ಹುಬ್ಬಳ್ಳಿ: ರಾಜ್ಯ ಪೊಲೀಸರ ಮೇಲೆ ರಾಜಕೀಯ ಪ್ರಭಾವ ಹೆಚ್ಚಾಗುತ್ತಿದ್ದು, ಪೊಲೀಸರು ಅಸಹಾಯಕರಾಗುತ್ತಿದ್ದಾರೆ. ಹೀಗಾಗಿ ನೇಹಾ ಹಿರೇಮಠ ‌ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Former Chief Minister Basavaraja Bommai) ಆಗ್ರಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಹನುಮ ಜಯಂತಿ (Hanuma Jayanti) ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಅಶೋಕ‌ನಗರದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಣ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Former Chief Minister Basavaraja Bommai)   ಅವರು, ನೇಹಾ ತಂದೆ ನಿರಂಜನ‌ ಹಿರೇಮಠ (Niranjan Hiremath) ಅವರು ರಾಜ್ಯ ಸರ್ಕಾರದ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ. ಹೀಗಾಗಿ ಪ್ರಕರಣ ಸಿಬಿಐಗೆ ಹಸ್ತಾಂತರ ಮಾಡಬೇಕು ಎಂದು ಒತ್ತಾಯಿಸಿದರು. 


ಇದನ್ನೂ ಓದಿ- ʼಮಗಳ ಸಾವಿʼಗೆ ನ್ಯಾಯ ಕೊಡಿಸುವಂತೆ ಪ್ರಹ್ಲಾದ ಜೋಶಿ ಸಹಾಯ ಕೇಳಿದ ʼಕಾಂಗ್ರೆಸ್‌ʼ ಕಾರ್ಪೋರೇಟರ್‌.!


ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವೇ ಇಲ್ಲ!
ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಸೆಂಟರ್ ಆಗಿವೆ. ರಾಜಕಾರಣಿಗಳು ಪೊಲೀಸರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಪೊಲಿಸರು  ಅಸಹಾಯಕರಾಗುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲದಂತಾಗಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು. 


ಇದನ್ನೂ ಓದಿ- ನೇಹಾ ಸಾವಿಗೆ ಆಕ್ರೋಶ ಹೊರ ಹಾಕಿದ ಆಂಜನೇಯ ಭಕ್ತ ಧ್ರುವ ಸರ್ಜಾ..! ಕ್ರೂರಿಗೆ ತಕ್ಕ ಶಿಕ್ಷೆಯಾಗಬೇಕು ಎಂದ ನಟ


ಬಿಜೆಪಿಯವರಿಗೆ ಹಿಂದುಗಳ ಕೊಲೆಯಾಗದೆ ಖುಷಿ ಎಂಬ ಸಚಿವ ಸಂತೋಷ ಲಾಡ್ (Minister Santosh Lad) ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ್ ಬೊಮ್ಮಾಯಿ, ನೇಹಾ ಹಿರಮೇಠ ಅವರನ್ನು ಒಂದು ಜಾತಿಗೆ ಸಿಮೀತ, ಮಾಡಬೇಡಿ. ಕಾಂಗ್ರೆಸ್ ಪಾಲಿಕೆ ಸದಸ್ಯರಿಗೆ ರಕ್ಷಣೆ ಕೊಡಲು ಆಗಿಲ್ಲ. ಹಾಡ ಹಗಲೇ ಬೆಳೆದು ಬಾಳಬೇಕಾದ ಯುವತಿಯ ಕೊಲೆ ಆಗಿದೆ. ಕಾಂಗ್ರೆಸ್ ನವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು.


ಕೆಪಿ ನಂಜುಡಿ ರಾಜೀನಾಮೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಚುನಾವಣೆ ಸಮಯದಲ್ಲಿ ಅವರ ರಾಜೀನಾಮೆ ಯಾವುದೇ ಪರಿಣಾಮ ಬೀರುವುದಿಲ್ಲ ಅವರು ಕಾಂಗ್ರೆಸ್ ‌ನಲ್ಲಿದ್ರು ಬಿಜೆಪಿಗೆ ಬಂದಿದ್ದರು.. ಹೀಗಾಗಿ ರಾಜೀನಾಮೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.