ಬೆಂಗಳೂರು : ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲು ಹಿನ್ನಲೆ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರ ಬದಲಾವಣೆಗೆ ಆಗ್ರಹ ಹೆಚ್ಚಾಗಿದೆ. ಜೊತೆಗೆ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನವನ್ನು ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನೀಡಬೇಕು ಎಂಬ ಬೇಡಿಕೆ ಪಕ್ಷದಲ್ಲಿ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಮತ್ತೆ  ಕುಮಾರಸ್ವಾಮಿ Vs ರೇವಣ್ಣ ಕುಟುಂಬದ ಫೈಟ್ :
ಹಾಸನ ಟಿಕೆಟ್ ವಿಚಾರದ ಜೋರು ಪೈಪೋಟಿ ಬಳಿಕ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ರೇವಣ್ಣ ಕುಟುಂಬ, ಸಂಸದ ಪ್ರಜ್ವಲ್ ರೇವಣ್ಣ ಕಣ್ಣು ಇಟ್ಟಿದ್ದಾರೆ ಹಾಗೂ ರೇವಣ್ಣ ಬಣದ ವಾದ ಈ ಕೆಳಕಂಡಂತಿದೆ... 


ಇದನ್ನೂ ಓದಿ- Loksabha Election: 2024ರ ಲೋಕಸಭೆ ಚುನಾವಣೆಗೆ ಮಾಜಿ ಪಿಎಂ ದೇವೇಗೌಡರ ಕ್ಷೇತ್ರ ಇದೇನಾ?


ನಿಖಿಲ್ ಗೆ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯ ಬಾರದೆಂಬ ವಾದ ಏಕೆ?
>> ನಿಖಿಲ್ ಗೆ ಸಸತ ಎರಡು ಸೋಲು ( ಮಂಡ್ಯ ಲೋಕಸಭೆ, ರಾಮನಗರ ವಿಧಾನ ಸಭೆ)
>> ರಾಜ್ಯಾಧ್ಯಕ್ಷರಾಗಿ ರಾಜ್ಯ ಪ್ರವಾಸ ಮಾಡದ ಆರೋಪ
>> ನಿಖಿಲ್ ಗಿಲ್ಲ ಪ್ರಜ್ವಲ್ ರಷ್ಟು ವರ್ಚಸ್ಸು


ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಜ್ವಲ್ ಹೆಸರು ಏಕೆ ಮುನ್ನಲೆಗೆ ಬರುತ್ತಿದೆ?
* ಮೊದಲ ಪ್ರಯತ್ನದಲ್ಲಿ ಲೋಕಸಭಾ ಸದಸ್ಯನಾಗಿ ಸಕ್ಸಸ್ ಆಗಿದ್ದಾರೆ.
* ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಜೆಡಿ ಎಸ್ ಅಭ್ಯರ್ಥಿ ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ
* ರಾಜ್ಯ ಪ್ರವಾಸದ ಮೂಲಕ ಪಕ್ಷ ಸಂಘಟನೆಯ ಮಾಡುವ ಸಾಮರ್ಥ್ಯ


ಇದನ್ನೂ ಓದಿ- ರಾಜ್ಯದಲ್ಲಿ ಇನ್ನೂ 3 ದಿನ ಗುಡುಗು ಸಹಿತ ಭಾರೀ ಮಳೆ: ಹಲವು ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್'


2024ರ ಲೋಕಸಭಾ ಚುನಾವಣೆ ಗೆ ತಯಾರಿ ಹಿನ್ನಲೆ ನಿಖಿಲ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ದಲ್ಲಿ ಇದ್ರೆ ಮಂಡ್ಯಗಷ್ಟೇ ಸಿಮಿತ ಎಂಬ ವಾದ‌ ಜೆಡಿ ಎಸ್ ಯುವ‌ಘಟಕದ್ದಾಗಿದೆ. 


ಒಟ್ಟಾರೆಯಾಗಿ, ದೊಡ್ಡ ಗೌಡರ ಕುಟುಂಬದ ಹಿರಿ ಸೊಸೆ ಭವಾನಿ ರೇವಣ್ಣ ಅವರ ಟಿಕೆಟ್ ವಿಚಾರ ಇನ್ನು ಮುಂದುವರೆಯುತ್ತಲೇ ಇದ್ದು ಕುಟುಂಬದ ಜಗಳ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿರುವುದನ್ನೂ ಕಡೆಗಣಿಸುವಂತಿಲ್ಲ. ಈ ಎಲ್ಲಾ ಗೊಂದಲಗಳಿಗೆ ಬ್ರೇಕ್ ಹಾಕಲು ದೊಡ್ಡ ಗೌಡರು ಎಂಟ್ರಿ ಕೊಡುತ್ತಾರಾ? ಜೆಡಿಎಸ್ ಯುವ ರಾಜ್ಯಾಧ್ಯಕ್ಷರನ್ನು ಬದಲಿಸುವ ಬಗ್ಗೆ ಪಕ್ಷದ ನಿಲುವೇನು? ಈ ಕುರಿತಂತೆ ದೇವೇಗೌಡರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.