ಹುಬ್ಬಳ್ಳಿ: ಪ್ರಹ್ಲಾದ ಜೋಶಿ ಯಾವತ್ತೂ ಲಿಂಗಾಯತ ಪರ ಗಟ್ಟಿ ನಿಂತಿದ್ದಾರೆ. ಅಪಪ್ರಚಾರಕ್ಕೆಲ್ಲ ಕಿವಿಗೊಡಬೇಡಿ ಎಂದು ಮಾಜಿ ಸಚಿವ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಲಿಂಗಾಯತ ವೀರಶೈವ ಸಮುದಾಯಕ್ಕೆ ಕರೆ ನೀಡಿದರು. ಧಾರವಾಡದ ಮೊರಬದಲ್ಲಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರ ರೋಡ್ ಶೋ, ಮತಯಾಚನೆ ನಡೆಸಿ ಮಾತನಾಡಿದರು.


COMMERCIAL BREAK
SCROLL TO CONTINUE READING

ಕರ್ನಾಟಕದಲ್ಲಿ ಹಿಂದೆ ರಾಮಕೃಷ್ಣ ಹೆಗಡೆ, ಅನಂತ ಕುಮಾರ್ ಈಗ ಪ್ರಲ್ಹಾದ ಜೋಶಿ ಅವರು ಲಿಂಗಾಯತರ ಪರ ಗಟ್ಟಿಯಾಗಿ ನಿಂತವರಾಗಿದ್ದಾರೆ. ಕೆಲವರು ಏನೇನೋ ಅಪಪ್ರಚಾರ ಮಾಡುತ್ತಾರೆ. ಅಂಥದ್ದಕ್ಕೆ ಲಿಂಗಾಯತ, ವೀರಶೈವ ಸಮಾಜದವರು ಕಿವಿಗೊಡಬಾರದು ಎಂದು ಹೇಳಿದರು.


ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬೊಮ್ಮಾಯಿ ಅವರ ಅವಧಿಯಲ್ಲಿ ನಡೆದ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ವೇಳೆ ಕೇಂದ್ರದ ಮಟ್ಟದಲ್ಲಿ ಸಚಿವ ಪ್ರಲ್ಹಾದ ಜೋಶಿ ಸಹ ಪ್ರಯತ್ನ ನಡೆಸಿದರು. ಅದರ ಪರಿಣಾಮ ಕೊನೆಗೆ 2ಡಿ ಸೃಷ್ಟಿಸಿ ಅವಕಾಶ ಕಲ್ಪಿಸಲು ಕೇಂದ್ರದ ವರಿಷ್ಠರು ಸಮ್ಮತಿಸಿದ್ದರು ಎಂದು ಯತ್ನಾಳ್ ಹೇಳಿದರು.


ಇದನ್ನೂ ಓದಿ: ನಾಳೆ ನಮ್ಮ ಮೆಟ್ರೋ ಸಂಚಾರ ಬೆಳಗ್ಗೆ 3.35 ರಿಂದಲೇ ಆರಂಭ: ಬೆಂಗಳೂರಿನಲ್ಲಿ TCS ವರ್ಲ್ಡ್ ಮ್ಯಾರಥಾನ್! 


ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಾರ್ಟಿ ಲಿಂಗಾಯತರ ಪ್ರಬಲ ವಿರೋಧಿ: ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಾರ್ಟಿ ಲಿಂಗಾಯತರ ಪ್ರಬಲ ವಿರೋಧಿ. ಬೆಳಗಾವಿ ಅಧಿವೇಶನದಲ್ಲಿ ಲಿಂಗಾಯತ ಮೀಸಲಾತಿ ಬಗ್ಗೆ ಚರ್ಚಿಸಲು ಅವಕಾಶ ಕೊಡಲೇ ಇಲ್ಲ ಇವರು ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು.


ಸಿಎಂ ಭೇಟಿಗೂ ಸಿಗಲಿಲ್ಲ: ಪ್ರವರ್ಗ 2ಡಿ ಬಗ್ಗೆ ಮಾತನಾಡಲು ಸಿಎಂ ಭೇಟಿಗೆ ಸಮಯ ಕೇಳಿದರೆ ಕೊನೆಗೂ ಕೊಡಲಿಲ್ಲ ಎಂದ ಯತ್ನಾಳ್, ಕಾಂಗ್ರೆಸ್ ಪಕ್ಷ ಮತ್ತು ಸಿಎಂ ಲಿಂಗಾಯತ ವಿರೋಧಿ ಆಗಿದ್ದಾರೆ. ಅವಕಾಶ ಸಿಗಲ್ಲ ಬಿಡಿ ಎಂದು ಆ ಪಕ್ಷದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ನನಗೆ ಹೇಳಿದ್ರು ಎಂದೂ ತಿಳಿಸಿದರು.


