ಬೆಂಗಳೂರು: ಮುಂಬರುವ ಜೆಡಿಎಸ್ ನಲ್ಲಿ ಜೆಡಿಎಸ್ ನಿಂದ ಯಾರಾದರೂ ಟಿಕೇಟ್ ಬಯಸುವುದಾರೆ ಈ ನಿಯಮ ಕಡ್ಡಾಯ. ಏನಪ್ಪಾ ನಿಯಮ ಅಂತೀರಾ... ನಾನು ಭ್ರಷ್ಟಾಚಾರ ಮಾಡುವುದಿಲ್ಲ, ನಮ್ಮ ಜನರಿಗಾಗಿ ಕೆಲಸ ಮಾಡುತ್ತೇವೆ ಎಂದು ಪ್ರಮಾಣ ಮಾಡಬೇಕು.


COMMERCIAL BREAK
SCROLL TO CONTINUE READING

ಇಂಥಹ ಒಂದು ಹೊಸ ಯೋಚನೆ ಬಂದಿರುವುದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ. ಎಂಎಲ್ಎ ಟಿಕೇಟ್ ಪಡೆಯುವ ಅಭ್ಯರ್ಥಿಗಳು ನಾನು ಭ್ರಷ್ಟಾಚಾರ ಮಾಡುವುದಿಲ್ಲ ಎಂದು ಸಾರ್ವಜನಿಕವಾಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂಬ ಆಲೋಚನೆ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲು ಎಚ್ಡಿಕೆ ಇಂದು ಶಾಸಕರ ಸಭೆ ಕರೆದಿದ್ದಾರೆ.


ಡಿ.25ರೊಳಗೆ 125 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲು ನಿರ್ಧಾರ ಮಾಡಿರೋ ಎಚ್‌ಡಿಕೆ, ಮೊದಲ ಪಟ್ಟಿ ಬಿಡುಗಡೆಗೂ ಮುನ್ನ ಇಂಥ ತೀರ್ಮಾನಕ್ಕೆ ಮುಂದಾಗಿದ್ದಾರೆ.