ಬೆಂಗಳೂರು: ನಿಮ್ಮ ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದಾರೆಯೇ ಅಥವಾ ನಿಮಗೆ ಅರೋಗ್ಯ ಸರಿಯಿಲ್ಲವೇ..ಹಾಗಾದರೆ ಮಾತ್ರ ರಜೆ ತೆಗೊಳ್ಳಿ‌.‌ ಸೂಕ್ತ ಕಾರಣವಿಲ್ಲದೆ ರಜೆ ಕೇಳಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ‌ ಸಿ.ಕೆ.ಬಾಬಾ ಆದೇಶ ಹೊರಡಿಸಿದ್ದಾರೆ. ಇದು ಪೊಲೀಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : MP Renukacharya : ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಪ್ರಕರಣ : ಸ್ನೇಹಿತನ ವಿಚಾರಣೆಗೆ ಮುಂದಾದ ಪೊಲೀಸರು


ತಮ್ಮ ವ್ಯಾಪ್ತಿಯಲ್ಲಿರುವ ಲಿಪಿಕ ಸಿಬ್ಬಂದಿ, ಸಿಬ್ಬಂದಿ ಹಾಗೂ ಅಧಿಕಾರಿ‌ ಮಟ್ಟದ ಪೊಲೀಸರು ಸೂಕ್ತ ಕಾರಣವಿಲ್ಲದೆ ರಜೆ  ತೆಗೆದುಕೊಳ್ಳುವ ಹಾಗಿಲ್ಲ. ಯಾರದ್ರೂ ಮೃತಪಟ್ಟರೆ  ಅಥವಾ ಅನಾರೋಗ್ಯಕ್ಕೆ‌ ಒಳಗಾದಗ ಮಾತ್ರ ರಜೆ ಪಡೆಯಬೇಕು.‌ ಅನಿವಾರ್ಯ ಕಾರಣ ಹೊರತುಪಡಿಸಿ ರಜೆ ಪಡೆದುಕೊಂಡರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು‌.‌ ಆಯಾ ವಿಭಾಗದ ಎಸಿಪಿ ಹಾಗೂ ಇನ್ ಸ್ಪೆಕ್ಟರ್ ಗಳು ರಜೆಗೆ ಅನುಮತಿ ನೀಡಕೂಡದು ಎಂದು ಸಿಕೆ ಬಾಬಾ ಆದೇಶ ಹೊರಡಿಸಿದ್ದಾರೆ.


ಕಚೇರಿಯಲ್ಲಿ ಪದೇ ಪದೇ ಬಂದು ರಜೆ‌ ಬಗ್ಗೆ ಪ್ರಸ್ತಾಪಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಜೆ ಅನಿವಾರ್ಯ ತಮ್ಮ ಅನುಮತಿ‌ಪಡೆದುಕೊಳ್ಳಬೇಕೆಂದು ಡಿಸಿಪಿ ಆದೇಶ ಹೊರಡಿಸಿದ್ದಾರೆ‌. ಡಿಸಿಪಿ ಆದೇಶ ಹೊರಡಿಸುತ್ತಿದ್ದಂತೆ ಕೆಳ ಹಂತದ‌‌ ಪೊಲೀಸ್ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಸಿಪಿ‌ ಸಿ.ಕೆ.ಬಾಬಾ ಕಳೆದ ತಿಂಗಳು 28ರಂದೇ ಆದೇಶ ಹೊರಡಿಸಲಾಗಿತ್ತು. ಈ‌ ಆದೇಶವು ಕೆಳಹಂತದ ಸಿಬ್ಬಂದಿಗೆ‌ ಅನ್ವಯಿಸುವುದಿಲ್ಲ ಎಂದು ಡಿಸಿಪಿ ಸಿಕೆ ಬಾಬಾ ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ : ಯೋಗ್ಯತೆ ಇಲ್ಲದ ಮೇಲೆ ಕುರ್ಚಿಯಿಂದ ಇಳಿಯಿರಿ: ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಗುಡುಗು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.