Bengaluru-Mysore Routeʼs: ಭಾರತೀಯ ರೈಲ್ವೆ ಇಲಾಖೆಯು ಅತ್ಯಂತ ದೊಡ್ಡ ಸಾರಿಗೆಯಾಗಿದೆ. ಪ್ರತಿನಿತ್ಯವೂ ರೈಲುಗಳಲ್ಲಿ ಕೊಟ್ಯಂತರ ಪ್ರಯಾಣಿಕರು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸುತ್ತಾರೆ. ಸುರಕ್ಷತೆ ಮತ್ತು ಟಿಕೆಟ್‌ ದರಗಳು ಕಡಿಮೆ ಇರುವ ಹಿನ್ನೆಲೆ ರೈಲ್ವೆಯಲ್ಲಿ ಹೆಚ್ಚಿನ ಜನರು ಪ್ರಯಾಣಿಸುತ್ತಾರೆ. ಬೆಂಗಳೂರು-ಮೈಸೂರು ನಡುವೆ ಯಾವ್ಯಾವ ರೈಲುಗಳು ಸಂಚರಿಸುತ್ತವೆ ಹಾಗೂ ಯಾವ ಸಮಯದಲ್ಲಿ ಸಂಚಾರ ನಡೆಸುತ್ತವೆ ಅನ್ನೋದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.  


COMMERCIAL BREAK
SCROLL TO CONTINUE READING

ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ರೈಲುಗಳ ಸೇವೆ ನೀಡಲಾಗಿದೆ. ಈ ಮಾರ್ಗದಲ್ಲಿ ಒಟ್ಟು 20 ರೈಲುಗಳು ಪ್ರತಿದಿನವೂ ಸಂಚಾರ ನಡೆಸುತ್ತವೆ. ಅಲ್ಲದೆ ಪ್ರಯಾಣಿಕರ ಬೇಡಿಕೆ ಮೇರೆಗೆ ಆಗಾಗ ವಿಶೇಷ ರೈಲುಗಳನ್ನು ಸಹ ಬಿಡಲಾಗುತ್ತದೆ. ಈ ಮಾರ್ಗದ 20 ರೈಲುಗಳ ಪೈಕಿ ಹೆಚ್ಚಿನವು ಎಕ್ಸ್‌ಪ್ರೆಸ್ ರೈಲುಗಳಾಗಿವೆ. ಈ ಮಾರ್ಗದಲ್ಲಿ 10 ರೈಲುಗಳು ವಿಶ್ವಾಸಾರ್ಹ ಮತ್ತು ಆರಾಮದಾಯಕ ಪ್ರಯಾಣ ಒದಗಿಸುತ್ತವೆ, 5 ಸೂಪರ್‌ಫಾಸ್ಟ್ ರೈಲುಗಳಿದ್ದರೆ, 2 ಮೆಮು ರೈಲುಗಳಿವೆ. ಇವು ಕಡಿಮೆ ದೂರ ಪ್ರಯಾಣಕ್ಕೆ ಸೂಕ್ತವಾಗಿದೆ. ಇನ್ನು 1 ಶತಾಬ್ದಿ ರೈಲು ಸೇವೆ ನೀಡುತ್ತಿದ್ದು, ಇದು ಅತ್ಯಂತ ವೇಗದ ರೈಲಾಗಿದೆ. ಅದೇ ರೀತಿ 2 ವಂದೇ ಭಾರತ್ ಹೈಸ್ಪೀಡ್‌ ರೈಲುಗಳು ಸಂಚರಿಸುತ್ತವೆ.


ಇದನ್ನೂ ಓದಿ: ಭಾರತದಿಂದ ಸಗಣಿ ಆಮದು ಮಾಡಿಕೊಳ್ತಿದೆ ಈ ಶ್ರೀಮಂತ ದೇಶ... ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ ಬೇಡಿಕೆ! ಒಂದು ಕೆಜಿ ಸಗಣಿ ಬೆಲೆ ಎಷ್ಟು ಗೊತ್ತಾ?


ಬೆಂಗಳೂರು-ಮೈಸೂರು ರೈಲುಗಳ ಸಂಪೂರ್ಣ ವಿವರ ಇಲ್ಲಿದೆ...


