ಮಂಗಳೂರು: ಕುಂಬಳೆ ಸಮೀಪದ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಕ್ಷೇತ್ರ ಪಾಲಕನಂತಿದ್ದ ದೈವೀ ಸ್ವರೂಪಿ ಮೊಸಳೆ ‘ಬಬಿಯಾ’ ಇಹಲೋಕ ತ್ಯಜಿಸಿದೆ. ಮೊಸಳೆ ಎಂದೇ ಬಬಿಯಾ ಪ್ರಖ್ಯಾತಿ ಪಡೆದಿತ್ತು.


COMMERCIAL BREAK
SCROLL TO CONTINUE READING

ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕೆರೆಯಲ್ಲಿ ವಾಸವಾಗಿದ್ದ ಸಸ್ಯಹಾರಿ ಬಬಿಯಾ ‘ದೇವರ ಮೊಸಳೆ’ ಎಂದೇ ಪ್ರಸಿದ್ಧಿ ಪಡೆದಿತ್ತು. ಕಳೆದ 70 ವರ್ಷಗಳಿಂದ ದೇವಸ್ಥಾನದ ಕಲ್ಯಾಣಿಯಲ್ಲಿದ್ದ ಬಬಿಯಾಗೆ ಪ್ರತಿನಿತ್ಯ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಸಂಪ್ರದಾಯವಾಗಿತ್ತು. ಕೆಲ ವರ್ಷಗಳ ಹಿಂದೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.


ಇದನ್ನೂ ಓದಿ‘ಕರ್ನಾಟಕದ ಪ್ರಗತಿಗೆ ಮಲಯಾಳಿಗಳ ಕೊಡುಗೆ ಅಪಾರ’


ದೇವರ ನೈವೇದ್ಯವೇ ಬಬಿಯಾಗೆ ನಿತ್ಯ ಆಹಾರವಾಗಿತ್ತು. ಈ ಕೆರೆಗೆ ಭಕ್ತರೂ ಸಹ ಇಳಿಯುತ್ತಿದ್ದರು. ಆದರೆ ಇದುವರೆಗೂ ಯಾರಿಗೂ ಈ ಮೊಸಳೆ ನೋವನ್ನುಂಟು ಮಾಡಿದ ಘಟನೆಗಳೇ ನಡೆದಿಲ್ಲ. ಹೀಗಾಗಿ ಇದನ್ನು ದೈವಿ ಸ್ವರೂಪಿ ಮೊಸಳೆ ಎಂದೇ ನಂಬಲಾಗಿತ್ತು ಅಂತಾ ಇಲ್ಲಿನ ಸ್ಥಳೀಯರು ಹೇಳಿದ್ದಾರೆ.


ದೇವಸ್ಥಾನದ ಆವರಣದಲ್ಲಿಯೇ ಬಬಿಯಾ ಮೊಸಳೆಯ ಅಂತಿಮ ವಿಧಿ ವಿಧಾನ ನಡೆಯಲಿದೆ ಎಂದು ದೇವಸ್ಥಾನದ ಸಿಬ್ಬಂದಿ ತಿಳಿಸಿದ್ದಾರೆ. ಮಂಗಳೂರಿನಿಂದ 39 ಕಿ.ಮೀ ದೂರದಲ್ಲಿರುವ ಕುಂಬಳೆ ಸಮೀಪದ ಬದಿಯಡ್ಕ ಮಾರ್ಗವಾಗಿ ಸುಮಾರು 4 ಕಿ.ಮೀ ಸಾಗಿದರೆ ಅನಂತಪುರ ದೇವಸ್ಥಾನ ಸಿಗುತ್ತದೆ. ಇದು ವಿಶಾಲ ಪ್ರದೇಶದ ಕೆರೆ ಮಧ್ಯೆ ಇರುವ ದೇವಸ್ಥಾನವಾಗಿದೆ.


ಇದನ್ನೂ ಓದಿ: ಚಾಮರಾಜನಗರ: 5 ಮೀ. ದೂರದಲ್ಲಿ ಮಾಲೀಕ ಇದ್ರೂ ಬೈಕ್ ಎಗರಿಸಿದ ಕತರ್ನಾಕ್ ಕಳ್ಳ- ವಾಚ್ ವಿಡಿಯೋ


ಅನಂತಪುರ ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿದೆ. ಇದನ್ನು ಸರೋವರ ಕ್ಷೇತ್ರ ಅನಂತಪುರ ಎಂತಲೂ ಕರೆಯುತ್ತಾರೆ. ಇದು ಸಹ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿದೆ. ಪ್ರತಿನಿತ್ಯ ಇಲ್ಲಿದೆ ಸಾವಿರಾರು ಭಕ್ತರು ಭೇಟಿ ನೀಡಿ 5 ಹೆಡೆ ಸರ್ಪದ ಮೇಲೆ ಕುಳಿತಿರುವ ಅನಂತಪದ್ಮನಾಭ ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಾರೆ.   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.