ವಿಧಾನಸಭೆ ಚುನಾವಣೆ 2023: ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಕೊರತೆ!; ಕೈ ಪಾಲಯದ ತಂತ್ರ ಏನು?
Assembly Elections 2023: ಪ್ರಮುಖವಾಗಿ ಬಿಜೆಪಿಗೆ ಕೆಲ ನಾಯಕರ ವಲಸೆ, ಕಾಂಗ್ರೆಸ್ಗೆ ಅಭ್ಯರ್ಥಿ ಕೊರತೆ ಹೆಚ್ಚಾಗಿದೆ,ಅಭ್ಯರ್ಥಿ ಕೊರತೆಯ ನಡುವೆ ಗೆಲ್ಲೋದು ಹೇಗೆ ಅಂತಲೂ ಪ್ಲಾನ್ ರೂಪಿಸಿದೆ.
Assembly Elections 2023: 2023ರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದಂತೆ, ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಅಭ್ಯರ್ಥಿಗಳ ಕೊರತೆ ಎದುರಾಗಿದೆ, ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಕೆಲ ತಂತ್ರಗಳನ್ನ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ನಗರದಲ್ಲಿ 12ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಸ್ಟ್ರಾಂಗ್ ಎಂದು ಅರೆತಿರುವ ಕಾಂಗ್ರೆಸ್, ಆಂತರಿಕ ಸಭೆಯಲ್ಲಿ ಅಭ್ಯರ್ಥಿ ಕೊರತೆ ಬಗ್ಗೆ ಚರ್ಚೆ ನಡೆಸಿದೆ. ಈ ಸಭೆಯಲ್ಲಿ ಬಿಜೆಪಿಗೆ ಪೈಪೋಟಿ ಕೊಡಬಲ್ಲ ಅಭ್ಯರ್ಥಿ ಕೊರತೆ ಬಗ್ಗೆ ಚರ್ಚೆ ನಡೆಸಿದ್ದು 28 ಕ್ಷೇತ್ರಗಳ ಪೈಕಿ 14ರಲ್ಲಿ ಗೆಲ್ಲುವ ಅಭ್ಯರ್ಥಿಯಿಲ್ಲ ಎಂಬ ಬಗ್ಗೆ ಭಾರೀ ಚರ್ಚೆ ಆಗಿದೆ.
ವಾಸ್ತವವಾಗಿ, ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯು ಬಹಳ ಮಹತ್ವದ್ದಾಗಿದೆ. ಮತ್ತೊಂದು ಮುಖ್ಯ ಅಂಶವೆಂದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಕೂಡ ಬಹಳ ಮುಖ್ಯವಾಗಿದೆ. ಏತನ್ಮಧ್ಯೆ, ಪ್ರಮುಖವಾಗಿ ಬಿಜೆಪಿಗೆ ಕೆಲ ನಾಯಕರ ವಲಸೆ, ಕಾಂಗ್ರೆಸ್ಗೆ ಅಭ್ಯರ್ಥಿ ಕೊರತೆ ಹೆಚ್ಚಾಗಿದೆ,ಅಭ್ಯರ್ಥಿ ಕೊರತೆಯ ನಡುವೆ ಗೆಲ್ಲೋದು ಹೇಗೆ ಅಂತಲೂ ಪ್ಲಾನ್ ರೂಪಿಸಿದೆ.
ಇದನ್ನೂ ಓದಿ- ಸರ್ಕಾರಿ ಶಾಲೆ ಏಕಲವ್ಯರು... ಹಿರಿಯರನ್ನು ನೋಡಿ ದೊಣ್ಣೆವರಸೆ ಕಲಿತ ವಿದ್ಯಾರ್ಥಿಗಳು..!
‘ಕೈ’ಗೆ ಚಿಂತೆಯಾದ ಕ್ಷೇತ್ರಗಳು:
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರಿನ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ.
ಯಲಹಂಕ
ಕೆ.ಆರ್ ಪುರಂ
ಯಶವಂತಪುರ
ರಾಜರಾಜೇಶ್ವರಿ ನಗರ
ಬೊಮ್ಮನಹಳ್ಳಿ
ರಾಜಾಜಿನಗರ
ಮಹಾದೇವಪುರ
ಸಿ.ವಿ ರಾಮನ್ ನಗರ
ದಾಸರಹಳ್ಳಿ
ಬೆಂಗಳೂರು ದಕ್ಷಿಣ
ಮಹಾಲಕ್ಷ್ಮಿ ಲೇಔಟ್
ಮಲ್ಲೇಶ್ವರಂ
ಬಸವನಗುಡಿ
ಪದ್ಮನಾಭನಗರ
ಇದನ್ನೂ ಓದಿ- ಸರ್ವರಿಗೂ ವಸತಿ ಕಲ್ಪಿಸಲು ನಮ್ಮ ಸರ್ಕಾರ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ
ಗೆಲ್ಲಲು ಕಾಂಗ್ರೆಸ್ ಪ್ಲಾನ್ :
ತಂತ್ರ 1 : ಚುನಾವಣೆಗೆ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸುವುದು
ತಂತ್ರ 2 : ಗೆಲ್ಲುವ ಅಭ್ಯರ್ಥಿಗಳಿಗೆ ಅವಕಾಶವನ್ನ ನೀಡುವುದು
ತಂತ್ರ 3 : ವಿರೋಧಿ ಅಲೆ ಇರುವ ಕ್ಷೇತ್ರದಲ್ಲಿ ತಕ್ಷಣ ಅಲರ್ಟ್
ತಂತ್ರ 4 : ಕಡಿಮೆ ಅಂತರದಲ್ಲಿ ಗೆದ್ದಿರುವ ಕ್ಷೇತ್ರಗಳತ್ತ ಹೆಚ್ಚಿನ ಚಿತ್ತ
ತಂತ್ರ 5 : ಗೆಲ್ಲಬಹುದಾದ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ
ತಂತ್ರ 6 : ಸಮೀಕ್ಷಾ ವರದಿ ಆಧರಿಸಿ ಕಾರ್ಯತಂತ್ರ ಬದಲಾವಣೆ
ತಂತ್ರ 7 : ಮೂರ್ನಾಲ್ಕು ತಿಂಗಳಿರುವಾಗಲೇ ಅಭ್ಯರ್ಥಿ ಘೋಷಣೆ
ತಂತ್ರ 8 : ನಿರಂತರವಾಗಿ ಕ್ಷೇತ್ರವಾರು ಪ್ರಚಾರ ಆರಂಭಿಸುವುದು
ತಂತ್ರ 9 : ರಸ್ತೆ ಗುಂಡಿಗೆ ಜನರು ಬಲಿಯಾಗಿರುವ ಅಸ್ತ್ರ ಪ್ರಯೋಗ
ತಂತ್ರ 10: ಮಳೆ ವೇಳೆ ತಕ್ಷಣ ಸ್ಪಂದಿಸದಿರುವುದನ್ನ ಒತ್ತಿ ಹೇಳುವುದು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.