ಚಿಕ್ಕೋಡಿ: ಕೃಷಿಯಲ್ಲಿ ಲಾಭವಿಲ್ಲದ ಎಂದು ಹೊಲಗದ್ದೆ ಮಾರಿ ಪಟ್ಟಣ-ನಗರ ಪ್ರದೇಶ ಸೇರುವರ ಮಧ್ಯೆ ಒರ್ವ ರೈತ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿ ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರುಟ್ ಬೆಳೆದು ಕೈತುಂಬಾ ಆದಾಯವನ್ನು ಪಡೆದುಕೊಂಡು ಇನ್ನುಳಿದ ರೈತರಿಗೆ  ಮಾದರಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಜೂರ್ ಗ್ರಾಮದ ರಾವಸಾಬ್ ಅಪ್ಪಾಸಾಬ ಐಗಳಿ ಎಂಬುವರು ತಮ್ಮ ನಾಲ್ಕು ಎಕರೆ ಪ್ರದೇಶದಲ್ಲಿ  ಡ್ರ್ಯಾಗನ್ ಫ್ರುಟ್ ಬೆಳೆದು ವರ್ಷಕ್ಕೆ 24 ಲಕ್ಷ ಆದಾಯವನ್ನು ಪಡೆದುಕೊಂಡು ಕೃಷಿಯಲ್ಲಿ ಲಾಭದಾಯಕ ಬೆಳೆಯನ್ನು ಬೆಳೆಯುತ್ತಿದ್ದಾರೆ. ಮೊದಲೇ ವರ್ಷದಲ್ಲಿ ಒಂದು ಎಕರೆ ಬೆಳೆದು ಹಂತಹಂತವಾಗಿ ಮೂರು ಎಕರೆಯಲ್ಲಿ ವಿಸ್ತರಣೆ ಮಾಡಿಕೊಂಡು ಒಟ್ಟು ನಾಲ್ಕು ಎಕರೆಯಲ್ಲಿ ಆರು ಸಾವಿರ ಸಸಿಗಳನ್ನು ನಾಟಿ ಮಾಡಿ ಕೈತುಂಬಾ ಆದಾಯವನ್ನು ಪಡೆಯುತ್ತಿದ್ದಾರೆ.


ಇದನ್ನೂ ಓದಿ: ಬಿಜೆಪಿ ಷಡ್ಯಂತ್ರಕ್ಕೆ ನ್ಯಾಯಾಲಯ ಮತ್ತು ನನ್ನ ಆಸ್ತಿ ಪಟ್ಟಿ ಉತ್ತರ ಕೊಡುತ್ತೆ : ಡಿಸಿಎಂ ಡಿ.ಕೆ.ಶಿವಕುಮಾರ್


ಫಸಲನ್ನು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ, ಕೊಲ್ಲಾಪುರ, ಮತ್ತು ಹೈದರಾಬಾದ್ , ವಿಜಯಪೂರ, ಬೆಂಗಳೂರು, ಮಂಗಳೂರು, ನಗರಗಳಿಗೆ ಸರಬರಾಜು ಮಾಡುತ್ತಾರೆ, ಮತ್ತು ಒಂದು ಕೆಜಿಗೆ 70ರೂ. ರಿಂದ 200ರೂಪಾಯಿ ವರಿಗೆ ಮಾರಟ ವಾಗುತ್ತದೆ, ಒಂದು ಎಕರೆಗೆ ಆರು ಲಕ್ಷದಿಂದ ಎಂಟು ಲಕ್ಷದ ರೂಪಾಯಿ ಆದಾಯ ಬರುತ್ತದೆ, ಇದಕ್ಕೆ ರೋಗಬಾಧೆ ಕಡಿಮೆ ಇರುವುದರಿಂದ ಖರ್ಚು ಕಡಿಮೆ ಇರುವುದರಿಂದ ಆದಾಯ ಲಾಭದಾಯಕವಾಗಿದೆ, ಈ ಬೆಳೆಯನ್ನು ಬೆಳೆದು ನಾವು ಖುಷಿಯಾಗಿದೆ ಎಂದು ರೈತ ರಾವಸಾಬ್ ಅಪ್ಪಾಸಾಬ ಐಗಳಿ ಸಂತಸ ವ್ಯಕ್ತಪಡಿಸಿದರು.


