ಬೆಂಗಳೂರು: ಬಿಜೆಪಿ, ಆರ್ ಎಸ್ ಎಸ್ ನವರು  ತಿನ್ನೋದು ಸೆಗಣಿ ಕುಡಿಯೋದು ಗಂಜಲ ಅದಕ್ಕೆ ಅವರ ತಲೆಯಲ್ಲಿ ಗೊಬ್ಬರ ತುಂಬಿಕೊಂಡಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದರು.


COMMERCIAL BREAK
SCROLL TO CONTINUE READING

ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಇವರದ್ದು ಬಡವರ ಪರವಾದ ಚಿಂತನೆ ಅಲ್ಲ. ಶೋಷಿತರ ಪರವಾದ ಚಿಂತನೆ ಅಲ್ಲ‌ ಎಂದರು‌.


ಸಿದ್ದರಾಮಯ್ಯ ಅವರ ಮೇಲೆ ನಡೆದ ದಾಳಿ ಸಂಘಪರಿವಾರ ಸದಸ್ಯರ ಸರ್ವಾಧಿಕಾರಿ ಪ್ರವೃತ್ತಿಯಾಗಿದೆ. ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ಕಿವಿ ಹಿಂಡುವ ಜವಾಬ್ದಾರಿ ನಮ್ಮ ಮೇಲಿದೆ. ಮಳೆ ಹಾನಿ ಪರಿಶೀಲನೆಗೆ ಹೋದ ಸಂದರ್ಭದಲ್ಲಿ ನಡೆದ ಈ ಘಟನೆ ಸಂಘ ಪರಿವಾರದ ಸರ್ವಾಧಿಕಾರಿ ಧೋರಣೆಗೆ ಉದಾಹರಣೆ ಎಂದರು.


ಕೆಲಸಕ್ಕೆ ಬರದ ಗೃಹ ಸಚಿವರು  ಸಿದ್ದರಾಮಯ್ಯ ಪ್ರಚೋದನಾಕಾರಿ ಹೇಳಿಕೆ ಕೊಡ್ತಾರೆ ಅದಕ್ಕೆ ಹೀಗಾಗುತ್ತದೆ ಎಂದಿದ್ದಾರೆ. ಹಾಗೇನಿದ್ದರೆ ಅದಕ್ಕೆ ಜನಸಾಮಾನ್ಯರು ಉತ್ತರ ಕೊಡುತ್ತಾರೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರಲ್ಲ. ನಾವು ತಪ್ಪು ಮಾಡಿದರೆ ಜನ ಕಿವಿ ಹಿಂಡುತ್ತಾರೆ ಎಂದರು.
ಸಾವಿರಾರು ಪೊಲೀಸರು ನಿಮ್ಮ ಜೊತೆ ಇರಬಹುದು.‌ ಆದರೆ ಆರು ತಿಂಗಳಲ್ಲಿ ನೀವು ಬೀದಿಗೆ ಬರುತ್ತೀರಿ.


ಇದನ್ನೂ ಓದಿ: Rajinikanth as Governor: ರಾಜ್ಯಪಾಲರಾಗಿ ನೇಮಕವಾಗಲಿದ್ದಾರಾ ರಜನಿಕಾಂತ್‌?


