ಬೆಂಗಳೂರು : ಕೋವಿಡ್ ಬಳಿಕ ಮತ್ತೊಂದು ವೈರಸ್ ಹಾವಳಿ ಶುರುವಾದ ಕಾರಣ ಭಾರತೀಯ ವೈದ್ಯಕೀಯ ಸಂಘವು(IMA) ದೇಶಾದ್ಯಂತ ಹೈಅಲರ್ಟ್ ಘೋಷಣೆ ಮಾಡಿದೆ. ರಾಜ್ಯದಲ್ಲಿ ಶುರುವಾಯ್ತಾ ಎಚ್3ಎನ್2 ಭೀತಿ ಶುರುವಾಗುತ್ತಿದೆ ಎಂಬ ಕಾರಣಕ್ಕೆ ಆರೋಗ್ಯ ಇಲಾಖೆ ಹೊಸ ವೈರಸ್ ಬಗ್ಗೆ ನಿಗಾ ವಹಿಸುತ್ತಿದೆ.  


COMMERCIAL BREAK
SCROLL TO CONTINUE READING

ಎಚ್3ಎನ್2 ವೈರಸ್ ಸದ್ಯಕ್ಕೆ ಯಾರಲ್ಲು ಕಾಣಿಸಿಕೊಂಡಿಲ್ಲ. ಆದ್ರೆ, ಸ್ಯಾರಿ ಮತ್ತು ಐಎಲ್'ಎ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೇಗ ಹೊಸ ವೈರಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಸಮಸ್ಯೆಯಿಂದ ಬಳಲುತ್ತಿರುವ ವರು ಎಚ್ಚರದಿಂದಿರಲು ಸಲಹೆ ನೀಡಿದೆ. 


ಇದನ್ನೂ ಓದಿ : Amit Shah: ಲೋಕಾಯುಕ್ತ ದಾಳಿ ಹಿನ್ನಲೆ  ಹೊನ್ನಾಳಿಯ  ಅಮಿತ್ ಶಾ ಕಾರ್ಯಕ್ರಮ ಮುಂದೂಡಿಕೆ


ಎಚ್3ಎನ್2  ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಳವಳ ವ್ಯಕ್ತಪಡಿಸಿದೆ. ದೀರ್ಘ ಕಾಲದ ಕೆಮ್ಮು, ಜ್ವರದ ಬಗ್ಗೆ ಅಸಡ್ಡೆ ತೋರದಂತೆ ಎಚ್ಚರಿಕೆ ನೀಡಿದೆ. ನಿರಂತರ ಕೆಮ್ಮು, ಬಿಡದ ಜ್ವರಕ್ಕೆ‌ ಇನ್ಫ್ಲುಯೆಝ್ಸಾ ಎ ಸಬ್ ಟೈಪ್ ಎಚ್3ಎನ್2 ಕಾರಣ ಎಂದು ಎಚ್ಚರಿಕೆ ನೀಡಿದೆ. 


ಕಳೆದ ಮೂರು ತಿಂಗಳಿನಿಂದ ಭಾರತದಲ್ಲಿ ಕೆಮ್ಮು, ಜ್ವರ ಪ್ರಕರಣಗಳು ಹೆಚ್ಚಳವಾಗಿದೆ. ಹೀಗಾಗಿ ಜನ ಸುಖಾಸುಮ್ಮನೆ ಆಂಟಿಬಯೋಟಿಕ್ ಮಾತ್ರೆಗಳನ್ನು ಎವಿಸುತ್ತಿದ್ದಾರೆ. ಅದಕ್ಕೆ ಆಂಟಿಬಯೋಟಿಕ್ ಗಳ ಅವೈಜ್ಞಾನಿಕ ಬಳಕೆ ಬೇಡ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಲಹೆ ನೀಡಿದೆ. 


ಎಚ್3ಎನ್2 ವೈರಸ್ ಬಗ್ಗೆ ಎಚ್ಚರವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಗಮನ ಕೊಡುವಂತೆ ತಿಳಿಸಿದೆ. ನಾಳೆ ಈ ಬಗ್ಗೆ ಆಯುಕ್ತರು ಪ್ರಧಾನ ಕಾರ್ಯದರ್ಶಿ ಜೊತೆ ಮಹತ್ವದ ಸಭೆ ನಡೆಯಲಿದೆ.


ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ದೀರ್ಘ ಕಾಲದ ಕೆಮ್ಮು ಇರಬಹುದು ಅಂತ ಪ್ರಾರಂಭಿಕ ಪ್ರಕರಣದಲ್ಲಿ ತಿಳಿದು ಬಂದಿದೆ. ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಕ್ರಮ ತೆಗೆದು ಕೊಳ್ಳಬೇಕು ಅಂತ ನಾಳೆ ನಡೆಯಲಿರುವ ಸಭೆಯಲ್ಲಿ ತೀರ್ಮಾನ ಮಾಡಲಿದ್ದಾರೆ. ಸಭೆಯಲ್ಲಿ ತಜ್ಞರು ಕೂಡ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ವಹಿಸುವ ಕ್ರಮಗಳ ಬಗ್ಗೆ ನಾಳೆ ಮಾಹಿತಿ ಹೊರಬೀಳಲಿದೆ ಎಂದು ಹೇಳಿದ್ದಾರೆ.


ಐಎಲ್'ಐ ಹಾಗೂ ಸರಿ ಕೇಸ್ ಗಳಿಗೆ ಮಾರಕವಾಗುವ ವೈರಸ್ ಇದಾಗಿದೆ. ನಾಳೆ ಆರೋಗ್ಯ ಇಲಾಖೆಯಿಂದ ನಾಳೆ ಈ ಕುರಿತು ಗೈಡ್ ಲೈನ್ಸ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕುರಿತು ನಾಳೆ ಆರೋಗ್ಯ ಸಚಿವ ಡಾ ಸುಧಾಕರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. 


ಇದನ್ನೂ ಓದಿ : Praveen Nettaru murder case : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಬಂಧನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.