BWSSB :  ಶುಕ್ರವಾರದಿಂದಲೇ ಸಂಭ್ರಮಾಚರಣೆ ಆರಂಭವಾಗುತ್ತಿದ್ದು,  ಈ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿ ಖಡಕ್ ಸೂಚನೆಗಳನ್ನು ನೀಡಿದೆ. 


COMMERCIAL BREAK
SCROLL TO CONTINUE READING

ಹೋಳಿ ಹಬ್ಬ ಕುರಿತು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಅವರು ಅವರು ಸಾರ್ವಜನಿಕ ಸಲಹಾ ರೂಪದ ಪ್ರಕಟಣೆ ಹೊರಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ.


ಈ ಸಂಬಂಧ, ಉಲ್ಬಣವಾಗಿರುವ ಸಮಸ್ಯೆಗಳನ್ನು ಮಂಡಳಿಯೂ ಸಮರ್ಪಕವಾಗಿ ನಿರ್ವಹಿಸಲು ಎಲ್ಲರ ಸಹಕಾರ ಬಹಳ ಮಹತ್ವದಾಗಿರುತ್ತದೆ. ನೀರು ಉಳಿಸಬೇಕಿದೆ ಆದ ಕಾರಣ  ಹೋಳಿ ಹಬ್ಬ ಆಚರಣೆಗೆ ಕೆಲವು ನಿರ್ಬಂಧಗಳನ್ನು ಸೂಚಿಸಿದೆ. 


ಇದನ್ನು ಓದಿ : Neha Shetty : ನೀಲಿ ಆಗಸದಲ್ಲಿ ಮುಂಗಾರು ಮಳೆ ಚೆಲುವೆಯ ಹಾರಾಟ : ಫೋಟೋಸ್ ಇಲ್ಲಿವೆ


ಹೋಳಿ ಹಬ್ಬ ಸಾಂಸ್ಕೃತಿಕವಾದ ಆಚರಣೆಯ ಹಬ್ಬ. ಇದನ್ನ ತಮ್ಮ ಮನೆಗಳಲ್ಲಿ, ವಾಸಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ. ಸಾಂಸ್ಕೃತಿವಾಗಿ ಆಚರಣೆ ಮಾಡುವುದಕ್ಕೆ ಯಾವುದೇ ನಿಷೇಧ ಹೇರುವುದಿಲ್ಲ. ಆದರೆ, ಈ ಸಂದರ್ಭದಲ್ಲಿ ಮನೋರಂಜನೆಯಾಗಿ ವಾಣಿಜ್ಯ ಉದ್ದೇಶದಿಂದ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸುವುದು ಬೇಡ ಎಂದು ಹೇಳಿದ್ದಾರೆ.


ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿ ತಿಂಗಳು ಕಳೆಯುತ್ತಾ ಬಂದರೂ ಸಹ ಇನ್ನೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಕಾವೇರಿ ನೀರು ಪೂರೈಕೆಗೆ ಯಾವುದೇ ತೊಂದರೆ ಇಲ್ಲದಾದರೂ ಸಹಿತ, ಅಂತರ್ಜಲ ಕುಸಿತದಿದೆ. ಇದರಿಂದ ಬೋರ್‌ವೆಲ್‌ ನಲ್ಲಿ ನೀರು ಬರದೇ ಸಮಸ್ಯೆ ಉಂಟಾಗಿದೆ.


ಹಬ್ಬದ ಸಂದರ್ಭದಲ್ಲಿ ನೀವು ಮನರಂಜನೆಗಾಗಿ ವಾಣಿಜ್ಯ ಉದ್ದೇಶದಿಂದ ಆಯೋಜಿಸುವಂತಹ ರೈನ್ ಡ್ಯಾನ್ಸ್, ಪೂಲ್‌ ಡ್ಯಾನ್ಸ್‌ ಗಳಿಗೆ ಸಾರ್ವಜನಿಕ ಹಿತದೃಷ್ಠಿಯಿಂದ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸಬಾರದು. ಜಲಮಂಡಳಿಯ ಸೂಚನೆ ಪಾಲಿಸುವ ಮೂಲಕ ನೀರು ರಕ್ಷಣೆಗೆ ಮನವಿ ಮಾಡಿದ್ದೇವೆ ಎಂದು  ಹೇಳಿದ್ದಾರೆ


ಇದನ್ನು ಓದಿ : KPSC : ಗ್ರೂಪ್ 'ಸಿ' ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ


 ಆದ್ದರಿಂದ ಇರುವ ನೀರನ್ನು ಸುಸೂತ್ರವಾಗಿ, ಸಮರ್ಪಕವಾಗಿ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಹೋಳಿ ಹಬ್ಬದ ನೆಪದಲ್ಲಿ ಸುಮ್ಮನೇ ನೀರು ಪೋಲಾಗುವುದು ಬೇಡ , ಮಹಾನಗರದಲ್ಲಿ ಕಾವೇರಿ ನೀರಿನ ಜೊತೆಗೆ ಬೋರ್‌ವೆಲ್ ನೀರಿನ ಮೇಲಿನ ಅವಲಂಬನೆ ಸಾಕಷ್ಟು ಪ್ರಮಾಣದಲ್ಲಿ. ಇತ್ತ ನಿರೀಕ್ಷಿತ ಮಳೆ ಆಗದೇ ಜಲಾಶಯಗಳು ಬತ್ತಿ ಹೋಗಿವೆ. ಸದ್ಯ ನದಿಪಾತ್ರದಲ್ಲಿ ಇರುವ ನೀರು ಈ ಇಡೀ ಬೇಸಿಗೆಗೆ ಸಾಕಾಗುವುದು ಅನುಮಾನ. ಬೇಸಿಗೆ ಆರಂಭದಲ್ಲಿಯೇ ನೀರಿಗೆ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು ಜಲಮಂಡಳಿ ಬೆಂಗಳೂರಿನ ಜನರಿಗೆ ಮನವಿ ಮಾಡಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.