Auto Strike Today: ಇಂದು ರಾಜ್ಯ ರಾಜಧಾನಿಯಲ್ಲಿ ಸಿಗಲ್ಲ ಆಟೋ
Bengaluru Auto Strike: ಅನಧಿಕೃತ ರ್ಯಾಪಿಡೋ ಬೈಕ್ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕರು ಆಟೋ ಸೇವೆಯನ್ನು ಬಂದ್ ಮಾಡಿದ್ದಾರೆ. ಇಂದು ಒಂದು ದಿನ ಸಂಪೂರ್ಣ ಆಟೋ ಸಂಚಾರ ಬಂದ್ಗೆ ನಿರ್ಧಾರ ಕೈಗೊಂಡಿರುವ ಆಟೋ ಚಾಲಕರು, ಇಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
Auto Strike Today In Bengaluru: ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರ ಅನ್ನ ಕಸಿದುಕೊಂಡಿರುವ ಬೈಕ್ ಟ್ಯಾಕ್ಸಿ ವಿರುದ್ಧ ಆಟೋ ಚಾಲಕರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ಸಂಬಂಧ ಪಟ್ಟ ಸಚಿವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕೂಡ ಯಾರು ಸಹ ಇವರ ಸಮಸ್ಯೆಯತ್ತ ಗಮನ ಹರಿಸಿಲ್ಲ. ಹೀಗಾಗಿ ಕೆಂಡಾಮಂಡಲವಾಗಿರುವ ಆಟೋ ಚಾಲಕರು ಇಂದು ಇಡೀ ರಾಜಧಾನಿಯಲ್ಲಿ ಆಟೋ ಸೇವೆಯನ್ನು ಬಂದ್ ಮಾಡಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಇಂದು ಒಂದೇ ಒಂದು ಆಟೋ ಕೂಡ ಸೇವೆ ಸಲ್ಲಿಸಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ.
ಹೌದು... ಬೆಂಗಳೂರಿನಲ್ಲಿ 24 ಗಂಟೆಯೂ ಜಿಗಿ ಜಿಗಿ ಎನ್ನುತ್ತಿದ್ದ ಆಟೋಗಳು ಇಂದು(ಮಾರ್ಚ್ 20) ಪ್ರಯಾಣಿಕರ ಸೇವೆಗೆ ಲಭ್ಯವಿರುವುದಿಲ್ಲ. ಸಿಲಿಕಾನ್ ಸಿಟಿಯಲ್ಲಿ ಬೈಕ್‌ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿರುವ ಆಟೋ ಚಾಲಕರು ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12 ಗಂಟೆವರೆಗೂ ತಮ್ಮ ಸೇವೆಯನ್ನ ಮೊಟಕುಗೊಳಿಸಿ ಸರ್ಕಾರದ ಮೊಂಡುತನದ ವಿರುದ್ದ ಆಕ್ರೋಶವನ್ನ ವ್ಯಕ್ತಪಡಿಸಲಿದ್ದಾರೆ. ಇದಲ್ಲದೆ, ಇಂದು ಬೆಳಗ್ಗೆ 11 ಗಂಟೆಗೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಕೂಡ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ; ಕಾಲಮಿತಿಯಲ್ಲಿ ಯೋಜನೆ ಪೂರ್ಣ: ಸಿಎಂ ಬೊಮ್ಮಾಯಿ
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಆಟೋ ಚಾಲಕರ ಯೂನಿಯನ್, ಕಳೆದ ಎರಡು ವರ್ಷಗಳಿಂದ ಅನಧಿಕೃತ ರ್ಯಾಪಿಡೋ ಬೈಕ್ ಗಳನ್ನ ಬ್ಯಾನ್ ಮಾಡುವಂತೆ ಒತ್ತಾಯ ಮಾಡಲಾಗಿತ್ತು. ಹೀಗಿದ್ರೂ ಸಂಬಂಧ ಪಟ್ಟ ಸಚಿವರು, ಆರ್ ಟಿ ಓ ಅಧಿಕಾರಿಗಳು ನಮಗೆ ಸಬಂಧವೇ ಇಲ್ಲ ಅನ್ನೋ ಹಾಗೆ ಜಾಣ ಕುರುಡುತನ ಪ್ರಯೋಗ ತೋರ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಆಟೋ ಚಾಲಕರ ಮುಂದಿನ ನಡೆ ಏನು?
ಇಂದು ಒಂದು ದಿನ ರಾಜಧಾನಿಯಲ್ಲಿ ಆಟೋ ಸಂಚಾರ ಬಂದ್ ಮಾಡಿ ಮುಷ್ಕರ ನಡೆಸುತ್ತಿರುವ ಆಟೋ ಯೂನಿಯನ್ ಮತ್ತು ಆಟೋ ಚಾಲಕರು, ಒಂದು ವೇಳೆ ಸೋಮವಾರ(ಮಾರ್ಚ್ 20) ಕೂಡ ರಾಜ್ಯ ಸರ್ಕಾರ ಯಾವುದೇ ನಿರ್ಧಾರವನ್ನು ಕೈಗೊಳ್ಳದಿದ್ದರೆ ಈ ಮುಷ್ಕರವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಲು ನಿರ್ಧರಿಸಿದ್ದಾರೆ. ಇದರಿಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ- ಕರ್ನಾಟಕದ ಇತಿಹಾಸದಲ್ಲಿ 25 ಸಿಎಂಗಳು ಬಂದರೂ ಸಹ, 5 ವರ್ಷ ಪೂರ್ಣಗೊಳಿಸಿದ್ದು ಮೂವರು ಮಾತ್ರ: ಯಾರವರು ಗೊತ್ತಾ?
ನಮ್ಮ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಬೆಂಗಳೂರು ನಗರದ 21ಆಟೋ ಚಾಲಕರು ಮತ್ತು ಮಾಲೀಕರ ಸಂಘಟನೆಗಳ ಬೆಂಬಲ ನೀಡಿವೆ. ಜೊತೆಗೆ ಆಟೋ ಮುಷ್ಕರಕ್ಕೆ ಕಾಂಗ್ರೆಸ್ ನಾಯಕರೂ ಸಾಥ್ ಕೊಟ್ಟಿದ್ದಾರೆ.
ನಿನ್ನೆ (ಮಾರ್ಚ್ 19) ಶ್ರೀರಾಮಪುರದಲ್ಲಿ ಆಟೋ ಚಾಲಕರಿಗೆ ಉಚಿತ ಯೂನಿಫಾರಂ ಸೇರಿ ಫುಡ್ ಕಿಟ್ ವಿತರಣೆ ಮಾಡಿದ ಕಾಂಗ್ರೆಸ್ ನಾಯಕ ವಿ.ಸತ್ಯ ಈ ವೇಳೆ ಆಟೋ ಚಾಲಕರ ಮುಷ್ಕರಕ್ಕೆ ನಮ್ಮಪೂರ್ತಿ ಬೆಂಬಲ ಇದೆ ಎಂದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.