ಬೈಕ್ ಕಳ್ಳತನದ ದೂರು ದಾಖಲಿಸಿಕೊಳ್ಳು ಪೊಲೀಸರ ಹಿಂದೇಟು : ಕಮಿಷನರ್ ಎಚ್ಚರಿಕೆ
ಕಳ್ಳತನವಾದ ಬೈಕ್ ಪತ್ತೆಹಚ್ಚುವಂತೆ ಬೈಕ್ ಮಾಲೀಕ ದೂರು ನೀಡಿದರೂ ಸಹ ಎಫ್ಐಆರ್ ದಾಖಲಿಸದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಟ್ವಿಟರ್ ನಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಕಳುವಾದ ಬೈಕ್ ಬಗ್ಗೆ
ಬೆಂಗಳೂರು : ಕಳ್ಳತನವಾದ ಬೈಕ್ ಪತ್ತೆಹಚ್ಚುವಂತೆ ಬೈಕ್ ಮಾಲೀಕ ದೂರು ನೀಡಿದರೂ ಸಹ ಎಫ್ಐಆರ್ ದಾಖಲಿಸದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಟ್ವಿಟರ್ ನಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಕಳುವಾದ ಬೈಕ್ ಬಗ್ಗೆ
ಸಿಸಿಟಿವಿ ಸಮೇತ ದೂರು ನೀಡಲು ಹೋದರೆ ನಾಳೆ ಬಾ ಪೊಲೀಸರು ಉದಾಸೀನ ತೋರಿದ್ದಾರಂತೆ.
ಆದರೀಗಾ ಅದೇ ಕದ್ದ ಬೈಕಲ್ಲಿ ಕಳ್ಳ ಮೊಬೈಲ್ ಎಗರಿಸಿದ್ದಾನೆ. ಜನವರಿ 19 ರಂದು ಅನ್ನಪೂರ್ಣೇಶ್ವರಿ ನಗರದಲ್ಲಿ ರವಿ ತಮ್ಮ ಬೈಕ್ ಕಳೆದುಕೊಂಡಿದ್ದರಂತೆ. ಈ ಬಗ್ಗೆ ದೂರು ನೀಡಲು ಅನ್ನಪೂರ್ಣೇಶ್ವರಿ ನಗರ ಹೋದಾಗ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ.ದೂರು ದಾಖಲಿಸದೆ ನಾಳೆ ಬರುವಂತೆ ದಿನದೂಡುತ್ತಿದ್ದರಂತೆ.
ಈ ನಡುವೆ ಕಳುವಾದ ಬೈಕ್ ನಲ್ಲಿ ಕಳ್ಳ ವಿವಿಪುರಂನಲ್ಲಿ ಮೊಬೈಲ್ ಎಗರಿಸಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: Yadugiri Yathiraj Mutt : ಯದುಗಿರಿ ಯತಿರಾಜ ಮಠದ ಸ್ವಾಮೀಜಿಗಳಿಗೆ 'ವೈ ಕ್ಯಾಟಗಿರಿ' ಭದ್ರತೆ!
ವಿವಿಪುರಂ ಪೊಲೀಸರು ತನಿಖೆ ನಡೆಸಿ ಬೈಕ್ ನ ನಂಬರ್ ಆದರಿಸಿ ಬೈಕ್ ಮಾಲೀಕನನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ರವಿಯನ್ನೇ ಶಂಕಿಸಿ ವಿಚಾರಣೆ ನಡೆಸಿದ್ದಾರೆ. ಸದ್ಯ ನ್ಯಾಯಕ್ಕಾಗಿ ಬೇಡಿಕೆ ಇಟ್ಟಿರುವ ರವಿ ಬೆಂಗಳೂರು ಪೊಲೀಸರ ಸಾಮಾಜಿಕ ಜಾಲತಾಣದಲ್ಲಿ ಸಂಕ್ಷಿಪ್ತವಾಗಿ ಚೇತನ್ ಸೂರ್ಯ ಎಂಬ ಸಂಘಟಕ ದೂರು ನೀಡಿದ್ದಾರೆ. ಇತ್ತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಕಮಿಷನರ್ ಪ್ರತಾಪ್ ರೆಡ್ಡಿ ಗರಂ ಆಗಿದ್ದು, ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.