ರೈತ ಮಹಿಳೆ ಲತಾ ರವಸಾಬ್ ಐಗಳಿ ಮಾತನಾಡಿ, ಮೊದಲಿಗೆ ನಮಗೆ ಇಲ್ಲಿ ಕುಡಿಯುದಕ್ಕೆ ನೀರು ಇದ್ದಿಲ್ಲ, ಸಂಪೂರ್ಣವಾಗಿ ಬರಡು ಭೂಮಿಯಲ್ಲಿ ಸ್ವಲ್ಪ ಪ್ರಮಾಣದ ನೀರಿನಲ್ಲಿ ಬೆಳೆ ಬಹುದಾದ ಈ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿ ಸದ್ಯ ಲಕ್ಷಾಂತರ ರೂಪಾಯಿ ಆದಾಯವನ್ನು ಪಡೆದುಕೊಳುತ್ತೇವೆ. ಈ ಬೆಳೆಯಲ್ಲಿ ಖರ್ಚು ಕಡಿಮೆ ಇರುದರ ಜೊತೆಗೆ ನಾವು ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ಈ ಡ್ರ್ಯಾಗನ್ ಫ್ರುಟ್ ಬೆಳೆಯುತ್ತಿದ್ದೆವೆ, ಇದರಲ್ಲಿ ಹಲವು ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ, ಸದ್ಯ ನಾವು ನಮ್ಮ ತೋಟದಲ್ಲಿ ಐದು ತೆರನಾದ ಹಣ್ಣುಗಳನ್ನು ಬೆಳೆಯುತ್ತಿದ್ದೆವೆ, ರೇಡ್ ವೈಡ್, ಯಲ್ಲೋ ವೈಟ್, ಜಂಬೂ ರೇಡ್, ಸಿ ವೈರಟಿ, ರೆಗ್ಯುಲರ್ ರೆಡ್, ತರಹದ ಹಣ್ಣು ಬೆಳೆಯುತ್ತೇವೆ, ತಂತ್ರಜ್ಞಾನ ಬಳಸಿಕೊಂಡು ನಮ್ಮ ಜಮೀನುಗಳಿಗೆ ಹೊಂದುವಂತಹ ಹಲವು ಬೆಳೆಗಳನ್ನು ಬೆಳೆಯಬಹುದು, ಸಾಂಪ್ರಾದಾಯಿಕ ಕೃಷಿಯನ್ನು ಬಿಟ್ಟು ರೈತರು ಬೇರೆ ಬೆಳೆಗಳ ಕಡೆ ಗಮನವನ್ನು ಕೊಡಬೇಕು ಎಂದು ಉಳಿದ ರೈತರಿಗೆ ಸಲಹೆ ನೀಡಿದರು, ಈ ಕೃಷಿಯಿಂದ ನಮಗೆ ಲಾಭದಾಯಕ ಉದ್ಯಮವಾಗಿ ಎಂದು ಹೇಳಿದರು.


ಇದನ್ನೂ ಓದಿ: ಜೆಡಿಎಸ್​​ನಿಂದ ಸಿಎಂ ಇಬ್ರಾಹಿಂಗೆ ಗೇಟ್‌ ಪಾಸ್‌..! ಹೈಕೋರ್ಟ್‌ಗೆ ಹೋಗ್ತೀನಿ ಎಂದ ಮಾಜಿ ಅಧ್ಯಕ್ಷ


ಪಕ್ಕದ ರೈತರಿಗೆ ಅನುಕೂಲವಾಗಲಿ ಎಂದು ಈ ದಂಪತಿಗಳು ಉಚಿತವಾಗಿ ಡ್ರ್ಯಾಗನ್ ಫ್ರುಟ್ ಸಸಿಗಳನ್ನು ವಿತರಣೆ ಮಾಡಿ ಉದಾರತೆ ಮೆರೆಯುತ್ತಿದ್ದಾರೆ, ಇವರುಗಳ ಸತತ ಪರಿಶ್ರಮದಿಂದ ಅಲ್ಪಸ್ವಲ್ಪ ನೀರಿನಲ್ಲಿ ಬರಡು ಭೂಮಿಯಲ್ಲಿ ಚಿನ್ನದಂತ ಬೆಳೆಯನ್ನು ಬೆಳೆದು ಕೃಷಿ ರಂಗದಲ್ಲಿ ಮಾದರಿಯಾಗಿದ್ದಾರೆ, ಈಟಿವಿ ಭಾರತ ಚಿಕ್ಕೋಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.