಾರ್ಯಲಯದಲ್ಲಿ ಕಛೇರಿ ವೇಳೆಯಲ್ಲಿ ಖುದ್ದಾಗಿ ಅಥವಾ ಸ್ವವಿಳಾಸದ 10 ರೂ. ಸ್ಟ್ಯಾಂಪ್ ಹಚ್ಚಿದ ಲಕೋಟೆಯೊಂದಿಗೆ ಮನವಿ ಸಲ್ಲಿಸಿ ಅಂಚೆ ಮೂಲಕ ಅರ್ಜಿಯನ್ನು ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿಯೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕಾರ್ಯಾಲಯ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560 002 ಇಲ್ಲಿಗೆ ದಿನಾಂಕ: 15-12-2020 ರ ಒಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಲಕೋಟಿಯ ಮೇಲೆ ಫೆಲೋಶಿಪ್‍ಗಾಗಿ ಅರ್ಜಿ ಅಂತಾ ನಮೂದಿಸಬೇಕು ಎಂದು ಪ್ರಕಟಣೆ ತಿಳಿಸಿದೆ.