ಕಿತ್ತೂರು ಚೆನ್ನಮ್ಮ ಪ್ರತಿಮೆ ಮುಂದೆ ಆಣೆ ಮಾಡುವೆ: ಸಿಎಂ ಸಿದ್ದರಾಮಯ್ಯ ಮತ್ತು ತಮ್ಮ ಪಕ್ಷ ಲಿಂಗಾಯತ ವಿರೋಧಿ ಎಂಬುದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ ಬಗ್ಗೆ ಬೇಕಿದ್ದರೆ ಕಿತ್ತುರಾಣಿ ಚೆನ್ನಮ್ಮ ಪುತ್ಥಳಿ ಮುಂದೆ ಪ್ರಮಾಣ ಮಾಡಿ ಹೇಳುತ್ತೇನೆ ಎಂದೂ ಯತ್ನಾಳ್ ಸವಾಲು ಹಾಕಿದರು.


ಇದನ್ನೂ ಓದಿ: "ನರೇಂದ್ರ ಮೋದಿಯವರು 2014ರ ನೀಡಿದ್ದ ಭರವಸೆಗಳನ್ನು ನೆನೆಸಿಕೊಳ್ಳಬೇಕು"


ಪಂಚಮಸಾಲಿ ಸಿಎಂ ನಿರ್ಣಯ: ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮಾಜದ ನಾಯಕರನ್ನು ಸಿಎಂ ಮಾಡುವ ನಿರ್ಣಯ ಆಗುತ್ತದೆ. ಆ ಕಾಲ ಬರುತ್ತದೆ ಸ್ವಲ್ಪ ಕಾಯಿರಿ ಎಂದು ಯತ್ನಾಳ್ ಸೂಚ್ಯವಾಗಿ ಹೇಳಿದರು.


2ಡಿಯಲ್ಲಿ ಶೇ.7 ಮೀಸಲಿದೆ: ಬಿಜೆಪಿ ಸರ್ಕಾರ ಇದ್ದಾಗ ಯಾರಿಗೂ ಅನ್ಯಾಯ ಆಗದಂತೆ ವರ್ಗೀಕರಣ ಮಾಡಿತ್ತು. 2ಡಿ ಸೃಷ್ಟಿಸಿ ಅದರಲ್ಲಿ ವೀರಶೈವ, ಪಂಚಮಸಾಲಿ ಲಿಂಗಾಯತ ಎಂದು ಸ್ಪಷ್ಟವಾಗಿ ಬರೆದಿದೆ. ಶೇ.7ರಷ್ಟು ಮೀಸಲಾತಿ ಕಲ್ಪಿಸಿದ್ದಾಗಿ ಹೇಳಿದರು.


ಮುಸ್ಲಿಂರಿಗೆ 2ಎ, 2ಬಿ ಅಲ್ಲದೇ, ಪ್ರವರ್ಗ 1 ರಲ್ಲಿ ಶೇ.10ರಷ್ಟು ಮೀಸಲಾತಿ ಇತ್ತು. ಆದರೆ, ಪಂಚಮಸಾಲಿ, ಒಕ್ಕಲಿಗ, ಜಂಗಮ, ಬಣಜಿಗರಲ್ಲಿಯೂ ಬಡವರಿದ್ದಾರೆ. ಹಾಗಾಗಿ ಯಾರಿಗೂ ಅನ್ಯಾಯವಾಗದಂತೆ ಬೊಮ್ಮಾಯಿ ಸಿಎಂ ಆಗಿದ್ದಾಗ ಮೀಸಲಾತಿ ಹಂಚಿಕೆ ಮಾಡಲಾಗಿತ್ತು ಎಂದರು.


ದಲಿತರ ಮೀಸಲಾತಿ ಕಿತ್ತು ಮುಸ್ಲಿಂರಿಗೆ ಕೊಡಲು ಹೊರಟಿದ್ದಾರೆ ಸಿಎಂ: ಈಗ ಸಿಎಂ ಸಿದ್ದರಾಮಯ್ಯ ಒಬಿಸಿ ದಲಿತರ ಮೀಸಲಾತಿ ಕಿತ್ತು ಮುಸ್ಲಿಂರಿಗೆ ಕೊಡಲು ಹೊರಟಿದ್ದಾರೆ ಎಂದು ಯತ್ನಾಳ್ ಕಿಡಿ ಕಾರಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.