ಬೆಂಗಳೂರು: ಇವತ್ತು ಭಾನುವಾರ ಅಂತಾ ಬೇಕಾಬಿಟ್ಟಿ ರೂಲ್ಸ್ ಬ್ರೇಕ್ ಮಾಡಿ ಬೈಕ್ ಚಲಾಯಿಸುತ್ತಿದ್ದವರಿಗೆ ಯಮಧರ್ಮರಾಯ ಶಾಕ್ ಕೊಟ್ಟಿದ್ದಾನೆ. ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಯಮ ಧರ್ಮರಾಯ ಕಾಣಿಸಿಕೊಂಡಿದ್ದು, ಸಂಚಾರಿ ನಿಯಮ ಪಾಲಿಸದ ಸವಾರರ ಮೇಲೆ ಯಮರಾಜ ಕಿಡಿ ಕಾರಿದ್ದಾನೆ.


COMMERCIAL BREAK
SCROLL TO CONTINUE READING

ಹೆಲ್ಮೆಟ್ ಹಾಕದ ಸವಾರನೊಬ್ಬ ಎಷ್ಟು ಬಾರಿ ನಿಯಮ ಉಲ್ಲಂಘಿಸಿದ್ದಾನೆ ಅಂತಾ ಚಿತ್ರಗುಪ್ತನಿಗೆ ಯಮರಾಜ ಪ್ರಶ್ನೆ ಮಾಡಿದ್ದಾನೆ. ರಿಜಿಸ್ಟರ್ ತೆಗೆದು 20 ಬಾರಿ ನಿಯಮ ಉಲ್ಲಂಘಿಸಿದ್ದಾರೆ ಅಂತ ಚಿತ್ರಗುಪ್ತ ಉತ್ತರಿಸಿದ್ದಾನೆ. ಇದಕ್ಕೆ ಸಿಟ್ಟಾದ ಯಮರಾಜ ನಿಮ್ಮ ಮನೆಯಲ್ಲಿ ನಿಮಗಾಗಿ ಕಾಯುತ್ತಿಲ್ಲವೇ, ಶಿರಸ್ತ್ರಾಣ ಯಾಕೆ ಧರಿಸಿಲ್ಲ ಅಂತಾ ತರಾಟೆಗೆ ತೆಗೆದುಕೊಂಡಿದ್ದಾನೆ.


ಇದನ್ನೂ ಓದಿ:ಉಗ್ರರಿಗೆ ಕರ್ನಾಟಕವನ್ನು ಸ್ವರ್ಗವನ್ನಾಗಿಸುತ್ತಿರುವ ಕಾಂಗ್ರೆಸ್: ಬಿಜೆಪಿ ಗಂಭೀರ ಆರೋಪ


ಹೀಗೆ ವಿಭಿನ್ನ ರೀತಿಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನ ಉಪ್ಪಾರಪೇಟೆ ಸಂಚಾರ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಆಯೋಜನೆ ಮಾಡಿದ್ರು. ಸಂಚಾರ ನಿಯಮ ಪಾಲಿಸದ ಸವಾರರಿಗೆ ಗುಲಾಬಿ ಹೂ ನೀಡಿ ಯಮರಾಜನಿಂದ ವಾರ್ನಿಂಗ್ ಮಾಡಿಸಿ ನಿಮಯಗಳ ಬಗ್ಗೆ ಅರಿವು ಮೂಡಿಸಿದ್ರು. ಮುಖ್ಯವಾಗಿ ಹಾಫ್ ಹೆಲ್ಮೆಟ್ ಧರಿಸಿದವರಿಗೂ ಅಪಾಯ ಆಗುತ್ತೆ, ಇದರಿಂದ ಫುಲ್ ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದ್ರು. ಯಮರಾಜ ರಸ್ತೆಯಲ್ಲಿ ಇರೊವಾಗ್ಲೇ ಫೋನ್ ನಲ್ಲಿ ಮಾತನಾಡುತ್ತಿದ್ದ ಸವಾರನಿಗೆ ಯಮರಾಜ ಕ್ಲಾಸ್ ತೆಗೆದುಕೊಂಡಿದ್ದಾನೆ‌.


ವಾಹನ ಚಲಾಯಿಸುವಾಗ ನೀನು ಕರೆ ಮಾಡಿದ್ರೆ ಯಮಲೋಕಕ್ಕೆ ಕನೆಕ್ಟ್ ಆಗುತ್ತೆ ಅಂತಾ ಎಚ್ಚರಿಕೆ ನೀಡಿದ್ದಾನೆ. ಯಮ ಹಾಗೂ‌ ಚಿತ್ರಗುಪ್ತರ ವೇಶದಲ್ಲಿ ರಂಗಭೂಮಿ ಕಲಾವಿದರಾದ ನಾಗೇಂದ್ರ, ರಂಗನಾಥ್ ರಸ್ತೆಯಲ್ಲಿ ನಿಂತು ಸಂಚಾರಿ ನಿಯಮ ಉಲ್ಲಂಘಿಸಿದರೆ ಯಮಪುರಿಯ ದಾರಿ ಕಾಣಿಸುತ್ತೆ ಎಂದು ಎಚ್ಚರಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.