Special train service on May 6 : ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನ ವೇಳೆ ರಾಜ್ಯದ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ. 


COMMERCIAL BREAK
SCROLL TO CONTINUE READING

ವಿಶೇಷ ರೈಲು ಮೇ 6ರಂದು ರಾತ್ರಿ 9.55ಕ್ಕೆ ಬೆಂಗಳೂರಿನಿಂದ ಹೊರಟು ತುಮಕೂರು- ಅರಸೀಕೆರೆ-ದಾವಣಗೆರೆ- ಹಾವೇರಿ ಮಾರ್ಗವಾಗಿ ಹುಬ್ಬಳ್ಳಿ-ಧಾರವಾಡಕ್ಕೆ ಬೆಳಗ್ಗೆ 5 ಗಂಟೆಗೆ ತಲುಪಲಿದೆ. ನಂತರ ಇಲ್ಲಿಂದ ಗೋಕಾಕ- ಘಟಪ್ರಭಾ-ರಾಯಭಾಗ- ಕುಡಚಿ ಮಾರ್ಗವಾಗಿ ಬೆಳಗ್ಗೆ 10:30ಕ್ಕೆ ಬೆಳಗಾವಿ ತಲುಪಲಿದೆ.


ಇದನ್ನು ಓದಿ : ನಿಸ್ವಾರ್ಥ ತಾಯಂದಿರ ಕಲ್ಪನೆಯನ್ನು ವೈಭವೀಕರಿಸುವ 5 ಭಾರತೀಯ ಸಿನಿಮಾಗಳು !!


ಕರ್ನಾಟಕದಲ್ಲಿ ಎರಡನೇ ಹಂತದ ಮತದಾನದ ವೇಳೆ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಹಾಗೂ ರಾಜ್ಯದ ಗಡಿ ಜಿಲ್ಲೆ ಬೆಳಗಾವಿ ಭಾಗದಲ್ಲಿ ಮತದಾನದ ಹಕ್ಕಿದ್ದು, ಕೆಲಸದ ನಿಮಿತ್ತ ಬೇರೆ ನಗರಗಳಲ್ಲಿ ಇರುವವರಿಗೆ ಪ್ರಯಾಣಿಸಲು ಈ ವಿಶೇಷ ರೈಲು ಸಂಚಾರದಿಂದ ಅನುಕೂಲವಾಗಲಿದೆ.


ಇದನ್ನು ಓದಿ : IPL 2024 : ಆಲೌಟ್ ಆಗಿ RCBಗೆ 148 ಗೆಲುವಿನ ಗುರಿ ನೀಡಿದ ಗುಜರಾತ್ ಟೈಟಾನ್ಸ್


ಯಾರೊಬ್ಬರೂ ಮತದಾನ ಪ್ರಕ್ರಿಯೆಯಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಹಾಗೂ ಹೆಚ್ಚಿನ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಈ ವಿಶೇಷ ರೈಲು ಸಂಚಾರಕ್ಕೆ ಕ್ರಮ ಕೈಗೊಂಡಿದ್ದು, ಜನತೆ ಇದರ ಸದುಪಯೋಗ ಪಡೆದು ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದೆ ರೈಲ್ವೆ ಇಲಾಖೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.