1. ರೈಲು ನಂಬರ್ 16218: ಸಾಯಿನಗರ ಶಿರಡಿ-ಮೈಸೂರು ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 12:55ಕ್ಕೆ ಹೊರಟು ಬೆಳಗ್ಗೆ 3:20ಕ್ಕೆ ಮೈಸೂರನ್ನು ತಲುಪುತ್ತದೆ.
2. ರೈಲು ನಂಬರ್ 16021: ಕಾವೇರಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 4 ಗಂಟೆಗೆ ಹೊರಟು 6:55ಕ್ಕೆ ಮೈಸೂರನ್ನು ತಲುಪಲಿದೆ.
3. ರೈಲು ನಂಬರ್ 16220: ತಿರುಪತಿ-ಚಾಮರಾಜನಗರ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 4:30ಕ್ಕೆ ಹೊರಟು 7:25ಕ್ಕೆ ಮೈಸೂರನ್ನು ತಲುಪಲಿದೆ.
4. ರೈಲು ನಂಬರ್ 16228: ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 5:05ಕ್ಕೆ ಹೊರಟು 8:20ಕ್ಕೆ ಮೈಸೂರನ್ನು ತಲುಪಲಿದೆ.
4. ರೈಲು ನಂಬರ್ 16228: ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 5:05ಕ್ಕೆ ಹೊರಟು 8:20ಕ್ಕೆ ಮೈಸೂರನ್ನು ತಲುಪಲಿದೆ.
5. ರೈಲು ನಂಬರ್ 22682: ಚೆನ್ನೈ ಸೆಂಟ್ರಲ್-ಮೈಸೂರು ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ವಾರಕ್ಕೆ ಒಮ್ಮೆ ಅಂದರೆ ಶುಕ್ರವಾರ ಬೆಂಗಳೂರಿನಿಂದ ಬೆಳಗ್ಗೆ 5:25ಕ್ಕೆ ಹೊರಟು 8:35ಕ್ಕೆ ಮೈಸೂರನ್ನು ತಲುಪುತ್ತದೆ.
6. ರೈಲು ನಂಬರ್ 16231: ಮೈಲಾಡುತುರೈ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 4:45ಕ್ಕೆ ಹೊರಟು 8 ಗಂಟೆಗೆ ಮೈಸೂರನ್ನು ತಲುಪುತ್ತದೆ.
7. ರೈಲು ನಂಬರ್ 16591: ಹಂಪಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 6ಕ್ಕೆ ಹೊರಟು 9 ಗಂಟೆಗೆ ಮೈಸೂರನ್ನು ತಲುಪುತ್ತದೆ.
8. ರೈಲು ನಂಬರ್ 12785: ಕಾಚಿಗುಡ-ಮೈಸೂರು ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 6:35ಕ್ಕೆ ಹೊರಟು 9:55ಕ್ಕೆ ಮೈಸೂರನ್ನು ತಲುಪುತ್ತದೆ.
9. ರೈಲು ನಂಬರ್ 16235: ಟುಟಿಕೋರಿನ್-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 7:15ಕ್ಕೆ ಹೊರಟು 10:45ಕ್ಕೆ ಮೈಸೂರನ್ನು ತಲುಪುತ್ತದೆ.
10. ರೈಲು ನಂಬರ್ 16536: ಗೋಲ್‌ಗುಂಬಜ್ ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 8ಕ್ಕೆ ಹೊರಟು 11:15ಕ್ಕೆ ಮೈಸೂರನ್ನು ತಲುಪುತ್ತದೆ.
11. ರೈಲು ನಂಬರ್ 17308: ಬಸವ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 8:20ಕ್ಕೆ ಹೊರಟು 11:40ಕ್ಕೆ ಮೈಸೂರನ್ನು ತಲುಪುತ್ತದೆ.
12. ರೈಲು ನಂಬರ್ 16316: ಕೊಚುವೇಲಿ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 8:35ಕ್ಕೆ ಹೊರಟು ಮಧ್ಯಾಹ್ನ 12 ಗಂಟೆಗೆ ಮೈಸೂರನ್ನು ತಲುಪುತ್ತದೆ.
13. ರೈಲು ನಂಬರ್ 20607: MGR ಚೆನ್ನೈ ಸೆಂಟ್ರಲ್-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಭಾನುವಾರ, ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಬೆಂಗಳೂರಿನಿಂದ ಬೆಳಗ್ಗೆ 10:15ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 12:20 ಗಂಟೆಗೆ ತಲುಪುತ್ತದೆ.
