ಬೆಂಗಳೂರು : ಆತನಿಗೆ ಜೀವನದಲ್ಲಿ ಏನನ್ನಾದರು ಸಾಧಿಸಬೇಕು ಅನ್ನೋ ಛಲ ಇತ್ತು. ಅದಕ್ಕಾಗಿ ಹಗಲು ರಾತ್ರಿ ಕಷ್ಟ ಪಡ್ತಿದ್ದ. ಅವಕಾಶ ಸಿಕ್ಕಾಗಲೆಲ್ಲ ಸಂಗೀತ ಕಾರ್ಯಕ್ರಮ ನೀಡ್ತಿದ್ದ. ಜೊತೆಗೆ ಬೆಸ್ಕಾಂ ನಲ್ಲೂ ಕೆಲಸ ಮಾಡ್ತಿದ್ದ‌. 9 ತಿಂಗಳ‌ಹಿಂದಷ್ಟೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ಆದರೆ BWSSB ನಿರ್ಲಕ್ಷ್ಯ ಆತನ ಜೀವವನ್ನೇ ತೆಗೆದಿದೆ. ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದು, ಮಗು ಭೂಮಿಗೆ ಕಾಲಿಡೊ‌ ಮೊದಲೇ ತಂದೆ ಸಾವಿನ ಮನೆ ಸೇರಿದ್ದಾನೆ.


COMMERCIAL BREAK
SCROLL TO CONTINUE READING

ನಗು ಮೊಗದ ವ್ಯಕ್ತಿ. ಜೀವನದಲ್ಲಿ ಏನನ್ನಾದರು ಸಾಧಿಸಲೇಬೇಕು ಅನ್ನೋ ಛಲ. ಪತ್ನಿಗೆ ತಕ್ಕ ಪತಿ. ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದ ಹಾಡುಗಾರ. ಇಂಡಿಯನ್ ಫೋಕ್ ಬ್ಯಾಂಡ್ ನಲ್ಲಿ ಮಿಂಚಿದ್ದ ಮ್ಯೂಸಿಷಿಯನ್. ಕರ್ನಾಟಕದ ಮೂಲೆ ಮೂಲೆಯಲ್ಲೂ ಸಂಗೀತ ಕಾರ್ಯಕ್ರಮ ನೀಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಬಿಬಿಎಂಪಿ ಮತ್ತು ಬಿಡಬ್ಲ್ಯೂ ಎಸ್ ಎಸ್ ಬಿ ನಿರ್ಲಕ್ಷ್ಯಕ್ಕೆ ಪ್ರಾಣ ಚೆಲ್ಲಿದ್ದಾನೆ..


ಇದನ್ನೂ ಓದಿ:ʼಮಾಡಾಳ್‌ ಲೋಕಾಯುಕ್ತ ದಾಳಿʼ... 18 ಗಂಟೆ ಶೋಧ, 8.12 ಕೋಟಿ ಹಣ ಸೀಜ್..!


ಹೌದು.. ಫೋಟೋದಲ್ಲಿ ಕಾಣ್ತಿರುವ ವ್ಯಕ್ತಿ ಹೆಸರು ವಿವೇಕ್ ಧರ್ಮಣ್ಣ. ಮೂಲತಃ ಹಾಸನ ಜಿಲ್ಲೆ ಅರಸೀಕೆರೆಯ ಹಾರನಹಳ್ಳಿ ನಿವಾಸಿ. ಬೆಂಗಳೂರಿನ ಗಿರಿನಗರದಲ್ಲಿ ಬಂದು ಜೀವನ ಕಟ್ಟಿಕೊಂಡಿದ್ರು. ಹಾಡು, ಮ್ಯೂಸಿಕ್ ಉಸಿರಾಗಿದ್ರು ಜೀವನದ ಬಂಡಿ ಸಾಗಿಸಲು ಒಂದು ವರ್ಷದ ಹಿಂದೆ ಬೆಸ್ಕಾಂ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಮೀಟರ್ ರೀಡರ್ ಆಗಿ ಕಾರ್ಯನಿರ್ವಹಿಸಿದ್ದ. ಆದ್ರೆ ಬಿಬಿಎಂಪಿ ಮತ್ತು ಬಿಡಬ್ಲ್ಯೂ ಎಸ್ ಎಸ್ ಬಿ ಆತನ ಪ್ರಾಣ ತೆಗೆದಿದೆ. ಆಗಿದ್ದೇನಂದ್ರೆ ಇಂದು ಮಧ್ಯಾಹ್ನ 1 ಗಂಟೆ ಸಮಯ. ಮಾರತ್ತಹಳ್ಳಿ ಸಮೀಪದ ಪಣತ್ತೂರು ದಿಣ್ಣೆ ಬಳಿ ಡಿಯೋ ಬೈಕ್ ನಲ್ಲಿ ಬರ್ತಿದ್ದ. ಈ ವೇಳೆ ರಸ್ತೆಯಿಂದ ಎತ್ತರದಲ್ಲಿರುವ ಚೇಂಬರ್ ಸ್ಲ್ಯಾಬ್ ಕಾಣದೇ ಮೇಲೆ ಬೈಕ್ ಬಿಟ್ಟಿದ್ದಾನೆ. ಬೈಕ್ ನಿಯಂತ್ರಣಕ್ಕೆ ಸಿಗದೇ ಕಾಡಿನೊಳಗೆ ನುಗ್ಗಿದೆ. ಸುಮಾರು 120 ಮೀಟರ್ ಮುಂದೆ ಹೋಗಿ ಮರಕ್ಕೆ ತಲೆ ಡಿಕ್ಕಿಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.


