ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರದಿಂದ ಸೌರಶಾಖ ಘಟಕ ಆರಂಭಿಸಲು ಅನುಮೋದನೆ
ಧಾರವಾಡ ತಾಲ್ಲೂಕಿನ ತೋಟಗಾರಿಕೆ ಬೆಳೆಗಾರರಿಗೆ, ಪ್ರಸಕ್ತ 2021-22 ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರಮುಖ ತೋಟಗಾರಿಕೆ ಬೆಳೆಗಳಾದ, ಮಾವು, ಸೀಬೆ, ಶುಂಠಿ, ಅರಿಶಿನ, ಈರುಳ್ಳಿ, ಅಂಜೂರ, ಮೆಣಸಿನಕಾಯಿ, ಕರಿಬೇವು, ನುಗ್ಗೆ ಹಾಗೂ ಪ್ರಮುಖ ಇತರೆ ಉತ್ಪನ್ನಗಳನ್ನು ಸುಸಜ್ಜಿತವಾಗಿ ಒಣಗಿಸಿ ಮೌಲ್ಯವರ್ಧನೆ ಮಾಡಲು ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದಿಂದ ಇತ್ತೀಚೆಗೆ ಹೊಸ ಯೋಜನೆಯಾದ ಸೌರಶಾಖ ಘಟಕಕ್ಕೆ ಅನುಮೋದನೆ ನೀಡಿರುವುದಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಶಿವಯೋಗಿ ಅವರು ತಿಳಿಸಿರುತ್ತಾರೆ.
ಬೆಂಗಳೂರು : ಧಾರವಾಡ ತಾಲ್ಲೂಕಿನ ತೋಟಗಾರಿಕೆ ಬೆಳೆಗಾರರಿಗೆ, ಪ್ರಸಕ್ತ 2021-22 ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರಮುಖ ತೋಟಗಾರಿಕೆ ಬೆಳೆಗಳಾದ, ಮಾವು, ಸೀಬೆ, ಶುಂಠಿ, ಅರಿಶಿನ, ಈರುಳ್ಳಿ, ಅಂಜೂರ, ಮೆಣಸಿನಕಾಯಿ, ಕರಿಬೇವು, ನುಗ್ಗೆ ಹಾಗೂ ಪ್ರಮುಖ ಇತರೆ ಉತ್ಪನ್ನಗಳನ್ನು ಸುಸಜ್ಜಿತವಾಗಿ ಒಣಗಿಸಿ ಮೌಲ್ಯವರ್ಧನೆ ಮಾಡಲು ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದಿಂದ ಇತ್ತೀಚೆಗೆ ಹೊಸ ಯೋಜನೆಯಾದ ಸೌರಶಾಖ ಘಟಕಕ್ಕೆ ಅನುಮೋದನೆ ನೀಡಿರುವುದಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಶಿವಯೋಗಿ ಅವರು ತಿಳಿಸಿರುತ್ತಾರೆ.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಫೋಟೋಗೆ ಅಯ್ಯಪ್ಪಸ್ವಾಮಿ ದರ್ಶನ ಮಾಡಿಸಿದ ಅಭಿಮಾನಿಗಳು
ಇಂತಹ ಆಧುನಿಕ ತಂತ್ರಜ್ಞಾನದ ಘಟಕಗಳನ್ನು ರೈತರು ತಮ್ಮ ತೋಟಗಳಲ್ಲಿ ಸರ್ಕಾರದಿಂದ ಅನುಮೋದಿತ ಸಂಸ್ಥೆಗಳಿಂದ ಸ್ವಂತ ಖರ್ಚಿನಲ್ಲಿ ಅನುಷ್ಠಾನಗೊಳಿಸಲು ಸರ್ಕಾರದಿಂದ ಘಟಕ ವೆಚ್ಚಕ್ಕೆ ಶೇ.50 ರಷ್ಟು ಸಹಾಯಧನ ನೀಡಲು ತೋಟಗಾರಿಕೆ ಇಲಾಖೆಯಿಂದ ವಿಫುಲ ಅವಕಾಶವಿದ್ದು ಪ್ರತಿ ರೈತರಿಗೆ 100 ಕೆ.ಜಿ ಸಾಮಥ್ರ್ಯದ ಘಟಕ್ಕೆ ಶೇ.50 ರಂತೆ ಗರಿಷ್ಠ ರೂ.27,500/- ಗಳು ಹಾಗೂ 1000 ಕೆ.ಜಿ ಸಾಮಥ್ರ್ಯದ ಸೌರಶಾಖ ಘಟಕವನ್ನು ಸ್ಥಾಪಿಸಲು ಗರಿಷ್ಠ ರೂ.2,85,000/- ಗಳವರೆಗೆ ಸಹಾಯಧನ ನೀಡುವುದಾಗಿ ಹಾಗೂ ಇದರ ಸವಲತ್ತನ್ನು ಧಾರವಾಡ ತಾಲ್ಲೂಕಿನ ರೈತರು ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಿಕೊಂಡಿರುತ್ತಾರೆ.
ಇದನ್ನೂ ಓದಿ:"ರಾಷ್ಟ್ರೀಯವಾದಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ಈ ದೇಶ ಮುಂದುವರೆಸಿದೆ": ವಿಚಾರಣೆ ಬಳಿಕ ಕಂಗನಾ ಪೋಸ್ಟ್
ಈ ತಂತ್ರಜ್ಞಾನದ ಕುರಿತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಿರುತ್ತಾರೆ ಮತ್ತು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ಹಾಗೂ ಕೃಷಿ ವಿಶ್ವ ವಿದ್ಯಾಲಯ, ಸಂಶೋದನೆ ಹಾಗೂ ವಿಸ್ತರಣೆ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಹಾಗೂ ಈ ಕುರಿತು ಮುಂದಿನ ವಾರದಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮ ಮತ್ತು ರೈತರ ತೋಟಗಳಲ್ಲಿ ತಾಂತ್ರಿಕ ಕ್ಷೇತ್ರೋತ್ಸವ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Viral Photo: ಸಾರ್ವಜನಿಕವಾಗಿ ಕಪಿಲ್ ದೇವ್‌ಗೆ ಮುತ್ತಿಟ್ಟ ರಣವೀರ್ ಸಿಂಗ್, 'Awkward kiss' ಫೋಟೋ ವೈರಲ್.!
ಆಸಕ್ತ ರೈತರು ಕಛೇರಿಗೆ ಸಂಪರ್ಕಿಸಿ ಕೂಡಲೇ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಶಿವಯೋಗಪ್ಪ ಹಿಸತೋನಿ-9743518608, 7019681952, ಮಹೇಶ ಪಟ್ಟಣಶೆಟ್ಟಿ, ಸತೋಅ, ಅಮ್ಮಿನಬಾವಿ- 9916114535, ಯಲ್ಲಮ್ಮ ಐರಣಿ, ಸತೋಅ, ಧಾರವಾಡ- 9591164754, ವಾಯ್. ಎ. ಕುರುಬೆಟ್ಟ, ಸತೋಅ ಅಳ್ನಾವರ ಮತ್ತು ಗರಗ- 7353674533 ಸಂಪರ್ಕಿಸಬಹುದೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.