14. ರೈಲು ನಂಬರ್ 12007: ಶತಾಬ್ದಿ ಎಕ್ಸ್‌ಪ್ರೆಸ್ ಬುಧವಾರ ಹೊರತುಪಡಿಸಿ ಪ್ರತಿದಿನವೂ ಬೆಂಗಳೂರಿನಿಂದ ಬೆಳಗ್ಗೆ 10:45ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 1 ಗಂಟೆಗೆ ತಲುಪುತ್ತದೆ.
15. ರೈಲು ನಂಬರ್ 20660: ರಾಜ-ರಾಣಿ ಎಸ್ಎಫ್ ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 11:30ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 2 ಗಂಟೆಗೆ ತಲುಪುತ್ತದೆ.
16. ರೈಲು ನಂಬರ್ 12976: ಜೈಪುರ-ಮೈಸೂರು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್ ಬುಧವಾರ ಹಾಗೂ ಶುಕ್ರವಾರ ಬೆಂಗಳೂರಿನಿಂದ ಮಧ್ಯಾಹ್ನ 1:15ಕ್ಕೆ ಹೊರಟು ಮೈಸೂರನ್ನು ಸಂಜೆ 4 ಗಂಟೆಗೆ ತಲುಪುತ್ತದೆ.
17. ರೈಲು ನಂಬರ್ 20624: ಮಾಲ್ಗುಡಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಮಧ್ಯಾಹ್ನ 1:50ಕ್ಕೆ ಹೊರಟು ಮೈಸೂರನ್ನು ಸಂಜೆ 4:20ಕ್ಕೆ ತಲುಪುತ್ತದೆ.
18. ರೈಲು ನಂಬರ್ 12614: ಒಡೆಯರ್ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಮಧ್ಯಾಹ್ನ 3:15ಕ್ಕೆ ಹೊರಟು ಮೈಸೂರನ್ನು ಸಂಜೆ 5:45ಕ್ಕೆ ತಲುಪುತ್ತದೆ.
19. ರೈಲು ನಂಬರ್ 17325: ವಿಶ್ವಮಾನವ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಸಂಜೆ 5:45ಕ್ಕೆ ಹೊರಟು ಮೈಸೂರನ್ನು ರಾತ್ರಿ 8:40ಕ್ಕೆ ತಲುಪುತ್ತದೆ.
20. ರೈಲು ನಂಬರ್ 16216: ಚಾಮುಂಡಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಸಂಜೆ 6:15ಕ್ಕೆ ಹೊರಟು ಮೈಸೂರನ್ನು ರಾತ್ರಿ 9 ಗಂಟೆಗೆ ತಲುಪುತ್ತದೆ.
21. ರೈಲು ನಂಬರ್ 01662: RKMP-ಮೈಸೂರು ವಿಶೇಷ ರೈಲು ಶುಕ್ರವಾರ ಬೆಂಗಳೂರಿನಿಂದ ಸಂಜೆ 6:35ಕ್ಕೆ ಹೊರಟು ಮೈಸೂರನ್ನು ರಾತ್ರಿ 9:40ಕ್ಕೆ ತಲುಪುತ್ತದೆ.
22. ರೈಲು ನಂಬರ್ 12609: ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 8ಕ್ಕೆ ಹೊರಟು ಮೈಸೂರನ್ನು ರಾತ್ರಿ 10.50ಕ್ಕೆ ತಲುಪುತ್ತದೆ.
23. ರೈಲು ನಂಬರ್ 16585: SMVT ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 9ಕ್ಕೆ ಹೊರಟು ಮೈಸೂರನ್ನು ರಾತ್ರಿ 12:10ಕ್ಕೆ ತಲುಪುತ್ತದೆ.
24. ರೈಲು ನಂಬರ್ 20664: SMVT ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 9:30ಕ್ಕೆ ಹೊರಟು ಮೈಸೂರನ್ನು ರಾತ್ರಿ 11:55ಕ್ಕೆ ತಲುಪುತ್ತದೆ.


ರೈಲುಗಳು ಬೆಂಗಳೂರು-ಮೈಸೂರು ನಡುವೆ ಪ್ರಯಾಣ ಬೆಳೆಸುವ ಸಾಮಾನ್ಯ ಪ್ರಯಾಣಿಕರಿಗೆ ಅಷ್ಟೇ ಅಲ್ಲದೆ, ಈ ಎರಡು ನಗರಗಳಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸಹಕಾರಿಯಾಗಲಿವೆ. 


ಇದನ್ನೂ ಓದಿ: Pushpa 2 ಸಿನಿಮಾ ನೋಡಲು ಆಗಲಿಲ್ಲ ಅಂತ 3ನೇ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.