ಅತ್ಯಂತ ಭ್ರಷ್ಟ ಸಚಿವ ಆರಗ ಜ್ಞಾನೇಂದ್ರ. ಪ್ರಚೋದನಾಕಾರಿ ಹೇಳಿಕೆಗೆ ಮೊದಲು ಜೈಲಿಗೆ ಹಾಕಬೇಕಾದದ್ದು ಗೃಹ ಸಚಿವರನ್ನು. ಶಿವಮೊಗ್ಗದಲ್ಲಿ ಕೊಲೆಯಾದಾಗ 144 ಹಾಕಿದ್ದರೂ  ಕಾನೂನು ಉಲ್ಲಂಘನೆ ಮಾಡಿದ ಈಶ್ವರಪ್ಪ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.
ಇದೇ ವೇಳೆ ಪೊಲೀಸರ ನಡೆಗೆ ವಿರೋಧ ವ್ಯಕ್ತಪಡಿಸಿದ ಬಿ.ಕೆ ಹರಿಪ್ರಸಾದ್,  ಪೊಲೀಸರ ನಿಷ್ಠೆ ರಾಜಕೀಯ ಪಕ್ಷಕ್ಕೆ ಇರಬಾರದು, ಸಂವಿಧಾನ, ರಾಷ್ಟ್ರ ಧ್ವಜಕ್ಕೆ ಇರಬೇಕು ಎಂದರು‌. ಯಾವುದೇ ಬೇಧಭಾವ ಇಲ್ಲದೆ ಅಧಿಕಾರ ಚಲಾಯಿಸಬೇಕು ಎಂದರು.


ಬಿಜೆಪಿ, ಆರ್ ಎಸ್ ಎಸ್  ಬಹಿರಂಗವಾಗಿ ಮೊಟ್ಟೆ ತಿನ್ನಲ್ಲ, ಆದರೆ ಕದ್ದು ತಿನ್ನುತ್ತಾರೆ. ರೆಸಲ್ ಮಾರ್ಕೆಟ್ ಗೆ ಹೋಗಿ ಕದ್ದು‌ ಯಾವ ಮಾಂಸ ತಿನ್ನುತ್ತಾರೆ ಎಂದು ಗೊತ್ತಾಗುತ್ತೆ.  ಬಿಜೆಪಿ, ಆರ್ ಎಸ್ ಎಸ್ ನವರು ತಿನ್ನೋದು ಸೆಗಣಿ ಕುಡಿಯೋದು ಗಂಜಲ ಅದಕ್ಕೆ ತಲೆಯಲ್ಲಿ ಗೊಬ್ಬರ ತುಂಬಿಕೊಂಡಿದೆ. ಇವರದ್ದು ಬಡವರ ಪರವಾದ ಚಿಂತನೆ ಅಲ್ಲ. ಶೋಷಿತರ ಪರವಾದ ಚಿಂತನೆ ಅಲ್ಲ‌ ಎಂದು ಕಿಡಿಕಾರಿದರು.


ಇದನ್ನೂ ಓದಿ:ಸಿದ್ದರಾಮಯ್ಯ, ಡಿಕೆಶಿಗೆ ಕ್ಷಮೆ ಕೇಳುವ ಸೌಜನ್ಯ ಇಲ್ಲ : ಕೆ.ಎಸ್‌.ಈಶ್ವರಪ್ಪ


ಕೊಡಗು ಜಿಲ್ಲೆಯ ಜನರು ಹಿಂದೆ ನಿಂತು ಮೊಟ್ಟೆ ಎಸೆಯುವರಲ್ಲ. ಮುಂದೆ ನಿಂತು ಕೊಳ್ಳುತ್ತಾರೆ. ಮೊಟ್ಟೆ ಎಸೆದು ಹೋಗುವ ಹೇಡಿಗಳಲ್ಲ. ಕೊಡಗಿಗೆ ಮಸಿ ಬಳಿಯುವ ಕೆಲಸ ಬಿಜೆಪಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಮ್ಮ ಮೇಲೆ ಕೂಡಾ ಕೇಸ್ ಬುಕ್ ಮಾಡಿ, ನಮ್ಮನ್ನು ಯಾರೂ ಬಗ್ಗುಬಡಿಯಲು ಸಾಧ್ಯವಿಲ್ಲ. ಸಿದ್ದರಾಮಯ್ಯ ವಿರುದ್ಧ ಮಾತಿದ ಹಲ್ಲೆ ಸಂವಿಧಾನದ ವಿರುದ್ಧ ಮಾಡಿದ ಹಲ್ಲೆ ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.