ಧಾರವಾಡ : ಗದಗ, ಶಿರಟ್ಟಿ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಂಗಳೂರಿನ 22 ಜನದೂರುದಾರರು ಹುಬ್ಬಳ್ಳಿಯ ಆಶೀರ್ವಾದ್ ಡೆವಲ್ಪರ್ಸ್‍ಜತೆ ಧಾರವಾಡದ ಸತ್ತೂರಿನಲ್ಲಿ ಪ್ಲಾಟ್ ಖರೀದಿಸಲು 2012 ನೇ ಇಸ್ವಿಯಲ್ಲಿ ಒಪ್ಪಂದ ಪತ್ರ ಮಾಡಿಕೊಂಡಿದ್ದರು. ಎಲ್ಲ ದೂರುದಾರರು ಖರೀದಿ ಒಪ್ಪಂದದ ಮುಂಗಡ ಹಣವನ್ನು ಆಶೀರ್ವಾದ ಡೆವಲ್ಪರ್ಸ್ 2010 ರಿಂದ 2012 ಇಸ್ವಿವರೆಗೆ ಸಂದಾಯ ಮಾಡಿದ್ದರು. ಎಲ್ಲ ದೂರುದಾರರಿಂದ ಹಣ ಪಡೆದು ಸತ್ತೂರಿನಲ್ಲಿ ನಿರ್ಮಿಸುತ್ತಿರುವ ಲೇಔಟ್‍ನಲ್ಲಿ ಪ್ಲಾಟ್‍ಗಳನ್ನು ಖರೀದಿಗೆ ಕೊಡುವುದಾಗಿ ಆಶೀರ್ವಾದ ಡೆವಲ್ಪರ್ಸ್ ನ ಪಾಲುದಾರರಾದ ಶ್ರೀ ಮಾರುತಿ ಬಾರಕೇರ, ಸಚ್ಚಾನಂದಗೂರಾನಿ, ಸಲೀಮ್ ದೇವಿನಹಳ್ಳಿ, ಆಸ್‍ಪಾಕ್‍ಜಪಾತಿ ಹಾಗೂ ಪ್ರಕಾಶ ಪಾಟೀಲ್‍ಅನ್ನುವವರು ಸಹಿ ಮಾಡಿ ಖರೀದಿ ಕರಾರು ಒಪ್ಪಂದ ಪತ್ರ ಗಳನ್ನು ಮಾಡಿಕೊಟ್ಟಿದ್ದರು.


COMMERCIAL BREAK
SCROLL TO CONTINUE READING

ಒಪ್ಪಂದ ಪತ್ರಆದ ಸುಮಾರು 12-13 ವರ್ಷ ಕಳೆದರೂ ಎದುರುದಾರ ಆಶೀರ್ವಾದ ಡೆವಲ್ಪರ್ಸ್ ಮತ್ತು ಅದರ ಪಾಲುದಾರರು ತಮಗೆ ಪ್ಲಾಟ್‍ಗಳನ್ನು ಖರೀದಿ ಹಾಕಿ ಕೊಟ್ಟಿಲ್ಲ ಮತ್ತು ತಮ್ಮ ಹಣವನ್ನು ವಾಪಸ್ಸುಕೊಟ್ಟಿಲ್ಲ ಅಂತ ಹೇಳಿ ಎದುರುದಾರರ ನಡಾವಳಿಕೆ ಸೇವಾ ನ್ಯೂನ್ಯತೆ ಆಗುತ್ತದೆ ಅಂತಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ.14/08/2023 ರಂದುಎಲ್ಲ 22 ಜನ ದೂರುದಾರರು ಆಶೀರ್ವಾದ ಡೆವಲ್ಪರ್ಸ್/ ಪಾಲುದಾರರ ವಿರುದ್ಧತಮ್ಮ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದರು.


ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿ; ಕೈಜೋಡಿಸಿ ಮನವಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡ 


ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಆಶೀರ್ವಾದ ಡೆವಲಪರ್ಸ್‍ರವರು ತಮ್ಮಿಂದ ಯಾವುದೇ ರೀತಿಯ ಸೇವಾ ನ್ಯೂನ್ಯತೆ ಆಗಿಲ್ಲ. ನಾವು ಅಭಿವೃದ್ದಿ ಪಡಿಸಲು ಹೊರಟಿದ್ದ ಭೂಮಿಯನ್ನು ಕೆಎಚ್‍ಬಿಯವರು ಭೂಸ್ವಾಧೀನ ಮಾಡಿಕೊಂಡಿದ್ದರಿಂದ ದೂರುದಾರರಿಗೆ ಪ್ಲಾಟ್ ಖರೀದಿ ಪತ್ರ ಬರೆದುಕೊಡಲು ಆಗಿಲ್ಲ ಅಲ್ಲದೇ ಕೆಎಚ್‍ಬಿಯವರ ಭೂಸ್ವಾಧೀನ ಆದೇಶವನ್ನು ಪ್ರಶ್ನಿಸಿದ್ದು, ಮಾನ್ಯ ಉಚ್ಛನ್ಯಾಯಾಲಯ ಧಾರವಾಡ ಬೆಂಚ್‍ನಲ್ಲ್ಲಿ ಸದರಿ ಪ್ರಕರಣ ವಿಚಾರಣೆ ಹಂತದಲ್ಲಿದೆ ಅಂತಾ ಆಯೋಗಕ್ಕೆ ತಮ್ಮ ಆಕ್ಷೇಪಣೆ ಸಲ್ಲಿಸಿದ್ದರು.


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ 2012 ರಲ್ಲಿ ಎಲ್ಲ ದೂರುದಾರ ಜೊತೆ ಆದ ಖರೀದಿ ಒಪ್ಪಂದದಂತೆ ಮುಂಗಡ ಹಣ ಪಡೆದುಕೊಂಡು ಅವರಿಗೆ ಪ್ಲಾಟ್ ಖರೀದಿ ಪತ್ರ ಬರೆದುಕೊಡುವಲ್ಲಿ ಎದುರುದಾರ ಆಶೀರ್ವಾದ ಡೆವಲಪರ್ಸ್ ಹಾಗೂ ಅದರ ಪಾಲುದಾರರು ವಿಫಲರಾಗಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ಎಲ್ಲ ದೂರುದಾರರು ಸಂದಾಯ ಮಾಡಿದ ಒಟ್ಟು ರೂ.57,72,743/- ಮತ್ತು ಅದರ ಮೇಲೆ ಹಣ ಸಂದಾಯ ಮಾಡಿದ ದಿನಾಂಕ ದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ. ಎಲ್ಲ ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ತಲಾ ರೂ. 50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ತಲಾ ರೂ.10,000/- ನೀಡುವಂತೆ ಆಶೀರ್ವಾದ ಡೆವಲಪರ್ಸ್‍ಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.