ಕೊಪ್ಪಳ: ಇಲ್ಲಿ ನಡೆಯಲಿರುವ 10 ನೇ ಮೇ ಸಾಹಿತ್ಯ ಮೇಳದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಹಿರೇಮಠ ಅವರಿಗೆ 'ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.


COMMERCIAL BREAK
SCROLL TO CONTINUE READING

ರಾಜಕಾರಣಿಗಳು ಅಧಿಕಾರ, ಸಂಪರ್ಕಗಳನ್ನು ದುರ್ಬಳಕೆ ಮಾಡಿಕೊಂಡು ಕಬಳಿಸಿದ ಅಕ್ರಮ ಭೂಮಿಯ ಸಕಲ ದಾಖಲೆಗಳನ್ನು ಸಂಪಾದಿಸಿ, ದೂರು ನೀಡಿ, ಹಲವರು ರಾಜೀನಾಮೆ ನೀಡಲು, ಜೈಲಿಗೆ ಹೋಗಲು ಕಾರಣವಾದರು. ಅಕ್ರಮ ಎಸಗುವವರು ಯಾವುದೇ ಪಕ್ಷದವರಿರಲಿ, ಎಷ್ಟೇ ಪ್ರಭಾವಿತರಿರಲಿ ಅವರನ್ನು ಬಿಡುವುದಿಲ್ಲ ಎಂದು ಈಗಲೂ ೮೦ ವರ್ಷದ ಎಸ್. ಆರ್. ಹಿರೇಮಠ ಘೋಷಿಸುತ್ತಾರೆ ಮತ್ತು ಹೋರಾಟ ನಡೆಯುತ್ತಲೇ ಇದೆ.


ಇದನ್ನು ಓದಿ : Remal Cyclone : 'ಮೇ 26ರ ವೇಳೆಗೆ ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಕರಾವಳಿಯ ಮೇಲೆ ತೀವ್ರ ಪರಿಣಾಮ ಸಾಧ್ಯತೆ 


ಬಿಡುವಿರದ ಹೋರಾಟ, ಸಂಘಟನೆ, ಚಟುವಟಿಕೆಗಳ ನಡುವೆಯೂ ಅರಣ್ಯ ರಕ್ಷಣೆ, ಜೈವಿಕ ವೈವಿಧ್ಯ, ಭೂಮಿ ಒತ್ತುವರಿ, ನೈಸರ್ಗಿಕ ಸಂಪತ್ತಿನ ಮೇಲೆ ಜನರ ಹಕ್ಕುಗಳೇ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಹಿರೇಮಠರು ಬರೆದಿದ್ದಾರೆ, ಸಂಪಾದಿಸಿದ್ದಾರೆ. ರಾಜಕಾರಣಿಗಳು ಮತ್ತು ಪ್ರಭಾವಿ ಕುಳಗಳ ವಿರುದ್ಧ ನಿರಂತರ ಹೋರಾಟ ನಡೆಸುವುದರಿಂದ ಸಾಕಷ್ಟು ಜೀವ ಬೆದರಿಕೆ ಬಂದಿದ್ದರೂ ರಕ್ಷಣೆ ಒದಗಿಸಬೇಕೆಂದು ಸರಕಾರವನ್ನು ಕೇಳಿಲ್ಲ. ಸತ್ಯದ ಗುರಾಣಿ ಮುಂದಿರುವಾಗ ಯಾವ ವಿಷಬಾಣವೂ ತನ್ನನ್ನು ನಾಟುವುದಿಲ್ಲ ಎಂದೇ ಧೃಢವಾಗಿ ನಂಬಿ ಭ್ರಷ್ಟರ ವಿರುದ್ಧ ಯುದ್ಧ ಮುಂದುವರೆಸುತ್ತಿದ್ದಾರೆ. ಅವರನ್ನು ಸಮಾಜ ಸುಧಾರಕ, ಪರಸರವಾದಿ, ಗ್ರಾಮೀಣಾಭಿವೃದ್ಧಿಯ ಕಾರ್ಯಕರ್ತ, ಭ್ರಷ್ಟಾಚಾರ ವಿರೋಧಿ, ಶಿಕ್ಷಣ-ಆರೋಗ್ಯ-ಪರಿಸರ ಜಾಗೃತಿ ಮೂಡಿಸಿದ ಹೋರಾಟಗಾರ, ಗಾಂಧಿವಾದಿ ಮುಂತಾಗಿ ಏನೇ ಹೆಸರಿಟ್ಟು ಕರೆದರೂ ಅವೆಲ್ಲ ಪಾತ್ರಗಳಿಗೆ ಒಂದು ಮಾದರಿಯಾಗಿ ಬದುಕುತ್ತಿದ್ದಾರೆ. ಸರಳಾತಿಸರಳ ಜೀವನ ನಡೆಸುತ್ತಿದ್ದಾರೆ. ತಮ್ಮ ಎಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಹಲವಾರು ಸಂಘ, ಸಂಸ್ಥೆ, ಮಂಡಳಿ, ಯೋಜನೆ, ಸಮಿತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಸಂಖ್ಯ ಮನ್ನಣೆಗಳು ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ಅಪಾರ ಜನಮನ್ನಣೆ ಅವರಿಗೆ ದೊರೆತಿದೆ. ಕವಿ, ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ, ‘ಮಹಾಸಂಗ್ರಾಮಿ’ ಎಂಬ ಎಸ್ಸಾರ್ ಹಿರೇಮಠರ ಸುದೀರ್ಘ ಜೀವನ ಚರಿತ್ರೆಯ ಹೊತ್ತಗೆಯನ್ನು ಪ್ರಕಟಿಸಿದ್ದಾರೆ.


ಇದನ್ನು ಓದಿ : Tamilnadu : ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಗೆ ಗೂಗಲ್ ಫಾಕ್ಸ್‌ಕಾನ್‌ನೊಂದಿಗೆ ಪಾಲುದಾರಿಕೆ : ಮುಖ್ಯಮಂತ್ರಿ ಎಂಕೆ ಸ್ಟಾಲಿನ್


ದಣಿವರಿಯದ ಈ ಸಮಾಜಮುಖಿ ಜೀವನಕ್ಕೆ ೨೦೨೪ನೇ ಸಾಲಿನ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ’ ನೀಡಿ ಗೌರವಿಸಲು ಮೇ ಸಾಹಿತ್ಯ ಮೇಳ ಬಳಗವು ಹೆಮ್ಮೆ ಪಡುತ್ತದೆ. ಅವರಿಗೆ ಆರೋಗ್ಯ, ನೆಮ್ಮದಿಯ ಬದುಕು ಸದಾ ಸಿಗಲೆಂದು; ತನ್ನ ಸಮಾಜದ ಬಗೆಗೆ ಕಂಡ ಕನಸುಗಳು ನನಸಾಗಲೆಂದು ಹಾರೈಸುತ್ತೇವೆ ಎಂದು ಮೇ ಸಾಹಿತ್ಯ ಮೇಳ ತನ್ನ ಪ್ರಕಟಣೆಯಲ್ಲಿ ಘೋಷಿಸಿದೆ.


ಈ ಪ್ರಶಸ್ತಿ ಹತ್ತು ಸಾವಿರ ನಗದು ಮತ್ತು ಫಲಕ ಹೊಂದಿದೆ. ಪ್ರಶಸ್ತಿಯನ್ನು ದಾವಣಗೆರೆಯ ಬಿ. ಶ್ರೀನಿವಾಸ ಅವರು ಪ್ರಾಯೋಜಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.