ಐತಿಹಾಸಿಕ ಮಹಾಮಜ್ಜನಕ್ಕೆ ಸಿದ್ದವಾದ `ಬಾಹುಬಲಿ` ಮೂರ್ತಿ
ಬೆಂಗಳೂರು: ಜೈನರ ಕಾಶಿ ಎಂದೇ ಪ್ರಸಿದ್ದಿಯಾಗಿರುವ ಶ್ರವಣಬೆಳಗೊಳ, ಇಂದು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಜರುಗಲಿರುವ ಗೊಮ್ಮಟೇಶ್ವರಮೂರ್ತಿಯ ಐತಿಹಾಸಿಕ ಮಹಾಮಸ್ತಕಾಭಿಷೇಕಕ್ಕೆ ಸಕಲ ಸಿದ್ದತೆಗಳೊಂದಿಗೆ ತಯಾರಾಗಿದೆ.
ಈ ಮಹಾಮಜ್ಜನವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಈಗಾಗಲೇ ಶ್ರವಣಬೆಳಗೊಳಕ್ಕೆ ಆಗಮಿಸಿದ್ದಾರೆ. ಸುಮಾರು 9 ಗಂಟೆಗಳ ನಿರಂತರ ಮಹಾ ಮಜ್ಜನವನ್ನು ಬಾಹುಬಲಿಯ ಮೂರ್ತಿಗೆ ಮಾಡಲಾಗುತ್ತದೆ.ಹಾಲು, ಕೇಸರಿ, ಆರಿಶಿಣ, ಕಬ್ಬಿನರಸ ಮತ್ತು ಅಕ್ಕಿ ಹಿಟ್ಟು ಸೇರಿದಂತೆ ಹಲವು ಸುಂಗಂಧಿತ ಪದಾರ್ಥಗಳು, ಪವಿತ್ರ ಪೂಜಾ ಸಾಮಗ್ರಿಗಳಿಂದ ಮಜ್ಜನ ನಡೆಸಲಾಗುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾಗಿ 3.30ರವರೆಗೂ ಬಾಹುಬಲಿ ಮೂರ್ತಿಗೆ ಜಲಮಜ್ಜನವನ್ನು 3.30ರಿಂದ 5.30ರವರೆಗೂ ಅಮೃತ ಮಜ್ಜನವನ್ನು ಬಾಹುಬಲಿಗೆ ಮಾಡಲಾಗುತ್ತಿದೆ ಎಂದು ಇಲ್ಲಿನ ಜೈನ ಮುನಿಗಳು ತಿಳಿಸಿದ್ದಾರೆ.