ಬೆಂಗಳೂರು : ಕಾಳಿ ಸ್ವಾಮೀಜಿ ಕಾವಿ ಧರಿಸಿ ಕೋಳಿ ಕಟ್ ಮಾಡಬಾರದಿತ್ತು. ದೇವಿಗೆ ಆರತಿ‌ ಮಾಡಿ ಕೋಳಿಗೆ ಆರತಿ‌ ಮಾಡಿದ್ದಾರೆ. ಅದಕ್ಕೆ ಸಮಜಾಯಿಶಿ ಕೂಡ ನೀಡಿರುವುದು ಬೇಸರ ತಂದಿದೆ ಎಂದು ಆಯುರ್ ಆಶ್ರಮದ ಸಂತೋಷ್ ಗುರೂಜಿ ಹೇಳಿದ್ದಾರೆ‌.


COMMERCIAL BREAK
SCROLL TO CONTINUE READING

ನಗರದ ಬ್ಯಾಡರಹಳ್ಳಿ ಬಳಿಯಿರುವ ಆಯುರ್ ಆಶ್ರಮದಲ್ಲಿ ಮಾತನಾಡಿದ ಶ್ರೀಗಳು(Ayur Ashrama Santosh Guruji), ರಾಜ್ಯದಲ್ಲಿ ಹಲಾಲ್ ಕಟ್​ ವಿಚಾರವಾಗಿ ಸಾಕಷ್ಟು ಪರ ವಿರೋಧ ಚರ್ಚೆಯಾಗುತ್ತಿದೆ. ಈ ಮಧ್ಯೆ ಕಾಳಿ ಆರಾಧಕರಾದ ರಿಷಿಕುಮಾರ ಸ್ವಾಮೀಜಿ ಕೋಳಿಯನ್ನು ಕತ್ತರಿಸಿರುವ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಕೋಳಿಯನ್ನು ಅವರೇ ಕಟ್ ಮಾಡುವ ಬದಲು ಶಿಷ್ಯಕೈಯಲ್ಲಿ ಕಟ್ ಮಾಡಿಸಬಹುದಿತ್ತು ಎಂದಿದ್ದಾರೆ. ಇನ್ನೂ ಹಲಾಲ್ ಕಟ್ ಬಗ್ಗೆ ಮಾತನಾಡಿದ ಅವರು, ಹಲಾಲ್ ಕಟ್ ಬೇಡ. ಹಲಾಲ್‌ ಕಟ್ ಮಾಡಿದರೆ ನಮ್ಮ ದೇವರಿಗೆ ಅದು ಸಲ್ಲಿಕೆಯಾಗುವುದಿಲ್ಲ. ಹಿಂದೂಗಳು ಹಲಾಲ್ ಮಾಂಸವನ್ನು ಸೇವಿಸಬಾರದು ಎಂದು ಕರೆ ನೀಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.