ಇನ್ನೂ ಸ್ಲ್ಯಾಬ್ ಸರಿಪಡಿಸುವಂತೆ ಬಿಬಿಎಂಪಿ ಮತ್ತು BWSSB ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಇದೇ ಸ್ಲ್ಯಾಬ್ ನಿಂದ ಇದುವರೆಗೆ ನಾಲ್ಕೈದು ಜನರಿಗೆ ಅಪಘಾತವಾಗಿದೆ‌‌. ಆದರೂ ಸರಿ ಪಡಿಸದೇ ನಿರ್ಲಕ್ಷ್ಯ ವಹಿಸಿದ್ದು, ಇವತ್ತು ಒಂದು ಪ್ರಾಣವನ್ನೇ ಬಲಿ ಪಡೆದುಕೊಂಡಿದ್ದಾರೆ. ಇನ್ನೂ ವಿವೇಕ್ ಇಂಡಿಯನ್ ಫೋಕ್  ಬ್ಯಾಂಡ್ ನಲ್ಲಿ ಕೆಲಸ ಮಾಡ್ತಿದ್ದು ಜಪಾನ್, ಅಬುಧಬಿ, ದೆಹಲಿ, ದುಬೈ, ಕರ್ನಾಟಕದ ಮೂಲೆ ಮೂಲೆ ಸೇರಿದಂತೆ ಹಲವೆಡೆ ಸಂಗೀತ ಕಾರ್ಯಕ್ರಮ ನೀಡಿದ್ದಾನೆ. ಅಲ್ಲದೇ ಕನ್ನಡದ ಹಲವು ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿದ್ದಾ‌‌ನೆ. 


ಇದನ್ನೂ ಓದಿ:ಹಾಲು ಬಿಸಿ ಮಾಡಲು ಹೋದಾಗ ಸಿಲಿಂಡರ್ ಸ್ಪೋಟ : 13 ಮಂದಿಗೆ ಗಾಯ


ವಿಪರ್ಯಾಸ ಅಂದ್ರೆ ವಿವೇಕ್ ಒಂಭತ್ತು ತಿಂಗಳ ಹಿಂದಷ್ಟೇ ವಿವಾಹವಾಗಿದ್ದು ಪತ್ನಿ ಆರು ತಿಂಗಳ ಗರ್ಭಿಣಿ ಮಗು ಭೂಮಿ ನೋಡೋ ಮೊದಲೆ ತಂದೆ ಮೃತ ಪಟ್ಟಿರೋದು ನಿಜಕ್ಕೂ ಎಂತಹವರ ಕಣ್ಣಲ್ಲೂ ನೀರು ತರಿಸುತ್ತೆ. ಇನ್ನೂ ಘಟನೆ ಸಂಬಂಧ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಏನೇ ಹೇಳಿ ಬದುಕಿನ ಬಗ್ಗೆ ಕನಸು ಕಂಡವನು.ಮಗುವನ್ನು ಎತ್ತಿ ಮುದ್ದಾಡಿಸಬೇಕೆಂಬ ಆಸೆ ಹೊಂದಿದ್ದವನು.ಹೀಗೆ ತನ್ನದಲ್ಲಿದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದು ನಿಜಕ್ಕುಹ ದುರಂತ.ಮತ್ತೊಂದು ಸಾವು ಆಗೋ ಮುನ್ನ ಬಿಬಿಎಂಪಿ ಮತ್ತು ಬಿಡಬ್ಲ್ಯೂ ಎಸ್ ಎಸ್ ಬಿ ಎಚ್ಚೆತ್ತುಕೊಳ್ಳಬೇಕಿದೆ..https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.