ಬೆಂಗಳೂರು : ನೊಂದವರು ಯಾರೇ ಆಗಲಿ, ನೀವು ದೂರು ದಾಖಲಿಸಲು ಪೊಲೀಸ್‌ ಠಾಣೆಗೆ ತೆರಳುವ ಮೊದಲು 112ಗೆ ಕರೆ ಮಾಡಿ ಮಾಹಿತಿ ಅಥವಾ ದೂರು ಸಲ್ಲಿಸಿ ಎಂದು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು ವೈಟ್‌ಫೀಲ್ಡ್‌ ವಿಭಾಗದ ಪ್ರಾಪರ್ಟಿ ಪರೇಡ್‌ನಲ್ಲಿ ಪೊಲೀಸ್‌ ಕಮೀಷನರ್‌ ಭಾಗಿಯಾಗಿದ್ದರು. ನೊಂದವರ ಸ್ವತ್ತುಗಳನ್ನು ಮರಳಿಸಿ, ಪೊಲೀಸರ ಕೆಲಸವನ್ನು ಶ್ಲಾಘಿಸಿ ಹಲವರಿಗೆ ಪ್ರಶಸ್ತಿ ವಿತರಿಸಿ ಪ್ರತಾಪ್‌ ರೆಡ್ಡಿ ಮಾತನಾಡುತ್ತಿದ್ದರು. ಯಾವುದೇ ಪ್ರಕರಣಗಳಿರಲಿ ನಿಮಗೆ 24X7 ಪೊಲೀಸ್‌ ಸೇವೆ ದೊರಕಬೇಕಾದ್ರೆ ಮೊದಲು ಪೊಲೀಸ್‌ ಹೆಲ್ಪ್‌ಲೈನ್‌ 112 ಗೆ ಕರೆ ಮಾಡಿ ನಿಮ್ಮ ದೂರನ್ನು ನೀಡಿ. 112 ಗೆ ಕರೆ ಮಾಡಿದಾಗ ನಿಮ್ಮ ಕಾಲ್‌ ರೆಕಾರ್ಡ್‌ ಮೂಲಕ ಸಂಪೂರ್ಣ ದೂರನ್ನು ನಾವು ಅರಿಯಬಹುದು ಹಾಗೂ ಬಹುಬೇಗ ಸ್ಪಂದಿಸಬಹುದು. ನೀವು ಮಾಹಿತಿ ನೀಡಿದ ಮೇಲೆ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿ ಎಂದರು. 


ಇದನ್ನೂ ಓದಿ : ಬೆಂಗಳೂರಿನಲ್ಲಿ ಪಬ್ ಗಳಿಗೆ ನಿಯಮಗಳೇ ಇಲ್ವಾ: ಹೈದರಾಬಾದ್ ಪೊಲೀಸರೇ ಬೆಟರ್ ಆದ್ರೂ...?


ನಗರದಲ್ಲಿ ಸೈಬರ್‌ ಖದೀಮರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸಾರ್ವಜನಿಕರು ತಮ್ಮ ಮೊಬೈಲ್‌ಗೆ ಬರುವ ಕರೆಗಳು,ಮೆಸೇಜ್‌ಗಳನ್ನು ನಂಬಿ ಯಾರು ಹಣ ವರ್ಗಾವಣೆ ಮಾಡಬಾರದು. ಯಾರು ಸಹ ನಿಮಗೆ ಕಡಿಮೆ ಬೆಲೆಗೆ ಏನನ್ನು ಕೊಡುವುದಿಲ್ಲ. ಈ ರೀತಿಯಾಗಿ ನಿಮಗೆ ಕರೆ ಅಥವಾ ಮೆಸೇಜ್‌ಗಳು ಬಂದರೆ ತಕ್ಷಣವೇ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಹಾಗೂ 112  ಸೇವೆಯನ್ನು ಉತ್ತಮವಾಗಿ ಬಳಸಿಕೊಳ್ಳಿ ಎಂದರು. ಇನ್ನೂ ವೈಟ್‌ಫೀಲ್ಡ್‌ ವಿಭಾಗದ ಪೊಲೀಸರು ಈ ವರ್ಷ ಕಳ್ಳತನವಾಗಿದ್ದ 16 ಕೋಟಿಗೂ ಅಧಿಕ ಮೌಲ್ಯದ ಬೈಕ್‌ಗಳು, ಆಟೋ, ಜೀಪ್‌, ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಹಿಂದಿರೂಗಿಸುವ ಕೆಲಸ ಮಾಡಿದ್ದಾರೆ.


ಇದನ್ನೂ ಓದಿ : ಶಿಕ್ಷಣ ಕ್ಷೇತ್ರದ ಅಪಾರ ಅಭಿವೃದ್ಧಿಯಲ್ಲಿ ಹೊರಟ್ಟಿ ಅವರದ್ದು ಪ್ರಮುಖ ಪಾತ್ರ: ಸಿಎಂ ಬೊಮ್ಮಾಯಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.