ಬೆಂಗಳೂರು : ನಡು ರಸ್ತೆಯಲ್ಲಿ ಯುವತಿಗೆ ಲಾಂಗ್ ತೋರಿಸಿ ಸುಲಿಗೆ ಮಾಡಿದ್ದ ವಿಡಿಯೋ ಪೂರ್ವ ವಿಭಾಗ ಪೊಲೀಸರ ನಿದ್ದೆಗೆಡಿಸಿತ್ತು. ವಿಡಿಯೋ ಹಿಂದೆ ಬಿದ್ದಿದ್ದ ಪೊಲೀಸರ ಕೈಗೆ  ನಟೋರಿಯಸ್‌ ಐನಾತಿಯೊಬ್ಬ ಸಿಕ್ಕಿಬಿದ್ದಿದ್ದಾನೆ.‌ ಮೊದಲ ಬಾರಿಗೆ ಇಂತಹ ಚಟುವಟಿಕೆಯಲ್ಲಿ ಆರೋಪಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಊಹಿಸಿದ್ದರು. ಆದರೆ ತನಿಖೆ ವೇಳೆ ಗೊತ್ತಾದ ಸಂಗತಿಗಳು ಪೊಲೀಸರನ್ನೇ ಗಾಬರಿ ಬೀಳಿಸಿದೆ.


COMMERCIAL BREAK
SCROLL TO CONTINUE READING

ಇದೇ ತಿಂಗಳ 15 ನೇ ತಾರೀಖು ಒಂದೇ ತಂಡ ಎಸಗಿದ 2 ಕೃತ್ಯಗಳಿವು. ಪುಲಕೇಶಿನಗರ ಹಾಗೂ ಭಾರತಿ ನಗರದಲ್ಲಿ ಸುಲಿಗೆ ಮಾಡಿ ಎಸ್ಕೇಪ್‌ ಆಗಿದ್ದ ಜಬಿ ಅಲಿಯಾಸ್‌ ಕಾಲು ಹಾಗು ಯಾಸೀನ್‌ ಅಲಿಯಾಸ್‌ ಮಚ್ಚಿ ಯನ್ನ ಸದ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 15 ಲಕ್ಷ ಮೌಲ್ಯದ ಮೂರು ಆಟೋಗಳು ಸೇರಿ 17 ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಜಬಿ ಅಲಿಯಾಸ್‌ ಕಾಲುಗೆ ಕೇವಲ 23 ವರ್ಷ‌. ಚಿಕ್ಕ ವಯಸ್ಸಿನಲ್ಲಿಯೇ ಈತನ ಮೇಲೆ ಕೊಲೆ, ಕೊಲೆ ಯತ್ನ, ಬೆದರಿಕೆ , ಸುಲಿಗೆ ರಾಬರಿ ಸೇರಿದಂತೆ 19 ಪ್ರಕರಣಗಳಿವೆ.


ಇದನ್ನೂ ಓದಿ: President Of JDS Party: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿಸಿಎಂ ಇಬ್ರಾಹಿಂ ಮುಂದುವರಿಕೆ


ಸದ್ಯ ಪುಲಕೇಶಿನಗರ ಹಾಗೂ ಭಾರತಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೃತ್ಯದಲ್ಲಿ ಈತ ಬಂಧಿತನಾಗಿದ್ದಾನೆ. ಕಳೆದ 15 ರಂದು ದಾರಿಯಲ್ಲಿ ಹೋಗುವ ಯುವತಿಗೆ ಲಾಂಗ್‌ ತೋರಿಸಿ  ಪರ್ಸ್‌ ಕಿತ್ತುಕೊಳ್ಳಲು ಪ್ರಯತ್ನಿಸಿದ್ದ. ಅಲ್ಲಿದ್ದ ಸ್ಥಳೀಯ ಮಹಿಳೆಯಿಂದ ಆ ಯುವತಿ ಬಚಾವಾಗಿದ್ದಳು. ನಂತರ ಅದೇ ದಿನ ಆಟೋದಲ್ಲಿ ಕುಳಿತು ತನ್ನ ಸ್ನೇಹಿತ ಯಾಸೀನ್‌ ಜೊತೆ ನೇರವಾಗಿ ಭಾರತಿನಗರಕ್ಕೆ ಬಂದಿದ್ದ ಆರೋಪಿ ಆಟೋ ಚಾಲಕನನ್ನ ಅಡ್ಡ ಹಾಕಿ ಅವನ ಬಳಿ ದುಡ್ಡು ಕಿತ್ತು ಆಟೋ ಸಮೇತ ಎಸ್ಕೇಪ್ ಆಗಿದ್ದರು.


ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಎರಡು ಠಾಣೆಯ ಪೊಲೀಸರು  ಅಲರ್ಟ್‌ ಆಗಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.  ಮೊದಲು ಪುಲಿಕೇಶಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದರೂ ಸಹ ಭಾರತಿನಗರ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದರು. ಇನ್ನು ಆರೋಪಿ ಜಬಿ ಈ ಹಿಂದೆ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದ. ಕಳೆದ ಫೆಬ್ರುವರಿಯಲ್ಲಿ ಜೈಲಿನಿಂದ ಹೊರ ಬಂದು ಮತ್ತೆ ಹತ್ತಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಕೃತ್ಯಕ್ಕೆ ಮುನ್ನ ಮದ್ಯಪಾನ ಮಾಡಿ ನಂತರ ಲಾಂಗ್‌ ಇಟ್ಟು ಏರಿಯಾ ರೌಂಡ್ಸ್‌ ಹೊಡೆಯುತ್ತಾ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